ಸೊರಗಿದ ಬಿಜೆಪಿಗೆ ಮತ್ತೊಂದು ಹಿನ್ನಡೆ, ವಾರಣಾಸಿಯಲ್ಲಿ ಮೋದಿ ಗೆದ್ದರೂ ಅಂತರ ಕುಸಿತ!

Published : Jun 04, 2024, 07:56 PM ISTUpdated : Jun 04, 2024, 09:47 PM IST
ಸೊರಗಿದ ಬಿಜೆಪಿಗೆ ಮತ್ತೊಂದು ಹಿನ್ನಡೆ, ವಾರಣಾಸಿಯಲ್ಲಿ ಮೋದಿ ಗೆದ್ದರೂ ಅಂತರ ಕುಸಿತ!

ಸಾರಾಂಶ

ಲೋಕಸಭಾ ಚುನಾವಣೆ ತೀರ್ಪಿನ ಚಿತ್ರಣ ಹೊರಬಿದ್ದಿದೆ. ಏಕಾಂಗಿಯಾಗಿ ಬಿಜೆಪಿ ಬಹುಮತ ಪಡೆಯಲು ವಿಫಲವಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ಆಘಾತ ಎದುರಾಗಿದೆ. ವಾರಣಾಸಿಯಲ್ಲಿ ಪ್ರಧಾನಿ ಮೋದಿ ಗೆಲುವಿನ ಅಂತರದಲ್ಲಿ ಭಾರಿ ಕುಸಿತ ಕಂಡಿದ್ದು, ಜನಪ್ರಿಯತೆ, ಮೋದಿ ಅಲೆ ಕುರಿತು ಮತ್ತೆ ಪ್ರಶ್ನೆ ಎದ್ದಿದೆ.

ನವದೆಹಲಿ(ಜೂನ್ 04) ಲೋಕಸಭಾ ಚುನಾವಣಾ ತೀರ್ಪು ಹೊರಬಿದ್ದಿದೆ. ಇಂಡಿಯಾ ಮೈತ್ರಿ ಕೂಟ ಪ್ರಬಲ ಪೈಪೋಟಿ ನೀಡುವ ಮೂಲಕ ಬಿಜೆಪಿ ನಾಗಾಲೋಟಕ್ಕೆ ಬ್ರೇಕ್ ಹಾಕಿದೆ. ಏಕಾಂಗಿಯಾಗಿ ಬಹುಮತ ಪಡೆಯಲು ಬಿಜೆಪಿ ವಿಫಲವಾಗಿದೆ.  ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟ 300ರ ಗಡಿ ದಾಟಿಲ್ಲ.  ಈ ಆಘಾತ ಒಂದೆಡೆಯಾದರೆ ವಾರಣಾಸಿಯಲ್ಲಿ ಸ್ಪರ್ಧಿಸಿದ ಪ್ರಧಾನಿ ಮೋದಿಗೆ ಹ್ಯಾಟ್ರಿಕ್ ಗೆಲುವು ಸಿಕ್ಕಿದೆ. ಆದರೆ ಈ ಬಾರಿ ಮೋದಿ ಗೆಲುವಿನ ಅಂತರ ಭಾರಿ ಕುಸಿತಗೊಂಡಿದೆ. ಈ ಬಾರಿ ಮೋದಿ ಗೆಲುವಿನ ಅಂತರ ಕೇವಲ 1.5 ಲಕ್ಷ ಮತಗಳು ಮಾತ್ರ.

ಸಾಮಾನ್ಯವಾಗಿ 1 ಲಕ್ಷ ಮತಗಳ ಅಂತರದಲ್ಲಿ ಗೆದ್ದರೆ ಉತ್ತಮ ಗೆಲುವು. ಆದರೆ ಪ್ರಧಾನಿ ಮೋದಿ ವಿಚಾರದಲ್ಲಿ ಹಾಗಲ್ಲ. ಕಾರಣ 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಬರೋಬ್ಬರಿ 4.89 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಈ ಗೆಲುವಿಗೆ ಹೋಲಿಸಿದರೆ ವಾರಣಾಸಿಯಲ್ಲಿ ಮೋದಿ ಅಲೆ ಕಡಿಮೆಯಾಗಿದೆ ಎಂದು ವಿಶ್ಲೇಷಣೆಗಳು ನಡೆಯುತ್ತಿದೆ.

ಅತ್ತೂ ಕರೆದರೂ ಆಪ್ ಕೈಹಿಡಿಯದ ಮತದಾರ, ದೆಹಲಿಯ 7 ಸ್ಥಾನದಲ್ಲಿ ಬಿಜೆಪಿ ಮುನ್ನಡೆ!

2024ರಲ್ಲಿ ಮೋದಿ ವಾರಣಾಸಿಯಲ್ಲಿ 612970 ಮತಗಳನ್ನು ಪಡೆದಿದ್ದಾರೆ. ಮೋದಿಗೆ ಪ್ರಬಲ ಪೈಪೋಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ 460457 ಮತಗಳನ್ನು ಪಡೆದು 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಒಂದು ಹಂತ ಮತಎಣಿಕೆಯಲ್ಲಿ ಮೋದಿ ಹಿನ್ನಡೆ ಅನುಭವಸಿದ್ದರು. ಆದರೆ ಮತ್ತೆ ಅಂತರ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಬಹುಜನ ಸಮಾಜವಾದಿ ಪಾರ್ಟಿ ನಾಯಕ ಎ ಜಮಾಲ್ ಲಾರಿ 33766 ಮತಗಳನ್ನು ಪಡೆಯುವ ಮೂಲಕ 3ನೇ ಸ್ಥಾನದಲ್ಲಿದ್ದಾರೆ.

2019ರ ಚುನಾವಣೆಗೆ ಹೋಲಿಸಿದರೆ ಮೋದಿ ಮತ ಗಳಿಕೆಯಲ್ಲೂ ಕುಸಿತ ಕಂಡಿದೆ. 2019ರಲ್ಲಿ ಮೋದಿ 674, 664 ಮತಗಳನ್ನು ಪಡೆದಿದ್ದಾರೆ. ಈ ಬಾರಿ 612970 ಮತಗಳನ್ನು ಪಡೆಯುವ ಮೂಲಕ ಈ ಹಿಂದಿನ ಸಂಖ್ಯೆಯನ್ನೂ ದಾಟಿಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ 581,022 ಮತಗಳನ್ನು ಪಡೆದಿದ್ದಾರೆ.

ರಾಮಜನ್ಮ ಭೂಮಿ ಆಯೋಧ್ಯೆಯಲ್ಲೇ ಬಿಜೆಪಿಗೆ ಹಿನ್ನಡೆ, ಇಂಡಿಯಾ ಮೈತ್ರಿಗೆ ಅಭೂತಪೂರ್ವ ಮುನ್ನಡೆ!

ಎನ್‌ಡಿಎ ಬಹುಮತ ನೀಡಿದ ಮತದಾರರಿಗೆ ಪ್ರಧಾನಿ ಮೋದಿ ಧನ್ಯವಾದ ಹೇಳಿದ್ದರೆ. ಮತ್ತಷ್ಟು ಉತ್ಸಾಹದಲ್ಲಿ, ಮತ್ತಷ್ಟು ಶಕ್ತಿಯೊಂದಿಗೆ ಉತ್ತಮ ಆಡಳಿತ ನೀಡುತ್ತೇವೆ ಎಂದು ಮೋದಿ ಹೇಳಿದ್ದಾರೆ. ಇತ್ತ ಮೋದಿ ಗೆಲುವಿನ ಅಂತರ ಕಡಿಮೆಯಾಗಿದೆ. ಮೋದಿ ನೇತೃತ್ವದ ಬಿಜೆಪಿ ಬಹುಮತ ಪಡೆಯಲೂ ವಿಫಲವಾಗಿದೆ. ಹೀಗಾಗಿ ಮೋದಿ ಪ್ರಧಾನಿಯಾಗಿ ಮುಂದವರಿಯಲು ನೈತಿಕತೆ ಇಲ್ಲ. ತಕ್ಷಣವೇ ಮೋದಿ ರಾಜೀನಾಮೆ ನೀಡಬೇಕು ಎಂದು ವಿಕ್ಷಗಳು ಆಗ್ರಹಿಸಿದ್ದಾರೆ. 


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು