Video: ಫಲಿತಾಂಶದ ಅಂಕಿ ಅಂಶ ಕಂಡು ಲೈವ್‌ನಲ್ಲಿಯೇ ಗಳಗಳನೇ ಅತ್ತ ಪ್ರದೀಪ್ ಗುಪ್ತಾ

Published : Jun 04, 2024, 05:22 PM IST
Video: ಫಲಿತಾಂಶದ ಅಂಕಿ ಅಂಶ ಕಂಡು ಲೈವ್‌ನಲ್ಲಿಯೇ ಗಳಗಳನೇ ಅತ್ತ ಪ್ರದೀಪ್ ಗುಪ್ತಾ

ಸಾರಾಂಶ

ಪ್ರದೀಪ್ ಗುಪ್ತಾ ಅವರ ಏಜೆನ್ಸಿ ನಡೆಸಿದ ಎಕ್ಸಿಟ್ ಪೋಲ್ ಮತ್ತು ಫಲಿತಾಂಶದ ಸದ್ಯದ ಅಂಕಿ ಅಂಶಗಳಲ್ಲಿ ತೀವ್ರ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ನೇರಪ್ರಸಾದ ವೇಳೆ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶದ (Loksabha Election 2024) ಅಂಕಿ ಅಂಶಗಳನ್ನು ಕಂಡು ಆಕ್ಸಿಸ್ ಮೈ ಇಂಡಿಯಾ ಚೇರ್‌ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಗುಪ್ತಾ ಲೈವ್‌ನಲ್ಲಿ ಕಣ್ಣೀರು ಹಾಕಿದ್ದಾರೆ.  ಪ್ರದೀಪ್ ಗುಪ್ತಾ ಅವರ ಏಜೆನ್ಸಿ ನಡೆಸಿದ ಎಕ್ಸಿಟ್ ಪೋಲ್ ಮತ್ತು ಫಲಿತಾಂಶದ ಸದ್ಯದ ಅಂಕಿ ಅಂಶಗಳಲ್ಲಿ ತೀವ್ರ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ನೇರಪ್ರಸಾದ ವೇಳೆ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ತರೇಹವಾರಿ ಸಾಲುಗಳೊಂದಿಗೆ ವೈರಲ್ ಆಗುತ್ತಿದೆ. ಮತದಾರ ಪ್ರಭುಗಳು ಖಾಸಗಿ ಸಂಸ್ಥೆಗಳು ನಡೆಸಿದ್ದ ಎಕ್ಸಿಟ್ ಪೋಲ್‌ನ್ನು ತಲೆಕೆಳಗಾಗಿಸಿದ್ದಾರೆ. 

ಆಕ್ಸಿಸ್ ಮೈ ಇಂಡಿಯಾ ತನ್ನ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿತ್ತು. ಎನ್‌‌ಡಿಎ 361-401 ಸ್ಥಾನ ಮತ್ತು ಇಂಡಿಯಾ ಬ್ಲಾಕ್ 131-166 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಇತರರು 8 ರಿಂದ 20 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಗಳಿವೆ ಎಂದು ಹೇಳಿತ್ತು. ಮಧ್ಯಾಹ್ನ ನಾಲ್ಕು ಗಂಟೆಯಾದ್ರೂ ಎನ್‌ಡಿಗೆ 300ರ ಗಡಿ ದಾಟಲು ಸಾಧ್ಯವಾಗುತ್ತಿಲ್ಲ. ಇನ್ನು ಎನ್‌ಡಿಐಎ ಒಕ್ಕೂಟ 230+ ನಲ್ಲಿದೆ. 

ವಿಡಿಯೋ ವೈರಲ್ 

ಪ್ರದೀಪ್ ಗುಪ್ತಾ ಕಣ್ಣೀರು ಹಾಕುತ್ತಿರುವ ವಿಡಿಯೋವನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಅಲ್ಟ್ ನ್ಯೂಸ್ ಸ್ಥಾಪಕ ಮೊಹಮ್ಮದ್ ಜುಬೈರ್, ಎರಡು ಎಮೋಜಿಗಳ ಜೊತೆ ಪ್ರದೀಪ್ ಗುಪ್ತಾ ಅಳುತ್ತಿದ್ದಾರೆ ಎಂದು ಬರೆದುಕೊಂಡು ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ. 

ಅಹಂಕಾರ ಪಂಕ್ಚರ್ ಮಾಡಿದ್ದಕ್ಕೆ ಧನ್ಯವಾದಗಳು; ಪ್ರಕಾಶ್ ರೈ ಮೊದಲ ಪ್ರತಿಕ್ರಿಯೆ

ಬೆಳಗಿನ ಆರಂಭಿಕ ಟ್ರೆಂಡ್‌ಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಕಡಿಮೆ ಸ್ಥಾನಗಳು ಬರುವ ಸೂಚನೆಗಳು ದೊರಕಿದ್ದವು. ಇದರ ಬೆನ್ನಲ್ಲಿಯೇ ಹೃದಯಾಘಾತದಿಂದ ವ್ಯಕ್ತಿ ಸಾವು ಕಂಡಿದ್ದಾರೆ. ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿ ಘಟನೆ ನಡೆದಿದೆ. ಶಿವಪ್ರಕಾಶ್ ಹಿರೇಮಠ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಬೆಳಗ್ಗೆ ಚುನಾವಣೆಯ ಫಲಿತಾಂಶ ನೋಡುವ ವೇಳೆಯೇ ಹೃದಯಾಘಾತವಾಗಿದೆ. ಟಿವಿ ನೋಡುತ್ತಿದ್ದಂತೆಯೇ ಅವರು ಕುಸಿದು ಬಿದ್ದಿದ್ದಾರೆ. ಮನೆಯ ಸೋಫಾ ಮೇಲೆ ಕುಳಿತು ಚುನಾವಣಾ ರಿಸಲ್ಟ್‌ ನೋಡುವಾಗಲೇ ಅವರಿಗೆ ಹೃದಯಾಘಾತವಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಅವರಿಗೆ ಹೃದಯಾಘಾತವಾಗಿದೆ.

ಈ ಬಾರಿ ಎಲ್ಲಾ ಎಕ್ಸಿಟ್‌ ಪೋಲ್‌ಗಳ ಲೆಕ್ಕಾಚಾರವನ್ನು ಉತ್ತರಪ್ರದೇಶ ರಾಜ್ಯ ಉಲ್ಟಾ ಮಾಡಿದೆ. ರಾಮ ಮಂದಿರ ವಿಚಾರದಿಂದ ದೊಡ್ಡ ಮಟ್ಟದ ಗೆಲುವಿನ ಅಲೆ ನಿರೀಕ್ಷೆ ಮಾಡಿದ್ದ ಬಿಜೆಪಿಗೆ ಅತಿದೊಡ್ಡ ಶಾಕ್‌ ಎದುರಾಗಿದೆ. ಪ್ರಸ್ತುತ ಮಾಹಿತಿಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ ಮುನ್ನಡೆಗಾಗಿ ಬಿಜೆಪಿ ಹಾಗೂ ಇಂಡಿ ಒಕ್ಕೂಟದ ನಡುವೆ ಥ್ರಿಲ್ಲಿಂಗ್‌ ಫೈಟ್‌ ನಡೆಯುತ್ತಿದೆ. ಉತ್ತರ ಪ್ರದೇಶ ರಾಜ್ಯದ ಫಲಿತಾಂಶ ಇಂಡಿಯಾ ಬ್ಲಾಕ್‌ ಪಾಲಿಗೂ ಅಚ್ಚರಿ ತಂದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಉತ್ತರ ಪ್ರದೇಶದಲ್ಲಿ ಇಂಡಿ ಒಕ್ಕೂಟ ನಿರೀಕ್ಷೆಗಿಂತ ಉತ್ತಮ ಪ್ರದರ್ಶನ ನೀಡುತ್ತಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ
ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ