Published : Jun 04, 2024, 05:59 AM ISTUpdated : Jun 04, 2024, 05:15 PM IST

Live Blog: ಸರಕಾರ ರಚಿಸಲು ಇಂಡಿ ಒಕ್ಕೂಟ ಪ್ಲ್ಯಾನ್, ರಾಹುಲ್ ಪ್ರಧಾನಿ ಮಾಡಲು ಶಿವಸೇನೆಗೆ ಓಕೆ

ಸಾರಾಂಶ

ಏಪ್ರಿಲ್‌ 19 ರಿಂದ ಆರಂಭವಾಗಿದ್ದ 18ನೇ ಲೋಕಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆದು ಜೂನ್‌ 1 ರಂದು ಮುಕ್ತಾಯವಾಗಿತ್ತು. ಮಹಾತೀರ್ಪು ಬಹುತೇಕ ಹೊರ ಬಿದ್ದಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎಗೆ ಸರಳ ಬಹುಮತ ಸಿಕ್ಕಿದೆ. ಆದರೂ ಚಂದ್ರಬಾಬು ನಾಯ್ಡು ಕಿಂಗ್ ಮೇಕರ್ ಆಗಿದ್ದು, ಅವರ ತೀರ್ಮಾನದಂತೆ ಮುಂದಿನ ನಡೆ ನಿರ್ಧರಿತವಾಗಲಿದೆ. ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದ ಕಾರಣ, ಇಂಡಿ ನಾಯಕರು ಈಗಾಗಲೇ ಆ್ಯಕ್ಟಿವ್ ಆಗಿದ್ದು, ಎನ್‌ಡಿಎ ಮೈತ್ರಿ ಪಕ್ಷಗಳನ್ನೂ ಸಂಪರ್ಕಿಸುತ್ತಿದ್ದಾರೆ. ಬಿಜೆಪಿಯ ಚಾರ್‌ ಸೌ ಪಾರ್‌ ಎನ್ನುವ ಟಾರ್ಗೆಟ್‌ ಇರಲಿ, ಇದೀಗ 300 ಕ್ಷೇತ್ರಗಳನ್ನು ಗೆಲ್ಲುವಲ್ಲಿಯೂ ಎನ್‌ಡಿಎ ಮೈತ್ರಿಕೂಟ ಹರಸಾಹಸ ಪಡುತ್ತಿದೆ. ಕಾಂಗ್ರೆಸ್‌ ನಿರಾಳವಾಗಿದ್ದು, ಮುಳುಗುವ ದೋಣಿ ದಡ ಸೇರಿದಂತಾಗಿದೆ.

ದೇಶದ 543 ಲೋಕಸಭಾ ಕ್ಷೇತ್ರಕ್ಕೆ ಶೇ. 66.33 ರಷ್ಟು ಮತದಾನವಾಗಿತ್ತು. ಬಿಜೆಪಿ ಒಟ್ಟು  441 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಕಾಂಗ್ರೆಸ್‌ 328 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಚುನಾವಣಾ ಆರಂಭಕ್ಕೂ ಮುನ್ನವೇ ಸೂರತ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿತ್ತು. ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ವಯನಾಡ್‌, ರಾಯ್‌ಬರೇಲಿ ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ, ಗುಜರಾತ್‌ನ ಗಾಂಧಿನಗರದಲ್ಲಿ ಅಮಿತ್‌ ಶಾ, ತಮಿಳುನಾಡಿನ ಕೊಯಮತ್ತೂರಿನಲ್ಲಿ ಅಣ್ಣಾಮಲೈ ಅವರ ರಿಸಲ್ಟ್‌ ಹೆಚ್ಚಿನ ಕುತೂಹಲ ಸೃಷ್ಟಿಸಿದ್ದವು. ಆಂಧ್ರ ಪ್ರದೇಶದಲ್ಲಿ ಮಾತ್ರ ಜಗನ್‌ ಪಡೆಗೆ ಹೀನಾಯ ಸೋಲಾಗಿದ್ದು, ಎನ್‌ಡಿಎ ಮಿತ್ರ ಪಕ್ಷಗಳಾದ ಟಿಡಿಪಿ ಹಾಗೂ ಬಿಜೆಪಿ ಸರಕಾರ ರಚಿಸಲಿದೆ.

Live Blog: ಸರಕಾರ ರಚಿಸಲು ಇಂಡಿ ಒಕ್ಕೂಟ ಪ್ಲ್ಯಾನ್, ರಾಹುಲ್ ಪ್ರಧಾನಿ ಮಾಡಲು ಶಿವಸೇನೆಗೆ ಓಕೆ

05:15 PM (IST) Jun 04

ವಾರಾಣಾಸಿಯಲ್ಲಿ ಪ್ರಧಾನಿ ಮೋದಿಗೆ ಗೆಲವು

ಕಳೆದ ಸಲ 4 ಲಕ್ಷ 89 ಸಾವಿರ ಅಂತರದಿಂದ ಗೆದ್ದಿದ್ದು ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಾಣಾಸಿಯಿಂದ 1 ಲಕ್ಷದ 52 ಸಾವಿರ ಮತಗಳಿಂದ ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಮೊದಲ ಕೆಲವು ಸುತ್ತು ಮತ ಎಣಿಕೆ ನಂತರ ಮುನ್ನಡೆ ಕಾಯ್ದಕೊಂಡಿದ್ದು, ಮೋದಿಯ ಗೆಲವು ಎಲ್ಲಿ ಪ್ರಯಾಸ ಆಗುವುದೋ ಎಂಬ ಭಯ ಹುಟ್ಟಿಸುವಂತೆ ಮಾಡಿತ್ತು. 

 

 

04:53 PM (IST) Jun 04

ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೋಲಿಸಿದ ಕಿಶೋರಿ ಲಾಲ್‌ ಸೋಶಿಯಲ್ ಮೀಡಿಯಾದಲ್ಲಿ ಫುಲ್‌ ಟ್ರೆಂಡಿಂಗ್‌

ಕೇಂದ್ರ ಸಚಿವೆ, ಬಿಜೆಪಿಯ ಸ್ಟಾರ್ ಪ್ರಚಾರಕಿ ಸ್ಮೃತಿ ಇರಾನಿ ಅವರನ್ನು ಅಮೇಥಿಯಲ್ಲಿ ಭಾರಿ ಮತಗಳ ಅಂತರದಿಂದ ಸೋಲಿಸಿರುವ ಕಾಂಗ್ರೆಸ್ ನಾಯಕ, ಗಾಂಧಿ ಮನೆತನಕ್ಕೆ ನಿಷ್ಠಾವಂತನಾಗಿರುವ ಕಿಶೋರಿ ಲಾಲ್ ಶರ್ಮಾ ಅವರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ.

ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

03:32 PM (IST) Jun 04

ನಿತೀಶ್‌ ಕುಮಾರ್‌ಗೆ ಉಪಪ್ರಧಾನಿ, ಆಂಧ್ರಗೆ ವಿಶೇಷ ಸ್ಥಾನಮಾನ: ಇಂಡಿ ಒಕ್ಕೂಟದಿಂದ ಬಿಗ್‌ ಆಫರ್‌

ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಜೆಡಿಯು ನಾಯಕ ನಿತೀಶ್‌ ಕುಮಾರ್‌ ಹಾಗೂ ಟಿಡಿಪಿಗೆ ಇಂಡಿಯಾ ಒಕ್ಕೂಟ ಬಿಗ್‌ ಆಫರ್‌ಅನ್ನು ನೀಡಿದ್ದು ತಮ್ಮ ಜೊತೆ ಕೈ ಜೋಡಿಸಿ ಸರ್ಕಾರ ರಚಿಸಲು ನೆರವಾಗುವಂತೆ ಮನವಿ ಮಾಡಿದೆ.

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

03:17 PM (IST) Jun 04

ರಾಮಜನ್ಮ ಭೂಮಿ ಆಯೋಧ್ಯೆಯಲ್ಲೇ ಬಿಜೆಪಿಗೆ ಹಿನ್ನಡೆ, ಇಂಡಿಯಾ ಮೈತ್ರಿಗೆ ಅಭೂತಪೂರ್ವ ಮುನ್ನಡೆ!

ಉತ್ತರ ಪ್ರದೇಶದಲ್ಲಿ ಬಿಜೆಪಿ ಲೆಕ್ಕಾಚಾರ ಸಂಪೂರ್ಣ ಉಲ್ಟಾ ಆಗಿದೆ. ಇಂಡಿಯಾ ಒಕ್ಕೂಟ ಭಾರಿ ಮುನ್ನಡೆ ಪಡೆದುಕೊಂಡಿದೆ. ಪ್ರಮುಖವಾಗಿ ಆಯೋಧ್ಯೆ ರಾಮಮಂದಿರ ಒಳಗೊಂಡ ಫೈಜಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಸೋಲಿನತ್ತ ಮುಖಮಾಡಿದೆ.

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

 

 

03:14 PM (IST) Jun 04

ಬಿಜೆಪಿಯ ಸ್ಟಾರ್ ನಾಯಕಿ ಸ್ಮೃತಿ ಇರಾನಿಗೆ ಹೀನಾಯ ಸೋಲು; ಗೆದ್ದ ಕಾಂಗ್ರೆಸ್

Amethi Lok sabha Election Results: ಸ್ಮೃತಿ ಇರಾನಿ ಸಹ ಅಮೇಥಿಯಲ್ಲಿ ಸ್ಪರ್ಧೆ ಮಾಡುವಂತೆ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿದ್ದರು. ಅಂತಿಮವಾಗಿ ಕಾಂಗ್ರೆಸ್ ಸ್ಥಳೀಯ ಮುಖಂಡ ಕಿಶೋರಿ ಲಾಲ್ ಶರ್ಮಾ ಅವರಿಗೆ ಟಿಕೆಟ್ ನೀಡಿತ್ತು.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 

 

03:12 PM (IST) Jun 04

ನಿತೀಶ್ ಕುಮಾರ್‌ಗೆ ಉಪ ಪ್ರಧಾನಿ ಆಫರ್ ಕೊಟ್ಟ ಇಂಡಿ ಒಕ್ಕೂಟ

ಬಿಜೆಪಿಗೆ ಸ್ಪಷ್ಟ ಬಹುಮತ ಬಾರದ ಹಿನ್ನೆಲೆಯಲ್ಲಿ ಇಂಡಿ ಒಕ್ಕಟೂ ಆ್ಯಕ್ಟಿವ್ ಆಗಿದ್ದು, ಎನ್‌ಡಿಎ ಮೈತ್ರಿ ಪಕ್ಷಗಳ ಮುಖ್ಯಸ್ಥರಿಗೆ ಬಿಗ್ ಆಫರ್ ನೀಡುತ್ತಿದ್ದು, ಬಿಹಾರ ಮುಖ್ಯಮಮಂತ್ರಿ ನಿತೀಶ್ ಕುಮಾರ್‌ಗೆ ಉಪ್ ಪ್ರಧಾನಿ ಮಾಡುವ ಆಮಿಷ ಒಡ್ಡಿದೆ. ಈಗಾಗಲೇ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಎನ್‌ಡಿಎ ಮೈತ್ರಿಯೊಂದಿಗೆ ಆಂಧ್ರದಲ್ಲಿ ಸರಕಾರ ರಚಿಸುವ ಭರವಸೆ ನೀಡಿದ್ದು, ಕೇಂದ್ರದಲ್ಲಿ ಬೆಂಬಲಿಸುವುದುಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಆದರೆ, ನಿತೀಶ್ ಕುಮಾರ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕು. 

01:59 PM (IST) Jun 04

ನವೀನ್ ಪಟ್ನಾಯಕ್ ಕೋಟೆಗೆ ಬಜೆಪಿ ಎಂಟ್ರಿ: ಮ್ಯಾಜಿಕ್ ನಂಬರ್‌ನತ್ತ ಕಮಲ ಪಡೆ

BJP reaches Majority Mark: ಮಧ್ಯಾಹ್ನ 12 ಗಂಟೆಯ ಟ್ರೆಂಡ್ ಪ್ರಕಾರ, ಬಿಜೆಪಿ 17 ಲೋಕಸಭಾ ಕ್ಷೇತ್ರ ಹಾಗೂ 70 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇತ್ತ ಬಿಜೆಡಿ 3 ಲೋಕಸಭಾ ಮತ್ತು 57 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

01:53 PM (IST) Jun 04

ಕಿಂಗ್ ಮೇಕರ್ ನಾಯ್ಡು: ಚಂದ್ರ ಬಾಬು ನಾಯ್ಡು ಜೊತೆ ಮೋದಿ ಮಾತುಕತೆ

ಚಂದ್ರ ಬಾಬು ನಾಯ್ಡು ಜೊತೆ ಪ್ರಧಾನಿ ಮೋದಿ ಮಾತುಕತೆ. ದೂರವಾಣಿ ಮೂಲಕ ಮಾತುಕತೆ ನಡೆಸಿದ ಪ್ರಧಾನಿ ಮೋದಿ. NDA ಮೈತ್ರಿಕೂಟದಲ್ಲಿ ಇರುವಂತೆ ಮನವಿ. ಕೂಡಲೇ ದೆಹಲಿಗೆ ಬರುವಂತೆ ಮನವಿ. ಈಗಾಗ್ಲೇ NDA ಮೈತ್ರಿಕೂಟದ ಭಾಗವಾಗಿರುವ ಚಂದ್ರ ಬಾಬು ನಾಯ್ಡು. NDA ಮೈತ್ರಿಕೂಟದಲ್ಲಿದ್ದರೂ, ಇಂಡಿ  ಮೈತ್ರಿಕೂಟದಿಂದ ನಾಯ್ಡುಗೆ ಆಹ್ವಾನ.  ಸದ್ಯ ಆಂಧ್ರದಲ್ಲಿ 20-22 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿರುವ TDP ಪಕ್ಷ

01:40 PM (IST) Jun 04

ಜೆಡಿಎಸ್ ಭದ್ರಕೋಟೆ ಮಂಡ್ಯ ಉಳಿಸಿಕೊಂಡ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸ್ಪರ್ಧೆಯಿಂದ ರಾಷ್ಟ್ರಮಟ್ಟದಲ್ಲಿ ಗಮನಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರು ಬರೋಬ್ಬರಿ 2 ಲಕ್ಷ ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

 

 

01:34 PM (IST) Jun 04

ಎನ್‌ಡಿಎಗೆ ಕಡಿಮೆ ಸ್ಥಾನ ಹಿನ್ನಲೆ, ಹೃದಯಾಘಾತದಿಂದ ವ್ಯಕ್ತಿ ಸಾವು

ಲೋಕಸಭೆ ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್‌ಡಿಎಗೆ ಕಡಿಮೆ ಸ್ಥಾನ ಬಂದ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಸಾವು ಕಂಡಿದ್ದಾನೆ.

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

01:22 PM (IST) Jun 04

ಸಮಾಜವಾದಿ ಪಾರ್ಟಿಯ ಅಖಿಲೇಶ್ ಯಾದವ್, ಪತ್ನಿ ಡಿಂಪಲ್ ಯಾದವ್ ಗೆಲವು ಬಹುತೇಕ ಖಚಿತ

ಉತ್ತರ ಪ್ರದೇಶದಲ್ಲಿ ಇಂಡಿ ಮೈತ್ರಿಕೂಟ ಕಮಾಲ್ ಮಾಡುತ್ತಿದ್ದು, ಬಿಜೆಪಿಗೆ ಸೆಡ್ಡು ಹೊಡೆದಿದೆ. ಸಮಾಜವಾದಿ ಪಕ್ಷ ಮೇಲೆದಿದ್ದಿದ್ದು, ಕಾಂಗ್ರೆಸ್‌ಗೂ ಮರು ಜನ್ಮ ಸಿಕ್ಕಂತಾಗಿದೆ. ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ಪತ್ನಿ ಡಿಂಪಲ್ ಯಾದವ್ ಮುನ್ನಡೆ ಕಾಯ್ದುಕೊಂಡಿದ್ದು, ಗೆಲ್ಲುವುದು ಬಹುತೇಕ ಖಚಿತವಾಗಿದೆ. 

 

 

01:08 PM (IST) Jun 04

ಲಕ್ಷಾಂತರ ಮತಗಳಿಂದ ಮತ್ತೆ ಗೆದ್ದು ಹೀಗಿದ ಎಂಪಿ ತೇಜಸ್ವಿ ಸೂರ್ಯ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಆಶೀರ್ವಾದದಿಂದ ಬಹಳ ದೊಡ್ಡ ಅಂತರದಿಂದ ಗೆಲುವಾಗ್ತಿದೆ ಕ್ಷೇತ್ರದ ಜನರು ಒಬ್ಬ ಯುವಕನ ಮೇಲೆ ಪ್ರೀತಿ ವಿಶ್ವಾಸ ಇಟ್ಟು ಗೆಲ್ಲಿಸಿದ್ದಾರೆ ಎಂದು ದಕ್ಷಿಣ ಕ್ಷೇತ್ರದ ಜನರಿಗೆ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಧನ್ಯವಾದಗಳನ್ನ ತಿಳಿಸಿದರು.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 

 

01:01 PM (IST) Jun 04

ಬಿಜೆಪಿಯ ಅಣ್ಣಾಮಲೈಗೆ ಕೊಯಮತ್ತೂರಿನಲ್ಲಿ ಡಿಎಂಕೆಯ ಗಣಪತಿ ವಿರುದ್ಧ ಸೋಲು

ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯುವ ವಿಶ್ವಾಸ ಹೊಂದಿದ್ದ ಬಿಜೆಪಿಗೆ ಮುಖಭಂಗವಾಗಿದ್ದು, ಪಕ್ಷದ ರಾಜ್ಯಾಧ್ಯಕ್ಷ ಅಣ್ಣಾಮಲೈ ಡಿಎಂಕೆ ಅಭ್ಯರ್ಥಿ ಗಣಪತಿ ವಿರುದ್ಧ 17 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. 

 

 

12:30 PM (IST) Jun 04

ಬಾರಾಮತಿ ಲೋಕಸಭಾ ಕ್ಷೇತ್ರ: ಅತ್ತಿಗೆಯ ಹಿಂದಿಕ್ಕಿ ಗೆಲುವಿನತ್ತ ಸುಪ್ರಿಯಾ ಸುಲೆ ದಾಪುಗಾಲು

ಮಹಾರಾಷ್ಟ್ರದ ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಅತ್ತಿಗೆ ನಾದಿನಿಯರ ಸ್ಪರ್ದೆಯಿಂದ ತೀವ್ರ ಕುತೂಹಲ ಕೆರಳಿಸಿತ್ತು. ಈ ಕ್ಷೇತ್ರದಲ್ಲಿ ಈಗ ಅತ್ತಿಗೆ ಹಾಗೂ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಹಿಂದಿಕ್ಕಿ ಸುಪ್ರೀಯಾ ಸುಲೆ ಮುನ್ನಡೆ ಸಾಧಿಸಿದ್ದಾರೆ

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 

 

12:02 PM (IST) Jun 04

ಎನ್‌ಡಿಎ ಮೈತ್ರಿಕೂಟಕ್ಕೆ ಈ ಬಾರಿ ಸರಳ ಬಹುಮತ

ನಿಚ್ಛಳ ಬಹುಮಂತ ಅದರಲ್ಲಿಯೂ 400 ಕ್ಷೇತ್ರಗಳ ಗೆಲುವಿನೊಂದಿಗೆ ಎನ್‌ಡಿಎ ಮೈತ್ರಿಕೂಟ ಸರಕಾರ ರಚಿಸಲಿದೆ ಎಂಬ ನಂಬಿಕೆ ಸುಳ್ಳಾಗುತ್ತಿದ್ದು, ಸರಳ ಬಹುಮತದೊಂದಿಗೆ ಸರಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಇನ್ನೂ 300 ಕ್ಷೇತ್ರಗಳನ್ನೂ ಗೆಲ್ಲದ ಬಿಜೆಪಿ ನೇತೃತ್ವದ ಒಕ್ಕೂಟಕ್ಕೆ ಉತ್ತರ ಪ್ರದೇಶದಲ್ಲಿಯೇ ಮತದಾರ ಕೈ ಕೊಟ್ಟಿದ್ದು ದೊಡ್ಡ ಪೆಟ್ಟು ಬಿದ್ದಂತಾಗಿದೆ. 

 

12:02 PM (IST) Jun 04

ಎನ್‌ಡಿಎ ಮೈತ್ರಿಕೂಟಕ್ಕೆ ಈ ಬಾರಿ ಸರಳ ಬಹುಮತ

ನಿಚ್ಛಳ ಬಹುಮಂತ ಅದರಲ್ಲಿಯೂ 400 ಕ್ಷೇತ್ರಗಳ ಗೆಲುವಿನೊಂದಿಗೆ ಎನ್‌ಡಿಎ ಮೈತ್ರಿಕೂಟ ಸರಕಾರ ರಚಿಸಲಿದೆ ಎಂಬ ನಂಬಿಕೆ ಸುಳ್ಳಾಗುತ್ತಿದ್ದು, ಸರಳ ಬಹುಮತದೊಂದಿಗೆ ಸರಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಇನ್ನೂ 300 ಕ್ಷೇತ್ರಗಳನ್ನೂ ಗೆಲ್ಲದ ಬಿಜೆಪಿ ನೇತೃತ್ವದ ಒಕ್ಕೂಟಕ್ಕೆ ಉತ್ತರ ಪ್ರದೇಶದಲ್ಲಿಯೇ ಮತದಾರ ಕೈ ಕೊಟ್ಟಿದ್ದು ದೊಡ್ಡ ಪೆಟ್ಟು ಬಿದ್ದಂತಾಗಿದೆ. 

11:31 AM (IST) Jun 04

Exit Poll ಹೇಳಿದ್ದೆಲ್ಲಾ ಸುಳ್ಳಾಗುತ್ತಾ?

ಬಹುತೇಕ ಎಕ್ಸಿಟ್ ಪೋಲ್‌ಗಳು ಬಿಜೆಪಿ ನೇತೃತ್ವದ ಎನ್‌ಜಿಎ 360 ಕ್ಷೇತ್ರಗಳನ್ನು ಗೆಲ್ಲುವುದಾಗಿ ಹೇಳಿತ್ತು, ಇದೀಗ ಎನ್‌ಡಿಎ ಮೈತ್ರಿಕೂಟ ಸರಕಾರ ರಚಿಸೋದು ಬಹುತೇಕ ಖಚಿತವಾದರೂ, ಈ ನಂಬರ್ ತಲುಪುತ್ತಾ ಎನ್ನೋದು ಅನುಮಾನ ವ್ಯಕ್ತವಾಗುತ್ತಿದೆ. 

11:28 AM (IST) Jun 04

ಆಂಧ್ರ ಪ್ರದೇಶ: ಬಿಜೆಪಿ-ಟಿಡಿಪಿ ಸರಕಾರ ರಚಿಸೋದು ಬಹುತೇಕ ಖಚಿತ!

ಆಂಧ್ರ ಪ್ರದೇಶ ವಿಧಾನ ಸುಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು. ಟಿಡಿಪಿ-ಬಿಜೆಪಿ ಮೈತ್ರಿ ಕೂಟ ಸರಕಾರ ರಚಿಸುವುದು ಬಹುತೇಕ ಖಚಿತವಾಗಿದೆ. 

 

10:52 AM (IST) Jun 04

ಮಾಜಿ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಜೌಹಾಣ್‌ಗೆ 1.8 ಲಕ್ಷ ಮತಗಳ ಮುನ್ನಡೆ

 ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ, ವಿದಿಶಾ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಿಂಗ್ ಚೌಹಾಣ್ ಅವರು 1,88,350 ಮತಗಳ ಮುನ್ನಡೆ ಕಾಯ್ದು ಕೊಂಡಿದ್ದು, ರಾಜ್ಯದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಆಗೋ ಲಕ್ಷಣಗಳು ಕಾಣಿಸುತ್ತಿವೆ.

10:42 AM (IST) Jun 04

ಕಂಗನಾಗೆ 30 ಸಾವಿರ ಮತಗಳ ಮುನ್ನಡೆ, ದೇವರಿಗೆ ಪೂಜಿಸಿದ ನಟಿ

ಹಿಮಾಚಲ ಪ್ರದೇಶದ ಮಂಡಿಯಿಂದ ಸ್ಪರ್ಧಿಸಿರುವ ಬಾಲಿವುಡ್ ಕ್ವೀನ್ ಕಂಗನಾ ರಾಣಾವತ್ ಸುಮಾರು 30 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದು, ಮನೆ ದೇವರಿಗೆ ಪೂಜಿಸಿದರು. 

10:35 AM (IST) Jun 04

ಹೈದರಾಬಾದ್‌ನಲ್ಲಿ ಓವೈಸಿಗೆ 15 ಸಾವಿರ ಮತಗಳ ಮುನ್ನಡೆ

ಹೈದರಾಬಾದ್‌ನಲ್ಲಿ ಬಿಜೆಪಿ ಮಾಧವಿ ಲತಾ ಎದುರು AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ 15461 ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. 

10:33 AM (IST) Jun 04

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕೆ 33 ಸೀಟುಗಳ ಮುನ್ನಡೆ

ಈಗಿನ ಟ್ರೆಂಡ್‌ ಪ್ರಕಾರ ಉತ್ತರ ಪ್ರದೇಶದಲ್ಲಿ ಬಿಜೆಪಿ 41 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಸಮಾಜವಾದಿ ಪಾರ್ಟಿ ವೋಟ್ ಶೇರಿಂಗ್‌ನಲ್ಲಿ ಮುಂದಿದ್ದು, ಆಗಲೇ 33 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಇಂಡಿ ಒಕ್ಕೂಟದ ಬಲ ತುಂಬಿದೆ. 

 

10:28 AM (IST) Jun 04

ಅಮೇಥಿಯಲ್ಲಿ ಸ್ಮೃತಿ ಇರಾನಿಗೆ ಹಿನ್ನಡೆ, ರಾಜೀವ್ ಚಂದ್ರಶೇಖರ್‌ಗೆ ಮುನ್ನಡೆ

ಉತ್ತರ ಪ್ರದೇಶದಲ್ಲಿ ಇಂಡಿಯಾ ಒಕ್ಕೂಟ ನಿರೀಕ್ಷೆಗಿಂತಲೂ ಹೆಚ್ಚಿನ ಯಶಸ್ಸು ತೋರುತ್ತಿದ್ದು, ಎನ್‌ಡಿಎಗೆ ಸಮಾನವಾಗಿ ಫೈಟ್ ನೀಡುತ್ತಿದೆ. ಅಮೇಥಿಯಲ್ಲಿ ಸ್ಮೃತಿ ಇರಾನಿಗೆ 10 ಸಾವಿರ ಮತಗಳ ಹಿನ್ನಡೆಯಾದರೆ, ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿಗೆ 18 ಸಾವಿರ ಮತಗಳ ಮುನ್ನಡೆಯಾಗಿದೆ. ಕೇರಳದ ತಿರುವನಂತಪುರಂನಲ್ಲಿ ಬಿಜೆಪಿಯ ರಾಜೀವ್ ಚಂದ್ರಶೇಖರ್‌ಗೆ, ಕಾಂಗ್ರೆಸ್‌ನ ಶಶಿ ತರೂರ್ ವಿರುದ್ಧ ಕೆಲವು ಮತಗಳ ಮುನ್ನಡೆ ಸಿಕ್ಕಿದೆ. 

 

 

10:21 AM (IST) Jun 04

ಕೇಜಿಗಟ್ಟಲೇ ಲಡ್ಡಿನೊಂದಿಗೆ ಸಂಭ್ರಮಾಚರಣೆಗೆ ಕಾಯ್ತಿರುವ ಬಿಜೆಪಿಗರು

ಚುನಾವಣೋತ್ತರ ಸಮೀಕ್ಷೆಗಳು ಭಾರತೀಯ ಜನತಾ ಪಾರ್ಟಿಗೆ ಲೋಕಸಭಾ ಚುನಾವಣೆಯಲ್ಲಿ ಭಾರಿ ಗೆಲುವು ತಂದುಕೊಟ್ಟಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಫಲಿತಾಂಶಕ್ಕೂ ಮೊದಲೇ ಗೆಲುವಿನ ಸಂಭ್ರಮಾಚರಣೆಗಾಗಿ 200 ಕೇಜಿಗೂ ಅಧಿಕ ಲಡ್ಡು ಆರ್ಡರ್ ಮಾಡಿದ್ದಾರೆ

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

10:16 AM (IST) Jun 04

ಉತ್ತರ ಪ್ರದೇಶ: ಎನ್‌ಡಿಎ, ಇಂಡಿ ಒಕ್ಕೂಟಕ್ಕೆ ಸಮಬಲ

80 ಲೋಕಸಭಾ ಕ್ಷೇತ್ರಗಳಿರುವ ಅತೀ ದೊಡ್ಡರಾಜ್ಯ ಉತ್ತರ ಪ್ರದೇಶದಲ್ಲಿ ಎನ್‌ಡಿಎ 43 ಕ್ಷೇತ್ರಗಳಲ್ಲಿ ಹಾಗೂ ಇಂಡಿ ಒಕ್ಕೂಟ 36 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಈಗಿನ ಟ್ರೆಂಡ್ ಪ್ರಕಾರ ನಿರೀಕ್ಷಿತ ಕ್ಷೇತ್ರಗಳನ್ನು ಗೆಲ್ಲುವಲ್ಲಿ ಬಿಜೆಪಿ ವಿಫಲವಾಗಲಿದೆ.

10:02 AM (IST) Jun 04

ಅಮಿತ್ ಶಾ, ಮೋದಿಗೆ ಲಕ್ಷಗಟ್ಟಲೆ ಮತಗಳ ಮುನ್ನಡೆ

ಗುಜರಾತ್‌ನ ಗಾಂಧಿನಗರದಿಂದ ಸ್ಪರ್ಧಿಸಿರುವ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶದ ವಾರಣಾಸಿಯಿಂದ ಸ್ಪರ್ಧಿಸಿರುವ ಪ್ರದಾನಿ ನರೇಂದ್ರ ಮೋದಿ ಲಕ್ಷಗಟ್ಟಲೆ ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. 

09:55 AM (IST) Jun 04

ಸಿನಿ ತಾರೆಯರಿಗೆ ಎಲ್ಲೆಡೆ ಮುನ್ನಡೆ

ಮಥುರಾದಲ್ಲಿ ಸ್ಪರ್ಧಿಸಿದ ಹೇಮಮಾಲಿನಿ, ದಿಲ್ಲಿ ಈಶಾನ್ಯ ಮನೋಜ್ ತಿವಾರಿ, ಗೋರಕ್‌ಪುರದಲ್ಲಿ ರವಿ ಕಿಶನ್ ಹಾಗೂ ಹಾಗೂ ಮೀರತ್‌ನಲ್ಲಿ ರಾಮಾಯಾಣದ ರಾಮ ಪಾತ್ರಧಾರಿಯ ಬಿಜೆಪಿ ಅರುಣ್ ಗೋವಿಲ್ ಮುನ್ನಡೆ ಸಾಧಿಸಿದ್ದಾರೆ. 

09:36 AM (IST) Jun 04

ನಿನ್ನೆ ಏರಿಕೆ ಕಂಡ ಷೇರು ಮಾರುಕಟ್ಟೆ ಇಂದು ಆರಂಭಿಕಿ ಕುಸಿತ

ಷೇರು ಮಾರುಕಟ್ಟೆಯಲ್ಲಿ ಆರಂಭಿಕ ಭಾರೀ ಕುಸಿತ. ಸೆನ್ಸೆಕ್ಸ್ 1600 ಪಾಯಿಂಟ್ಸ್ ಕುಸಿತ. ನಿಫ್ಟಿ 500 ಪಾಯಿಂಟ್ಸ್ ಕುಸಿತ. 

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 

 

 

09:17 AM (IST) Jun 04

ಶಿವಗಂಗಾದಲ್ಲಿ ಕಾರ್ತಿ ಚಿದಂಬರಂಗೆ ಹಿನ್ನಡೆ

ತಮಿಳುನಾಡಿ ಶಿವಗಂಗಾದಲ್ಲಿ ಇಂಡಿ ಅಭ್ಯರ್ಥಿ ಕಾರ್ತಿ ಜಿದಂಬರಂ ಹಿನ್ನಡೆ ಕಾಯ್ದುಕೊಂಡಿದ್ದಾರೆ.ಕೊಯಮತ್ತೂರಿನಲ್ಲಿ ಇದೀಗ ಬಿಜೆಪಿಯ ಅಣ್ಣಮಲೈ ಹಿನ್ನಡೆ ಕಾಯ್ದುಕೊಳ್ಳುತ್ತಿದ್ದಾರೆ. 

09:04 AM (IST) Jun 04

ಉತ್ತರ ಪ್ರದೇಶದಲ್ಲಿ 35, ಕರ್ನಾಟಕದಲ್ಲಿ 22 ಕ್ಷೇತ್ರಗಳಲ್ಲ ಎನ್‌ಡಿಎ ಅಭ್ಯರ್ಥಿಗಳಿಗೆ ಮುನ್ನಡೆ

ಉತ್ತರ ಪ್ರದೇಶದ 80ರಲ್ಲಿ 35 ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಮುನ್ನಡೆ ಕಾಯ್ದಕೊಂಡರೆ, ಇಂಡಿ ಒಕ್ಟೂಟದ 17 ಹಾಗೂ ಇತರರು 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. 

ಪಶ್ಚಿಮ ಬಂಗಾಳದ 42 ಕ್ಷೇತ್ರಗಳಲ್ಲಿ 16 ಎನ್‌ಡಿಎ ಹಾಗೂ 16 ಇಂಡಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. 

ಬಿಹಾರದ 40 ಕ್ಷೇತ್ರಗಳಲ್ಲಿ 21 NDA ಹಾಗೂ 3  ಇಂಡಿ ಹಾಗೂ ಇತರೆ 3 ಅಭ್ಯರ್ಥಿಗಳು ಮುನ್ನಡೆ ಕಾಯ್ದಕೊಂಡಿದ್ದಾರೆ. 
ತಮಿಳುನಾಡಿನ 39 ಕ್ಷೇತ್ರಗಳಲ್ಲಿ 1 ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಮುಂದಿದ್ದು, ಉಳಿದು ಕ್ಷೇತ್ರಗಳಲ್ಲಿ ಇಂಡಿ ಒಕ್ಕೂಟದ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿದ್ದಾರೆ. 
ಕರ್ನಾಟಕದ 28 ಕ್ಷೇತ್ರಗಳಲ್ಲಿ 22 ಬಿಜೆಪಿ ಹಾಗೂ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. 

09:03 AM (IST) Jun 04

ಕೇರಳದಲ್ಲಿ 1 ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ, ಕ್ಲೀನ್ ಸ್ವೀಪ್‌ನತ್ತ ಮಧ್ಯಪ್ರದೇಶ

ಮಧ್ಯಪ್ರದೇಶದ 29 ಕ್ಷೇತ್ರಗಳಲ್ಲಿ 20 ಬಿಜೆಪಿ, 3 ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. 
ಗುಜರಾತ್‌ನ 26 ಕ್ಷೇತ್ರಗಳಲ್ಲಿ 24 ಬಿಜೆಪಿ, ಹಾಗೂ 3 ಕ್ಷೇತ್ರಗಳಲ್ಲಿ ಇಂಡಿ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ. 
ಆಂಧ್ರ ಪ್ರದೇಶ ಒಟ್ಟು 25 ಕ್ಷೇತ್ರಗಳಲ್ಲಿ 9 ಬಿಜೆಪಿ ಹಾಗೂ ಮೂರು ಕ್ಷೇತ್ರಘಲಲ್ಲಿ ಇತರರು ಮುನ್ನಡೆ ಸಾಧಿಸಿದ್ದಾರೆ. 
ರಾಜಸ್ಥಾನದ 25 ಕ್ಷೇತ್ರಗಳಲ್ಲಿ 17 ಎನ್‌ಡಿಎ ಹಾಗೂ ಇಂಡಿ ಒಕ್ಕೂಟದ 6 ಅಭ್ಯರ್ಥಿಗಳು ಮುಂದಿದ್ದಾರೆ. 
ಕೇರಳದ 20 ಕ್ಷೇತ್ರಗಳಲ್ಲಿ ಬಿಜೆಪಿಯ 1 ಹಾಗೂ ಇಂಡಿ ಒಕ್ಕೂಟದ 18 ಕ್ಷೇತ್ರಗಳಲ್ಲಿ ಇಂಡಿ ಅಭ್ಯರ್ಥಿಗಳು ಹಾಗೂ 1 ಕ್ಷೇತ್ರದಲ್ಲಿ ಇತರರು ಮುನ್ನಡೆ ಕಾಯ್ದುಕೊಂಡಿದ್ದಾರೆ.

08:42 AM (IST) Jun 04

ಹೈದರಾಬಾದ್‌ನ ಓವೈಸಿ ಎದುರು ಮಾಧವಿ ಲತಾಗೆ ಹಿನ್ನಡೆ

ದೇಶದೆಲ್ಲೆಡೆ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರಗಳ ಪೈಕಿ ಹೈದರಾಬದ್ ಸಹ ಒಂದಾಗಿದ್ದು, ಒವೈಸಿಯ ಎದುರು ಹಿಂದು ಫೈರ್ ಬ್ರ್ಯಾಂಡ್ ಎಂದೇ ಖ್ಯಾತರಾಗಿರುವ ಮಾಧವಿ ಲತಾ ಸ್ಪರ್ಧಿಸಿದ್ದು, ಸದ್ಯಕ್ಕೆ ಹಿನ್ನಡೆಯಾಗುತ್ತಿದೆ. 

ಗುಜರಾತ್‌ನಲ್ಲಿ 26 ಕ್ಷೇತ್ರಗಳ ಪೈಕಿ ಬಿಜೆಿ 24 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 

 

 

08:39 AM (IST) Jun 04

ಬೆಂಗಳೂರು ಕೇಂದ್ರದಲ್ಲಿ ಪಿ.ಸಿ.ಮೋಹನ್‌ಗೆ ಮುನ್ನಡೆ, ಗೆಲ್ಲುವ ವಿಶ್ವಾಸ ಅಭ್ಯರ್ಥಿಗೆ

ಈ ಬಾರಿ ನಾನು ಗೆಲ್ಲುವ ವಿಶ್ವಾಸವಿದೆ. ಮೂರು ಬಾರಿ ಗೆದ್ದು ನಾಲ್ಕನೇ ಬಾರಿ ಕೂಡ ಗೆಲ್ಲುವ ಭರವಸೆ ಇದೆ. ಪ್ರಚಾರಕ್ಕೆ ತೆರಳಿದ್ದಾಗ ಉತ್ತಮ‌ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ದೇಶಕ್ಕೆ ಮೋದಿ ಭರವಸೆ , ಬೆಂಗಳೂರು ಸೆಂಟ್ರಲ್‌ಗೆ ನಾನು ಕಾಂಗ್ರೆಸ್ ಗ್ಯಾರಂಟಿ ಭರವಸೆ ಮುಂದೆ ಮೋದಿ ಅಲೆ ಹೆಚ್ಚಾಗಿದೆ. ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ. ಅಂತರದ ಗೆಲುವಿನ ಬಗ್ಗೆ ಕಾದು ನೋಡಿ .NDA ಅಭ್ಯರ್ಥಿ ಪಿಸಿ ಮೋಹನ್ ಹೇಳಿಕೆ.

 

08:32 AM (IST) Jun 04

ಅಭಿವೃದ್ಧಿಗೆ ಜನರ ಮನ್ನಣೆ, ಮೋದಿಗೇ ಮಣೆ: ಬಾನ್ಸುರಿ ಸ್ವರಾಜ್

ಹೊಸದಿಲ್ಲಿ ಅಭ್ಯರ್ಥಿ ಬಾನ್ಸುರಿ ಸ್ವರಾಜ್ ಇದೇ ಮೊದಲ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಜನರು ಅಭಿವೃದ್ಧಿ ರಾಜಕಾರಣಕ್ಕೆ ಮನ್ನಣೆ ನೀಡಿದ್ದು ಮೋದಿಯೇ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

 

08:30 AM (IST) Jun 04

ಉತ್ತರ ಪ್ರದೇಶದಲ್ಲಿ 44 ಕ್ಷೇತ್ರಗಳಲ್ಲಿ ಎನ್‌ಡಿಎಗೆ ಮುನ್ನಡೆ

ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ ಶೇ.50ಕ್ಕಿಂತ ಹೆಚ್ಚು ಅಂದರೆ 44 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದಕೊಂಡರೆ, ತಮಿಳುನಾಡಿನ ಕೊಯಮತ್ತೂರಿನಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿಯಿಂದ ಸ್ಪರ್ಧಿಸಿದ್ದು, ಮುನ್ನಡೆ ಕಾಯ್ದುಕೊಂಡಿದ್ದಾರೆ. 

08:16 AM (IST) Jun 04

ಮೊದಲು ಎನ್‌ಡಿಎ ಮುನ್ನಡೆ ಸಾಧಿಸಿದ್ದು, ಇಂಡಿ ಕೂಟ ಕೆಲವು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ

ಎಲ್ಲೆಡೆ ಮತ ಎಣಿಕೆ ಆರಂಭವಾಗಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಕರ್ನಾಟಕ ಸೇರಿ ದೇಶದ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ. ಅಮಿತ್ ಶಾ ಗುಜರಾತ್‌ನ ಗಾಂಧಿ ನಗರದಲ್ಲಿ ಹಾಗೂ ಕೇರಳದ ವೈನಾಡಿನಲ್ಲಿ ರಾಹುಲ್ ಗಾಂಧಿ ಮುನ್ನಡೆ ಕಾಯ್ದುಕೊಂಡಿದ್ದಾರೆ. 

 

08:02 AM (IST) Jun 04

2019 ರ ಲೋಕ ಫಲಿತಾಂಶ ಹೇಗಿತ್ತು?

2019 ರ ಎಲ್ಲಾ ಎಕ್ಸಿಟ್ ಪೋಲ್‌ಗಳು ಮೋದಿ ಅಲೆಯನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ, ಆದರೆ ಎನ್‌ಡಿಎ ಮೈತ್ರಿಕೂಡ 353 ಸ್ಥಾನಗಳನ್ನು ಗಳಿಸಿತ್ತು. ಅದರಲ್ಲೂ ಬಿಜೆಪಿಯೊಂದೇ 303 ಸ್ಥಾನಗಳನ್ನು ಗೆದ್ದಿತ್ತು. ಪ್ರತಿಪಕ್ಷ ಯುಪಿಎ ಕೇವಲ 93 ಸ್ಥಾನಗಳಿಗೆ ತೃಪ್ತಿ ಪಟಟುಕೊಂಡಿತ್ತು. ಅದರಲ್ಲಿ ಕಾಂಗ್ರೆಸ್ಕೇವಲ 52 ಸ್ಥಾನಗಳನ್ನು ಪಡೆದುಕೊಂಡಿತ್ತು.

08:02 AM (IST) Jun 04

ಎಲ್ಲರ ಕಣ್ಣು West Bengal ಮತ್ತು Maharashtra ಮೇಲೆ

2029ರ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆಯೊಂದಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಹೊಂದಿದ್ದು, 48 ಸ್ಥಾನಗಳಲ್ಲಿ 41 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದ್ದು, ಬದಲಾದ ರಾಜಕೀಯದಲ್ಲಿ ಈದಗ ಶಿವಸೇನೆ ಹೋಳಾಗಿದ್ದು, ಒಂದು ಭಾಗ ಎನ್‌ಡಿಎ ಮೈತ್ರಿಯ ಭಾಗವಾಗಿದ್ದು, ಈ ವರ್ಷ ಫಲಿತಾಂಶ ಬರಲಿದೆ ಎಂಬುದು ಕುತೂಹಲ ಕೆರಳಿಸಿದೆ. 

42 ಲೋಕಸಭಾ ಕ್ಷೇತ್ರಗಳಲ್ಲಿ 2014 ಹಾಗೂ 2019ರಲ್ಲಿ ಟಿಎಂಸಿಗೆ ಠಕ್ಯರ್ ಕೊಟ್ಟಿದ್ದು ಬಿಜಿಪೆ ಈ ಸಾರಿ ಯಾವ ನಂಬರ್ ಮುಟ್ಟಲಿದೆ ಎನ್ನೋ ಕುತೂಹಲ ಎಲ್ಲರಿಗೂ ಇದೆ.

 

 

07:55 AM (IST) Jun 04

ಕೇಂದ್ರದಲ್ಲಿ ಸರ್ಕಾರ ರಚನೆಗೆ ಬೇಕು 272 ಸೀಟು


ಲೋಕಸಭೆಗೆ 7 ಹಂತದಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟು 64.2 ಕೋಟಿ ಜನರು ತಮ್ಮ ಹಕ್ಕು ಚಲಾಯಿಸುವ ಮೂಲಕ ಹೊಸ ವಿಶ್ವದಾಖಲೆ ಸೃಷ್ಟಿಯಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ. ಏಪ್ರಿಲ್ 19ಕ್ಕೆ ಆರಂಭವಾಗಿ ಜೂನ್ 1 ರಂದು ಮುಕ್ತಾಯವಾದ ಈ ಸುಧೀರ್ಘ ಮತದಾನ ಪ್ರಕ್ರಿಯೆಯ ನಂತರ ಕೇಂದ್ರದಲ್ಲಿ ಅಧಿಕಾರ ಗಳಿಸಲು ಯಾವುದೇ ಪಕ್ಷವಾದರೂ ಕನಿಷ್ಠ 272 ಸೀಟು ಗಳಿಸುವುದು ಅಗತ್ಯವಾಗಿದೆ.

07:38 AM (IST) Jun 04

ಮಧ್ಯಾಹ್ನದ ವೇಳೆಗೆ ಫಲಿತಾಂಶ ನಿಚ್ಚಳ

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಹಬ್ಬ ಅಂತಿಮ ಘಟ್ಟ ತಲುಪಿದ್ದು ಇಂದು ಲೋಕಸಭಾ ಚುನಾವಣೆ ಮತ ಎಣಿಕೆಯೊಂದಿಗೆ ತಾರ್ಕಿಕ ಅಂತ್ಯ ಕಾಣಲಿದೆ. ಕೆಲವೇ ಕ್ಷಣಗಳಲ್ಲಿ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ನಿಚ್ಚಳವಾಗಲಿದೆ. ಆಗ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಗೆಲ್ಲುವುದೋ ಅಥವಾ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟ ಗೆಲ್ಲುವುದೋ ತಿಳಿದು ಬರಲಿದೆ. ಎನ್‌ಡಿಎ ಗೆದ್ದರೆ ಪ್ರಧಾನಿ ನರೇಂದ್ರ ಮೋದಿ ಹ್ಯಾಟ್ರಿಕ್ ಬಾರಿಸಲಿದ್ದು, ಅದೇ ಹುದ್ದೆಯಲ್ಲಿ ಮುಂದುವರಿಯವುದು ಪಕ್ಕಾ. ಇಂಡಿಯಾ ಕೂಟ ಗೆದ್ದರೆ ಯಾರು ಪ್ರಧಾನಿ ಆಗುವರು ಎಂಬುದು ಕುತೂಹಲ. ಇವೆರಡೂ ಆಗದೇ ಅತಂತ್ರ ಲೋಕಸಭೆ ಸೃಷ್ಟಿಯಾದರೆ ಎಂಬ ಊಹಾಪೋಹವೂ ಇದ್ದು, ಆಗಿನ ವಿದ್ಯಮಾನ ಇನ್ನಷ್ಟು ಕುತೂಹಲಕಾರಿಯಾಗಲಿದೆ.
 


More Trending News