ಬಿಜೆಪಿಗೆ ಕೇರಳದಲ್ಲಿ ಗುಡ್ ನ್ಯೂಸ್, ಸುರೇಶ್ ಗೋಪಿಗೆ ಗೆಲುವು ಬಹುತೇಕ ಖಚಿತ!

By Chethan Kumar  |  First Published Jun 4, 2024, 2:04 PM IST

ಇದೇ ಮೊದಲ ಬಾರಿಗೆ ಕೇರಳದಲ್ಲಿ ಬಿಜೆಪಿ ಖಾತೆ ತೆರೆಯಲು ಸಜ್ಜಾಗಿದೆ. ಎರಡು ಸುರೇಶ್ ಗೋಪಿ ಬಾರಿ ಮುನ್ನಡೆ ಕಾಯ್ದೊಂಡಿದ್ದು, ಬಹುತೇಕ ಗೆಲುವು ಖಚಿತವಾಗಿದೆ.
 


ನವದೆಹಲಿ(ಜೂ.04) ಲೋಕಸಭಾ ಚುನಾವಣಾ ಫಲಿತಾಂಶ ಬಿಜೆಪಿಗೆ ಆಘಾತ ತಂದಿದೆ. ಏಕಾಂಗಿಯಾಗಿ ಬಹುಮತ ಪಡೆಯಲು ಹೆಣಗಾಡುವ ಪರಿಸ್ಥಿತಿ ಎದುರಾಗಿದೆ. ಇತ್ತ ಎನ್‌ಡಿ ಮೈತ್ರಿ ಕೂಡ 300ರ ಗಡಿ ದಾಟಲು ಪ್ರಯಾಸ ಪಡುತ್ತಿದೆ. ಆದರೆ ಈ ಬಾರಿ ಬಿಜೆಪಿಗೆ ದಕ್ಷಿಣ ಭಾರತ ಕೈಹಿಡಿದಿದೆ. ಅದರಲ್ಲೂ ಪ್ರಮುಖವಾಗಿ ಕೇರಳದಲ್ಲಿ ಬಿಜೆಪಿ ಖಾತೆ ತರೆಯಲು ಸಜ್ಜಾಗಿದೆ. ತ್ರಿಶೂರ್ ಕ್ಷೇತ್ರದಿಂದ ಸುರೇಶ್ ಗೋಪಿ ಕ್ಷೇತ್ರದಿಂದ ಹಾಲಿ ಸಚಿವ ರಾಜೀವ್ ಚಂದ್ರಶೇಖರ್ ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇತ್ತ ಮುನ್ನಡೆ ಕಾಯ್ದುಕೊಂಡಿದ್ದ ರಾಜೀವ್ ಚಂದ್ರಶೇಖರ್ ಇದೀಗ ಹಿನ್ನಡೆ ಅನುಭವಿಸಿದ್ದಾರೆ.

ತ್ರಿಶೂರ್ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿತ್ತು. ನಟ, ನಾಯಕ ಸುರೇಶ್ ಗೋಪಿ ವಿರುದ್ಧ ಸಿಪಿಐ ಮಾಜಿ ಸಚಿವ ವಿಎಸ್ ಸುನೀಲ್ ಕುಮಾರ್, ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಕೆ ಮರುಳೀಧರನ್ ನಡುವೆ ತೀವ್ರ ಪೈಪೋಟಿ ಎರ್ಪಟ್ಟಿತ್ತು. ಆದರೆ ಸುರೇಶ್ ಗೋಪಿ 70,000 ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಸುರೇಶ್ ಗೋಪಿ ಗೆಲುವು ಬಹುತೇಕ ಪಕ್ಕಾ ಆಗಿದೆ.

Tap to resize

Latest Videos

undefined

Live Blog: ಎನ್‌ಡಿಎ ಮೈತ್ರಿಕೂಟಕ್ಕೆ ಈ ಬಾರಿ ಸರಳ ಬಹುಮತ 

ದೇವಸ್ಥಾನ ನಗರಿ ಎಂದೇ ಖ್ಯಾತಿ ಹೊಂದಿರುವ ತ್ರಿಶೂರ್‌ನಲ್ಲಿ ಹಿಂದೂ ಮತಗಳ ಜೊತೆಗೆ ಅತೀ ದೊಡ್ಡ ಪ್ರಮಾಣದಲ್ಲಿ ಕ್ರಿಶ್ಚಿಯನ್ ಸಮುದಾಯವೂ ಸುರೇಶ್ ಗೋಪಿಗೆ ಮತ ಹಾಕಿದೆ. ಈ ಮೂಲಕ ಕೇರಳದ ಕ್ರಿಶ್ಚಿಯನ್ ಸಮುದಾಯ ನಿಧಾನವಾಗಿ ಬಿಜೆಪಿಯತ್ತ ವಾಲುತ್ತಿರುವುದು ಸ್ಪಷ್ಟವಾಗುತ್ತಿದೆ.  2021ರಲ್ಲಿ ಸುರೇಶ್ ಗೋಪಿ ತ್ರಿಶೂರ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಆದರೆ ಈ ವೇಳೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. 

ಇತ್ತ ಕಾಂಗ್ರೆಸ್ ಮಾಜಿ ಸಚಿವ, ತಿರುವನಂತಪುರಂ ಹಾಲಿ ಸಂಸದ ಶಶಿ ತರೂರ್ ವಿರುದ್ದ ಬಿಜೆಪಿ ನಾಯಕ, ಕೇಂದ್ರ ಸಚಿವ ಶಶಿ ತರೂರ್ ಭಾರಿ ಮುನ್ನಡೆ ಕಾಯ್ದುಕೊಂಡಿದ್ದರು.  ಆದರೆ ಅಷ್ಟೇ ವೇಗದಲ್ಲಿ ಶಶಿ ತರೂರ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆರಂಭದಲ್ಲಿ 21,000ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ರಾಜೀವ್ ಚಂದ್ರಶೇಖರ್ ಮುನ್ನಡೆ ಕಾಯ್ದುಕೊಂಡಿದ್ದರು. ಇದೀಗ ಶಶಿ ತರೂರ್ 10,000 ಮತಗಳ ಮುನ್ನಡೆ ಕಾಯ್ಗುಕೊಂಡಿದ್ದಾರೆ. ಚುನಾವಣಾ ಆಯೋಗದ ಅಂಕಿಗಳ ಪ್ರಕಾರ ರಾಜೀವ್ ಚಂದ್ರಶೇಖರ್ 2,02,742 ಮತಗಳನ್ನು ಪಡೆದಿದ್ದಾರೆ. ಪ್ರತಿಸ್ಪರ್ಧಿ ಶಶಿ ತರೂರ್ 1,80,833 ಮತಗಳನ್ನು ಪಡೆದಿದ್ದಾರೆ.

Live Blog: ಪೆನ್ ಡ್ರೈವ್ ಕಮಾಲ್, ಹಾಸನದಲ್ಲಿ ಪ್ರಜ್ವಲ್ ರೇವಣ್ಣಂಗೆ ಸೋಲು 

ಉತ್ತರ ಭಾರತದಲ್ಲಿ ಬಿಜೆಪಿ ಸರಿಯಾಗಿ ಹೊಡೆತ ತಿಂದಿದೆ. ಆದರೆ ಈ ಬಾರಿ ಬಿಜೆಯ ಕೈಹಿಡಿದಿದ್ದು ದಕ್ಷಿಣ ಭಾರತ. ಪ್ರಮುಖವಾಗಿ ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿದರೆ ಇನ್ನುಳಿದ ಯಾವುದೇ ರಾಜ್ಯಗಳಲ್ಲಿ ಬಿಜೆಪಿಗೆ ನೆಲೆ ಇರಲಿಲ್ಲ. ಈ ಬಾರಿ ಕರ್ನಾಟದಲ್ಲಿ ಸಂಖ್ಯೆ ಕಡಿಮೆಯಾಗಿದೆ. ಆದರೆ ಆಂಧ್ರ ಪ್ರದೇಶದ ಟಿಡಿಪಿ ಕಿಂಗ್ ಮೇಕರ್ ಆಗಿದೆ.
 

click me!