ಪಶ್ಚಿಮ ಬಂಗಾಳ ಹಿಂಸಾಚಾರ; ದೀದಿ ಸರ್ಕಾರ ನಡೆಗೆ ಕೋಲ್ಕತಾ ಹೈಕೋರ್ಟ್ ಗರಂ!

By Suvarna NewsFirst Published Jul 2, 2021, 7:23 PM IST
Highlights
  • ಚುನಾವಣೆ ಫಲಿತಾಂಶ ಬಳಿಕ ಬಂಗಾಳದಲ್ಲಿ ನಡೆದ ಹಿಂಸಾಚಾರ
  • ದೀದಿ ಸರ್ಕಾರದ ನಡೆಗೆ ಕೋಲ್ಕತಾ ಹೈಕೋರ್ಟ್ ತರಾಟೆ
  • ತಪ್ಪು ಹಾದಿಯಲ್ಲಿ ಬಂಗಾಳ ಸರ್ಕಾರ

ಕೋಲ್ಕತಾ(ಜು.02):  ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಇಕಟ್ಟಿಗೆ ಸಿಲುಕಿದೆ. ಚುನಾವಣೆ ಫಲಿತಾಂಶ ಬಳಿಕ ನಡೆದ ಹಿಂಸಾಚಾರ ಇದೀಗ ದೀದಿ ಸರ್ಕಾರಕ್ಕೆ ಸಂಕಷ್ಟ ತಂದಿದೆ. ಸುಪ್ರೀಂ ಕೋರ್ಟ್ ಈಗಾಗಲೇ ಬಂಗಾಳ ಹಿಂಸಾಚಾರ, ಹಿಂದೂಗಳ ಮೇಲಿನ ಹಲ್ಲೆ, ದೌರ್ಜನ್ಯ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಮುಂದಾಗಿರುವ ಬೆನ್ನಲ್ಲೇ ಇತ್ತ, ಕೋಲ್ಕತಾ ಹೈಕೋರ್ಟ್ , ಹಿಂಸಾಚಾರ ಹಾಗೂ ಬಂಗಾಳ ಸರ್ಕಾರದ ನಡೆಯನ್ನು ಖಂಡಿಸಿದೆ.

ಬಂಗಾಳದ ಹಿಂದೂಗಳ ರಕ್ಷಣೆ ಕೋರಿ ಸಲ್ಲಿಸಿದ್ದ PIL ವಿಚಾರಣೆಗೆ ಮುಂದಾದ ಸುಪ್ರೀಂ ಕೋರ್ಟ್!

ಪಶ್ಚಿಮ ಬಂಗಾಳದಲ್ಲಿನ ಹಿಂಸಾಚಾರ ನಡೆದಿರುವುದುಕ್ಕೆ ಪುರಾವೆಗಳಿವೆ. ಪಶ್ಚಿಮ ಬಂಗಾಳ ಸರ್ಕಾರ ತಪ್ಪು ಹಾದಿಯಲ್ಲಿ ಹೆಜ್ಜೆ ಹಾಕಿದೆ. ಮತದಾನದ ಬಳಿಕ, ಫಲಿತಾಂಶದ ಬಳಿಕ ನಡೆಗ ಹಿಂಸಾಚಾರದಲ್ಲಿ ಅಮಾಯಕರು ಕೊಲ್ಲಲ್ಪಿಟ್ಟಿದ್ದಾರೆ. ಅಪ್ರಾಪ್ತ ಬಾಲಕಿಯರನ್ನೂ ಬಿಟ್ಟಿಲ್ಲ. ಲೈಗಿಂಗ ದೌರ್ಜನ್ಯ ಎಸಗಲಾಗಿದೆ. ಪರಿಣಾಣ ಜನ ಮನೆಗಳನ್ನು ತೊರೆದು ನೆರೆ ರಾಜ್ಯಕ್ಕೆ ವಲಸೆ ಹೋಗುತ್ತಿದ್ದಾರೆ ಎಂದು ಕೋಲ್ಕತಾ ಹೈಕೋರ್ಟ್ ಹೇಳಿದೆ.

ಬಿಜೆಪಿ ಕಚೇರಿ, ಅಭ್ಯರ್ಥಿ ಮನೆಗೆ ಬೆಂಕಿ, ಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರ!.

ಹಿಂಸಾಚಾರದಿಂದ ಬಳಲುತ್ತಿರುವರಲ್ಲಿ ಸರ್ಕಾರ ವಿಶ್ವಾಸ ಬೆಳೆಸುವ ಯಾವುದೇ ವಾತಾವರಣ ಸೃಷ್ಟಿಸಿಲ್ಲ. ಅವರಿಗೆ ಮೊದಲ ಆದ್ಯತೆಯಾದ ರಕ್ಷಣೆ ನೀಡಲು ಸರ್ಕಾರ ವಿಫಲವಾಗಿದೆ. ಲೈಂಗಿಕ ದೌರ್ಜನ್ಯ, ಹಲ್ಲೆಯಿಂದ ಬಳಲಿದವರು ಮತ್ತೆ ಮನೆಗೆ ಮರಳುವಂತ ಯಾವುದೇ ಘಟನೆ ಸಂಭವಿಸಿಲ್ಲ. ಇದಕ್ಕೆ ಬಂಗಾಳ ಸರ್ಕಾರ ನೇರ ಹೊಣೆಯಾಗಿದೆ ಎಂದು ಕೋರ್ಟ್ ಹೇಳಿದೆ.

ಬಂಗಾಳ ಚುನಾವಣಾ ಹಿಂಸಾಚಾರಕ್ಕೆ 5 ಬಲಿ!

ಇದೇ ವೇಳೆ ಪೊಲೀಸ್ ಇಲಾಖೆಗೆ ಕೆಲ ಮಹತ್ವದ ಸೂಚನೆ ನೀಡಿದೆ. ಸಂತ್ರಸ್ತರ ಹೇಳಿಕೆಗೆಳನ್ನು ದಾಖಲಿಸಲು ಹೇಳಿದೆ. NHRC ಸಮಿತಿ ನೀಡಿರುವ ಶಿಫಾರಸಿನ ಅನ್ವಯ ಪ್ರಕರಣ ದಾಖಲಿಸಿದೆ. ಇನ್ನು ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಅಭಿಜಿತ್ ಸರ್ಕಾರ್ ಮೃತದೇಹ ಮರಣೋತ್ತರ ಪರೀಕ್ಷೆ ಮತ್ತೊಮ್ಮೆ ನಡೆಸುವಂತೆ ಕೋರ್ಟ್ ಸೂಚಿಸಿದೆ. ಸಂತ್ರಸ್ತರು, ಹಲ್ಲೆಗೊಳಗಾದವರಿಗೂ ಸೂಕ್ತ ಚಿಕಿತ್ಸೆ ನೀಡಲು ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ.

click me!