ಉತ್ತರಖಂಡ(ಜು.02): ಉತ್ತರಖಂಡ ಸರ್ಕಾರದಲ್ಲಿ ರಾಜಕೀಯ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ತಿಂಗಳಿಗೆ ಉತ್ತರಖಂಡ ಮುಖ್ಯಮಂತ್ರಿ ತೀರ್ಥ ಸಿಂಗ್ ರಾವತ್ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಗೆ ರಾವತ್ ರಾಜೀನಾಮೆ ಪತ್ರ ರವಾನಿಸಿದ್ದಾರೆ.
'ಕುಂಭ ಮೇಳ ಹರಿವ ನೀರಲ್ಲಿ ನಡೆಯುತ್ತೆ, ಕೊರೋನಾ ಬರಲ್ಲ!
undefined
ಸಾಂವಿಧಾನಿಕ ಬಿಕ್ಕಟ್ಟು ತಪ್ಪಿಸಲು ತೀರ್ಥ ಸಿಂಗ್ ರಾವತ್ ರಾಜೀನಾಮೆ ನೀಡಿದ್ದಾರೆ. 6 ತಿಂಗಳಲ್ಲಿ ಶಾಸಕನಾಗಿ ಆಯ್ಕೆಯಾಗಲು ಸಾಧ್ಯವಾಗದ ಹಿನ್ನಲೆಯಲ್ಲಿ ಈ ರಾಜಕೀಯ ಬೆಳವಣಿಗೆ ನಡೆದಿದೆ. ಜನ ಪ್ರತಿನಿಧಿ ಕಾಯ್ದೆ ಪ್ರಕಾರ ವಿಧಾನಸಭಾ ಚುನಾವಣೆಗೆ 6 ತಿಂಗಳ ಮುಂಚೆ ಉಪ ಚುನಾವಣೆ ನಡೆಸುವಂತಿಲ್ಲ . ಹೀಗಾಗಿ ನೇಮಕ ಗೊಂಡ 3 ತಿಂಗಳಲ್ಲೇ ಸಿಎಂ ಸ್ಥಾನ ತ್ಯಜಿಸಬೇಕಾಗಿ ಬಂದಿದೆ. 2001 ರ ಸುಪ್ರೀಂ ತೀರ್ಪಿನ ಪ್ರಕಾರ 6 ತಿಂಗಳ ನಿಯಮ ಉಪಯೋಗಿಸಲು ಮುಖ್ಯಮಂತ್ರಿ ಇವತ್ತು ರಾಜೀನಾಮೆ ನೀಡಿ ಮರಳಿ ನಾಳೆ ಶಪಥ ಸ್ವೀಕರಿಸುವುದು ಸಂವಿಧಾನ ಬಾಹಿರವಾಗಿದೆ.
ರಾವತ್ ರಾಜೀನಾಮೆ ಪತ್ರದಲ್ಲಿ ಜನ ಪ್ರಾತಿನಿಧ್ಯ ಕಾಯ್ದೆ 191 ಅನ್ನು ಉಲ್ಲೇಖಿಸಿದ್ದಾರೆ. ಮುಂದಿನ ಆರು ತಿಂಗಳಲ್ಲಿ ಉತ್ತರಾಖಂಡ ವಿಧಾನಸಭೆಯನ್ನು ಮುನ್ನಡೆಸಲು ಅವರನ್ನು ಮತ್ತೆ ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.ಇದರ ನಡುವೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಡೆಹ್ರಡೂನ್‌ಗೆ ಪ್ರಯಾಣ ಬೆಳೆಸಿದ್ದಾರೆ.ಮೂಲಗಳ ಪ್ರಕಾರ ಫಡ್ನವಿಸ್ ನಾಳೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
Breaking : to resign from Uttarakhand CM post tomorrow, Devendra Fadnavis rushing to Dehradun to take oath ( File ) pic.twitter.com/xbyjS7Vu6l
— ANl (@ItsRoshanRai)ಕಳೆದ ಮಾರ್ಚ್ ತಿಂಗಳಲ್ಲಿ ಇದೇ ಪರಿಸ್ಥಿತಿಯನ್ನು ಉತ್ತರಖಂಡ ಎದುರಿಸಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ತೀವೇಂದ್ರ ಸಿಂಗ್ ರಾವತ್ ನಾಯಕತ್ವವನ್ನು ಹೈಕಮಾಂಡ್ ಬದಲಾಯಿಸಿತ್ತು. ಬಳಿಕ ತೀರ್ಥ ಸಿಂಗ್ ರಾವತ್ ಅವರನ್ನು ಸಿಎಂ ಆಯ್ಕೆ ಮಾಡಲಾಗಿತ್ತು. ಕುಂಭ ಮೇಳದಲ್ಲಿನ ನಕಲಿ ಕೋವಿಡ್ ಟೆಸ್ಟ್ ಪ್ರಕರಣ ಭುಗಿಲೇಳುತ್ತಿದ್ದಂತೆ ನಾಯಕತ್ವ ಬದಲಾವಣೆ ಚರ್ಚೆ ಹೆಚ್ಚಾಗಿತ್ತು.
ಜೂನ್ 30 ರಂದು ರಾವತ್ ದೆಹಲಿಗೆ ತೆರಳಿ ಬಿಜೆಪಿ ಹೈಕಮಾಂಡ್ ಭೇಟಿಯಾಗಿದ್ದರು.