ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೆ ನಿಂತು ಗೆದ್ದ ಸ್ಯಾಂಡಲ್‌ವುಡ್ ನಟಿ ರಚನಾ!

By Chethan KumarFirst Published Jun 5, 2024, 11:31 PM IST
Highlights

ರಿಯಲ್ ಸ್ಟಾರ್ ಉಪೇಂದ್ರ, ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ನಾಯಕಿಯಾಗಿದ್ದ ನಟಿ ರಚನಾ ಪಶ್ಚಿಮ ಬಂಗಾಳದಲ್ಲಿ ಲೋಕಸಭಾ ಚುನಾವಣೆ ನಿಂತು ಗೆದ್ದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದ ಈ ನಟಿ ಇದೀಗ ಸಂಸದೆಯಾಗಿದ್ದಾರೆ.
 

ಕೋಲ್ಕತಾ(ಜೂ.05) ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದು ಇದೀಗ ಸರ್ಕಾರ ರಚನೆ ಸರ್ಕಸ್ ನಡೆಯುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಹಲವು ನಟ ನಟಿಯರು ಅದೃಷ್ಠ ಪರೀಕ್ಷೆ ನಡೆಸಿದ್ದರು ಶ್ರೀರಾಮಾಯಣದ ನಟ ಅರುಣ್ ಗೋವಿಲ್‌ನಿಂದ ಹಿಡಿದು ಬಾಲಿವುಡ್ ನಟಿ ಕಂಗನಾ ರಣವಾತ್ ವರೆಗೆ ಹಲವು ನಟ ನಟಿಯರು ರಾಜಕೀಯ ಅಖಾಡಕ್ಕಿಳಿದಿದ್ದರು. ಈ ಪೈಕಿ ಓರ್ವ ನಟಿ ಕನ್ನಡಿಗರ ಗಮನಸೆಳೆದಿದ್ದಾರೆ. ಹೌದು, ಕೇಜ್ರಿಸ್ಟಾರ್ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರಗೆ ನಾಯಕಿಯಾಗಿದ್ದ ನಟಿ ರಚನಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೆ ನಿಂತು ಗೆದ್ದಿದ್ದಾರೆ.

ಸ್ಯಾಂಡಲ್‌ವುಡ್‌ನ ಪ್ರೀತ್ಸು ತಪ್ಪೇನಿಲ್ಲ, ಉಸಿರೆ ಚಿತ್ರದಲ್ಲಿ ರವಿಚಂದ್ರನ್ ನಾಯಕಿಯಾಗಿ ಅಭಿನಯಿಸಿದ ರಚಿತಾ ಬ್ಯಾನರ್ಜಿ ಇದೀಗ ಸಂಸದೆಯಾಗಿದ್ದಾರೆ. ಪಶ್ಚಿಮ ಬಂಗಾಳದ ಹೂಗ್ಲಿಯಿಂದ ರಚಿತಾ ರಾಮ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಮಮತಾ ಬ್ಯಾನರ್ಜಿ ನೇತತ್ವದ ಟಿಎಂಸಿಯಿಂದ ಸ್ಪರ್ಧಿಸಿದ ರಚನಾ ಬ್ಯಾನರ್ಜಿ 76853 ಮತಗಳ ಅಂತರದಿಂದ ಗೆದ್ದಿದ್ದಾರೆ. ಬಿಜೆಪಿ ನಾಯಕಿ ಲೊಕೆಟ್ ಚಟರ್ಜಿ ವಿರುದ್ಧ ಭಾರಿ ಅಂತರದ ಗೆಲುವು ದಾಖಲಿಸಿದ್ದಾರೆ.

Latest Videos

ನಟಿ ಕಂಗನಾ ರಣಾವತ್ ಭರ್ಜರಿ ಗೆಲುವಿಗೆ ತಾಯಿಯ ಸಿಹಿ ಮುತ್ತಿನ ಉಡುಗೊರೆ!

ಲೊಕೆಟ್ ಚಟರ್ಜಿ ಕೂಡ ಬಂಗಾಳಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಸಿದ್ದಾರೆ. ಆದರೆ ಚಿತ್ರರಂಗ ಬಿಟ್ಟು ಬಿಜೆಪಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯವಾಗಿದ್ದಾರೆ. ಪ್ರಬಲ ನಾಯಕಿ ಹಾಗೂ ಹಾಲಿ ಸಂಸದೆ ಲೊಕೆಟ್ ಚಟರ್ಜಿಯನ್ನೇ ಸೋಲಿಸಿದ ರಚನಾ ಸಂಸದೆಯಾಗಿದ್ದಾರೆ. 

ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ದಕ್ಷಿಣ ಭಾರತದ ಸಿನಿ ಕ್ಷೇತ್ರದಲ್ಲಿ ರಚನಾ ಬ್ಯಾನರ್ಜಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಉಪೇಂದ್ರ ಅಭಿನಯದ ತೆಲುಗು ಚಿತ್ರದಲ್ಲೂ ರಚನಾ ನಾಯಕಿಯಾಗಿದ್ದರು. ಮೆಘಾಸ್ಟಾರ್ ಚಿರಂಜೀವಿ ಸೇರಿದಂತೆ ಹಲವು ತೆಲುಗು ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ಬಾಲಿವುಡ್‌ನಲ್ಲೂ ರಚನಾ ಮೋಡಿ ಮಾಡಿದ್ದರು. ಅಭಿಷೇಕ್ ಬಚ್ಚನ್ ಅಭಿನಯದ ಸೂರ್ಯವಂಶ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಟಿವಿಯ ರಾಮ ಬಾಲಿವುಡ್‌ನ ಶತ್ರುಘ್ನ ಇಬ್ಬರ ಕೊರಳೇರಿದ ಜಯದ ಹಾರ

ಮದುವೆ ಬಳಿಕ ಸಿನಿಮಾ ಕ್ಷೇತ್ರದಿಂದ ನಿಧಾನವಾಗಿ ದೂರ ಉಳಿದರು. ಆದರೆ ವಿಚ್ಚೇದನದ ಬಳಿಕ ಕಿರುತೆರೆಯಲ್ಲಿ ಕಾಣಿಸಿಕೊಂಡ ರಚನಾ ಭಾರಿ ಜನಪ್ರಿಯತೆ ಪಡೆದಿದ್ದಾರೆ. ರಚನಾ ನಡೆಸಿಕೊಡುತ್ತಿದ್ದ ಬಂಗಾಳದಲ್ಲಿನ ದೀದಿ ನಂ.1 ಟಿವಿ ಕಾರ್ಯಕ್ರಮ ಭಾರಿ ಹಿಟ್ ಆಗಿದೆ. ಇದೇ ಕಾರ್ಯಕ್ರಮಕ್ಕೆ ರಚನಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಹ್ವಾನಿಸಿದ್ದರು. ಈ ಕಾರ್ಯಕ್ರಮದ ಬಳಿಕ ಮಮತಾ ಬ್ಯಾನರ್ಜಿಗೆ ಆತ್ಮೀಯರಾಗಿದ್ದ ರಚನಾಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಘೋಷಿಸಿತ್ತು

click me!