ರೈಲು ಚಲಿಸುತ್ತಿದ್ದಂತೆ ಮೊಬೈಲ್ ಎಗರಿಸಿದ ಬಾಲಕ, ಅಸಹಾಯಕನಾಗಿ ನಿಂತ ಮಾಲೀಕ,ವಿಡಿಯೋ!

By Chethan Kumar  |  First Published Jun 1, 2024, 4:10 PM IST

ರೈಲು ನಿಲ್ದಾಣಗಳಲ್ಲಿ ಅದೆಷ್ಟು ಎಚ್ಚರವಾಗಿದ್ದರೂ ಸಾಲದು. ಇದೀಗ ಬಾಲಕನೊಬ್ಬ ರೈಲು ಚಲಿಸುತ್ತಿದ್ದಂತೆ ಪ್ಲಾಟ್‌ಪಾರ್ಮ್‌ನಲ್ಲಿ ರೈಲಿನ ಜೊತೆಗೆ ನಡೆದುಕೊಂಡ ಬಂದ ಬಾಲಕ, ಮೊಬೈಲ್ ಎಗರಿಸಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.
 


ರೈಲು ನಿಲ್ದಾಣಗಳಲ್ಲಿ ಮೊಬೈಲ್ , ಪರ್ಸ್, ಚಿನ್ನಾಭರಣ ಕಳ್ಳತನ ಮಾಡುವ ಗ್ಯಾಂಗ್ ಸದಾ ಸಕ್ರಿಯಾವಾಗಿರುತ್ತದೆ. ಅದೆಷ್ಟೇ ಎಚ್ಚರ ವಹಿಸಿದರೂ ಚಾಲಾಕಿ ಕಳ್ಳರು ಕಳ್ಳತನ ಮಾಡುತ್ತಾರೆ. ಹೀಗೆ ಪ್ಲಾಟ್‌ಫಾರ್ಮ್‌ನಲ್ಲಿ ಬಾಲಕನೊಬ್ಬ ರೈಲು ಚಲಿಸುತ್ತಿದ್ದಂತೆ ರೈಲಿನ ಜೊತೆ ಮೆಲ್ಲನೆ ನಡೆಯಲು ಆರಂಭಿಸಿದ್ದಾನೆ. ರೈಲು ವೇಗ ಪಡೆದುಕೊಳ್ಳುತ್ತಿದ್ದಂತೆ ರೈಲಿನ ಒಳಗಿನಿಂದ ಮೊಬೈಲ್ ಕದ್ದು ಪರಾರಿಯಾಗಿದ್ದಾನೆ. ಇತ್ತ ರೈಲಿನೊಳಗಿದ್ದ ಮೊಬೈಲ್ ಮಾಲೀಕ ಏನೂ ಮಾಡಲಾಗದೆ ಅಸಹಾಯಕನಾಗಿ ನಿಂತ ಘಟನೆಯ ವಿಡಿಯೋ ವೈರಲ್ ಆಗಿದೆ.

ರೈಲು ನಿಲ್ದಾಣಗಳಲ್ಲಿ ಜೇಬುಗಳ್ಳರ ಹಾವಳಿ ಹೆಚ್ಚಿರುವುದರಿಂದ ಪೊಲೀಸರು ಹದ್ದಿನ ಕಣ್ಣಿಟ್ಟಿರುತ್ತಾರೆ. ಆದರೆ ಪೊಲೀಸರ ಕಣ್ತಪ್ಪಿಸಿ ಹಲವು ಕಳ್ಳತನ ಘಟನೆಗಳು ವರದಿಯಾಗಿದೆ. ಇದೀಗ ಭಾರತೀಯ ರೈಲ್ವೇಯ ವಿಡಿಯೋ ಒಂದು ಭಾರಿ ವೈರಲ್ ಆಗಿದೆ. ಜೊತೆಗೆ ಎಚ್ಚರಿ ಸಂದೇಶವನ್ನೂ ನೀಡುತ್ತಿದೆ.

Latest Videos

undefined

ಮುಂಬೈ ಲೋಕಲ್ ರೈಲಿನಲ್ಲಿನ ನಾಯಿಯ ಪ್ರಯಾಣ, ಶಿಸ್ತು ನೋಡಿ ಕಲೀರಿ ಎಂದ ನೆಟ್ಟಿಗರು!

ಪುಟ್ಟ ಬಾಲಕ ರೈಲು ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದಾರೆ. ರೈಲಿನಲ್ಲಿ ಕಿಕ್ಕಿರಿದು ತುಂಬಿದ ಪ್ರಯಾಣಿಕರಿದ್ದಾರೆ. ರೈಲು ಪ್ಲಾಟ್‌ಫಾರ್ಮ್‌ನಿಂದ ಹೊರಡಲು ಸೈರನ್ ಮಾಡಿದೆ. ನಿಧಾನವಾಗಿ ರೈಲು ಚಲಿಸಲು ಆರಂಭಿಸಿದೆ. ಈ ವೇಳೆ ಬಾಲಕನೂ ಅದೇ ರೈಲಿನ ಜೊತೆ ನಡೆಯಲು ಆರಂಭಿಸಿದ್ದಾನೆ. ಬಾಲಕನಾಗಿರುವ ಕಾರಣ ಯಾರಿಗೂ ಅನುಮಾನ ಬಂದಿಲ್ಲ.

ರೈಲು ನಿಧಾನವಾಗಿ ವೇಗ ಪಡೆಯುತ್ತಿದ್ದಂತೆ ಬಾಲಕ ವೇಗವೂ ಹೆಚ್ಚಾಗಿದೆ. ರೈಲಿನ ವೇಗ ಕೊಂಚ ಹೆಚ್ಚಾದಂತೆ ಬಾಲಕ ರೈಲಿನ ಕಿಟಕಿಯಿಂದ ಕೈಹಾಕಿ ಒಳಗೆ ಕುಳಿತಿದ್ದ ಪ್ರಯಾಣಿಕನ ಮೊಬೈಲ್ ಫೋನ್ ಎಗರಿಸಿದ್ದಾನೆ. ಪ್ರಯಾಣಿಕ ರೈಲಿನ ಒಳಗೆ ಮೊಬೈಲ್ ಚಾರ್ಜ್ ಹಾಕಲು ಪ್ಲಗ್ ಹಾಕಿದ್ದ. ಜೊತೆಗೆ ಮೊಬೈಲ್ ಕೈಯಲ್ಲಿ ಹಿಡಿದುಕೊಂಡಿದ್ದ. ಆದರೆ ಇದನ್ನು ಗಮನಿಸಿದ್ದ ಬಾಲಕ ರೈಲಿನ ಒಳಗಿನಿಂದ ಮೊಬೈಲ್ ಎಗರಿಸಿ ಪರಾರಿಯಾಗಿದ್ದಾನೆ.

ರೈಲಿನಲ್ಲಿ ಅಶ್ಲೀಲವಾಗಿ ಡ್ಯಾನ್ಸ್ ಮಾಡಿ ಪ್ರಯಾಣಿಕರಿಗೆ ಕಿರಿಕಿರಿ, ಯುವತಿಯ ಬಗ್ಗೆ ನೆಟ್ಟಿಗರ ಆಕ್ರೋಶ!

ಬಾಲಕ ಮೊಬೈಲ್ ಎಗರಿಸುತ್ತಿರುವ ಈ ವಿಡಿಯೋ ರೆಕಾರ್ಡ್ ಆಗಿದೆ. ಮೊಬೈಲ್ ಎಗರಿಸಿದ ಬಾಲಕ ಕ್ಷಣಾರ್ಧದಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇತ್ತ ಪ್ರಯಾಣಿಕ ಅತ್ತ ರೈಲಿನಿಂದ ಇಳಿಯಲು ಸಾಧ್ಯವಾಗದೆ, ಇರಲು ಸಾಧ್ಯವಾಗದೇ ಅಸಾಹಾಯಕ ಪರಿಸ್ಥಿತಿಯಲ್ಲಿ ನಿಂತಿದ್ದಾನೆ. ಈ ವಿಡಿಯೋ ಹಲವು ಎಚ್ಚರಿಕೆ ಸಂದೇಶ ನೀಡುತ್ತಿದೆ. ರೈಲು ನಿಲ್ದಾಣ, ಸಾರ್ವಜನಿಕ ಪ್ರದೇಶದಲ್ಲಿ ಕಳ್ಳತನ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಅತೀವ ಎಚ್ಚರಿಕೆ ವಹಿಸುವುದು ಅತೀ ಅಗತ್ಯ. ರೈಲು ನಿಲ್ದಾಣದ ಪೊಲೀಸರು ಸಿಸಿಟಿವಿ ಪರಿಶೀಲಿಸಬೇಕು. ಈ ರೀತಿಯ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಹಲವರು ಕಮೆಂಟ್ ಮಾಡಿದ್ದಾರೆ.


 

click me!