ಕೊಂಚ ನಿಟ್ಟುಸಿರು ಬಿಟ್ಟ ಕಾಂಗ್ರೆಸ್‌, ಸಟ್ಟಾ ಬಜಾರ್‌ ಹೊಸ ಲೆಕ್ಕಾಚಾರ ನೋಡಿ ಬಿಜೆಪಿ ಕಂಗಾಲು!

Published : May 29, 2024, 11:31 PM ISTUpdated : May 29, 2024, 11:34 PM IST
ಕೊಂಚ ನಿಟ್ಟುಸಿರು ಬಿಟ್ಟ ಕಾಂಗ್ರೆಸ್‌, ಸಟ್ಟಾ ಬಜಾರ್‌ ಹೊಸ ಲೆಕ್ಕಾಚಾರ ನೋಡಿ ಬಿಜೆಪಿ ಕಂಗಾಲು!

ಸಾರಾಂಶ

Satta bazar on Election 2024 ದೇಶದಲ್ಲಿ ಕೊನೆ ಹಂತದ ಚುನಾವಣೆ  ಬಾಕಿ ಇರುವಾಗಲೇ ಸಟ್ಟಾ ಬಜಾರ್ ಹೊಸ ಭವಿಷ್ಯ ನುಡಿದಿದೆ.  ಹೊಸ ಲೆಕ್ಕಾಚಾರ ನೋಡಿ ಬಿಜೆಪಿ ಕೊಂಚ ಕಂಗಾಲಾಗಿದೆ. ಕಾಂಗ್ರೆಸ್​ ಪಾಳಯ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಿದೆ.

ಬೆಂಗಳೂರು (ಮೇ.29): ದೇಶದ ಪಾಲಿನ ಅನಧಿಕೃತ ಎಕ್ಸಿಟ್‌ ಪೋಲ್‌ ಎನಿಸಿಕೊಂಡಿರುವ ಸಟ್ಟಾ ಬಜಾರ್‌ನಲ್ಲಿ ಹೊಸ ಲೆಕ್ಕಾಚಾರ ಹೊರಬಿದ್ದಿದೆ. ದೇಶದ ಚುನಾವಣೆಯ 6ನೇ ಹಂತ ಮುಕ್ತಾಯವಾದ ಬೆನ್ನಲ್ಲಿಯೇ ಹೊಸ ನಂಬರ್‌ ಬಂದಿದ್ದು ಇದು ಬಿಜೆಪಿಯನ್ನು ಕಂಗಾಲು ಮಾಡಿದ್ದರೆ, ಕಾಂಗ್ರೆಸ್‌ ಕೊಂಚ ನಿಟ್ಟುಸಿರು ಬಿಟ್ಟಿದೆ.  ಜೂನ್‌ 1ಕ್ಕೆ ಲೋಕಸಭೆ ಚುನಾವಣೆಯ ಕೊನೆ ಹಂತದ ಮತದಾನ ನಡೆಯಲಿದೆ. ಅದೇ ದಿನ ಎಕ್ಸಿಟ್‌ ಪೋಲ್‌ ಕೂಡ ಬಿಡುಗಡೆಯಾಗಲಿದೆ. ಆದರೆ, ಸಟ್ಟಾ ಬಜಾರ್‌ ಬಿಜೆಪಿಗೆ ಆಘಾತಕಾರಿಯಾದ ಫಲಿತಾಂಶಗಳು ಬರುವ ಸೂಚನೆ ನೀಡಿದೆ. ಚುನಾವಣೆಗೂ ಮುನ್ನ ಬಿಜೆಪಿಗೆ 315 ಸೀಟ್‌ಗಳ ಅಂದಾಜು ನೀಡಿದ ಸಟ್ಟಾ ಬಜಾರ್‌, 6ನೇ ಹಂತದ ಚುನಾವಣೆ ಮುಗಿದ ಬಳಿಕ ಬಿಜೆಪಿ 290 ಸೀಟ್‌ ಗೆಲ್ಲಬಹುದು ಎಂದು ಅಂದಾಜು ಮಾಡಿದೆ. ಹಂತದಿಂದ ಹಂತಕ್ಕೆ ಬಿಜೆಪಿ ಗೆಲುವಿನ ಸಂಖ್ಯೆ ಇಳಿಮುಖವಾಗುತ್ತಿದೆ. ಹಾಗಂತ ಕಾಂಗ್ರೆಸ್ ಪಕ್ಷದ ಗೆಲುವಿನ ಸಂಖ್ಯೆಯಲ್ಲಿ ಹೆಚ್ಚಿನ ಏರಿಕೆಯಾಗಿಲ್ಲ. ಪ್ರಾದೇಶಿಕ ಪಕ್ಷಗಳು ಗೆಲ್ಲುವ ಸಂಖ್ಯೆಯಲ್ಲಿ ಏರಿಕೆ ಕಾಣಬಹುದು ಎನ್ನಲಾಗಿದೆ. ಸಟ್ಟಾ ಬಜಾರ್‌ನಲ್ಲಿ ಬಿಜೆಪಿ ಗೆಲುವಿನ ಪರವಾಗಿಯೇ ಹೆಚ್ಚಿನ ಬೆಟ್ಟಿಂಗ್‌ ನಡೆದಿದೆ.

ಇನ್ನು ಸಟ್ಟಾ ಬಜಾರ್‌ನಲ್ಲಿ ಯಾರಿಗೆಷ್ಟು ಸೀಟು ಅನ್ನೋದು ನೋಡೋದಾದರೆ, ಮತದಾನಕ್ಕೂ ಮೊದಲು ಬಿಜೆಪಿ 315 ಸೀಟ್‌ ಗೆಲ್ಲಬಹುದು ಎಂದು ಅಂದಾಜು ಮಾಡಲಾಗಿದ್ದರೆ, ಕಾಂಗ್ರೆಸ್‌ 45-55 ಸೀಟ್‌ ಗೆಲ್ಲಬಹುದು ಎನ್ನಲಾಗಿತ್ತು. ಇನ್ನು 3ನೇ ಹಂತದ ಚುನಾವಣೆಯ ಬಳಿಕ ಬಿಜೆಪಿಯ ಈ ನಂಬರ್‌ಗಳು 270ಕ್ಕೆ ಕುಸಿದಿದ್ದರೆ, ಕಾಂಗ್ರೆಸ್‌ನ ನಂಬರ್‌ಗಳು 70 ರಿಂ 80ಕ್ಕೆ ಏರಿದ್ದವು. ಆದರೆ, ಈಗ 6ನೇ ಹಂತದ ಚುನಾವಣೆಯ ಬಳಿಕ, ಬಿಜೆಪಿ 290 ಸೀಟ್‌ ಗೆಲ್ಲಬಹುದು ಎಂದು ಭವಿಷ್ಯ ತಿಳಿಸಿದ್ದರೆ, ಎನ್‌ಡಿಎ 340 ರಿಂದ 350 ಸೀಟ್‌ ಗೆಲ್ಲಬಹುದು ಎನ್ನುವ ರೀತಿಯಲ್ಲಿ ಬೆಟ್ಟಿಗ್‌ ನಡೆಸಿದೆ. ಇನ್ನು ಕಾಂಗ್ರೆದ್ 50 ರಿಂದ 51 ಸೀಟ್‌ ಗೆಲ್ಲಬಹುದು ಎಂದು ಪ್ರೆಡಿಕ್ಷನ್‌ ಮಾಡಿದೆ. 

ಸಟ್ಟಾ ಬಜಾರ್‌ನಲ್ಲಿ ಯಾರ ಪರ ಎಷ್ಟು ಬೆಟ್ಟಿಂಗ್ ಅಂತಾ ನೋಡೋದಾದರೆ. 300 ರಿಂದ 303 ಸ್ಥಾನ ಪಡೆಯುತ್ತದೆ ಅನ್ನೋದಕ್ಕೆ  100 ಕಟ್ಟಿದ್ರೆ 100 ರೂ.(1:1) ಅಂದರೆ, ಡಬಲ್‌ ಹಣ ಬರಲಿದೆ. ಇನ್ನು ಬಿಜೆಪಿ 320 ಸ್ಥಾನಗಳು ಗೆಲ್ಲಲಿದೆ ಅನ್ನೋದಕ್ಕೆ 100 ಕಟ್ಟಿದ್ರೆ 225 ರೂ.(1: 2.25) ಬೆಟ್ಟಿಂಗ್‌ ಆಗಿದೆ. ಇನ್ನು ಕಾಂಗ್ರೆಸ್​ ಪಕ್ಷ 50 ರಿಂದ 51 ಸ್ಥಾನ ಪಡೆಯಲಿದೆ ಅನ್ನೋದಕ್ಕೆ 100 ಕಟ್ಟಿದ್ರೆ 100 (1:1) ಬೆಟ್ಟಿಂಗ್‌ ಬಂದಿದೆ. ಕಾಂಗ್ರೆಸ್​ 60 ರಿಂದ 61 ಸ್ಥಾನ ಪಡೆಯಲಿದೆ ಅನ್ನೋದಕ್ಕೆ 100 ಕಟ್ಟಿದ್ರೆ 300 ರೂ.(1:3) ಬೆಟ್ಟಿಂಗ್‌ ದಾಖಲಾಗಿದೆ. 

News Hour: ಕೊನೇ ಹಂತಕ್ಕೂ ಮುನ್ನ ಬಿಜೆಪಿಗೆ ಶಾಕ್‌ ನೀಡಿದ ಸಟ್ಟಾ ಬಜಾರ್ ಭವಿಷ್ಯ!

ಕಳೆದ ಬಾರಿ ರಾಜಸ್ಥಾನದ ಫಲೋಡಿ ಸಟ್ಟಾ ಬಜಾರ್‌, ಕರ್ನಾಟಕದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ 137 ಸೀಟ್‌ ಗೆಲ್ಲಲಿದೆ ಎಂದು ಅಂದಾಜು ಮಾಡಿತ್ತು. ಕಾಂಗ್ರೆಸ್‌ ಪಕ್ಷ ಚುನಾವಣೆಯಲ್ಲಿ 136 ಸೀಟ್‌ಗಳಲ್ಲಿ ಗೆಲುವು ಕಂಡಿತ್ತು. 

ದೇಶದ ಚುನಾವಣೆಯ ಅನಧಿಕೃತ ಎಕ್ಸಿಟ್‌ ಪೋಲ್‌, ಏನಿದು ಫಲೋಡಿ ಸತ್ತಾ ಬಜಾರ್‌?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಡಿಗೆದಾರರ ಮನೆಯಿಂದ ಹೊರಹಾಕಲು ಬಂದ ಮಾಲೀಕನಿಗೆ ಆಘಾತ, ತಾಯಿ-ಇಬ್ಬರು ಮಕ್ಕಳ ಶವಪತ್ತೆ
ಕೇರಳ ರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಗೆ ಭರ್ಜರಿ ಗೆಲುವು, 45 ವರ್ಷದ LDF ಅಧಿಪತ್ಯ ಅಂತ್ಯ