ಶ್ರೀರಾಮನ ಪಾತ್ರಧಾರಿ ಸೋಲಿಸೋಕೆ ಪಣ ತೊಟ್ಟರಾ ಅಖಿಲೇಶ್ ಯಾದವ್?

By Suvarna NewsFirst Published Apr 2, 2024, 9:42 PM IST
Highlights

ಮೀರತ್‌ನಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮನ ಪಾತ್ರಧಾರಿ ಅರುಣ್ ಗೋವಿಲ್ ವಿರುದ್ಧ ಸಮಾಜವಾದಿ ಪಕ್ಷ ತನ್ನ ಅಭ್ಯರ್ಥಿಯನ್ನ ಬದಲಾವಣೆ ಮಾಡಿದೆ. ಅಳೆದು ತೂಗಿ ಅಖಿಲೇಶ್ ಯಾದವ್ ಸರ್ದಾನ ಕ್ಷೇತ್ರದ ಎಸ್ಪಿ ಶಾಸಕ ಅತುಲ್ ಪ್ರಧಾನ್‌ಗೆ ಟಿಕೆಟ್ ಬದಲಾಯಿಸಿದ್ದಾರೆ.
 

ಶಿವರಾಜ್, ಬುಲೆಟಿನ್ ಪ್ರೊಡ್ಯೂಸರ್

ಉತ್ತರ ಪ್ರದೇಶದ ಲೋಕಸಭಾ ಚುನಾವಣೆ ಈ ಬಾರಿ ಹಲವು ಅಚ್ಚರಿಗಳಿಗೆ ಸಾಕ್ಷಿಯಾಗಲಿದೆ.. ಬಿಜೆಪಿ ಈ ಬಾರಿ ಘಟಾನುಘಟಿ ನಾಯಕರಿಗೆ ಟಿಕೆಟ್ ಬದಲಾವಣೆ ಮಾಡಿ ಹೊಸ ಮುಖಗಳಿಗೆ ಅವಕಾಶ ನೀಡಿದ್ದು. ರಾಮಮಂದಿರದ ಅಲೆಯಲ್ಲಿ ಎಲ್ಲಾ 80 ಸ್ಥಾನಗಳನ್ನ ಗೆದ್ದು ಕ್ಲೀನ್ ಸ್ವೀಪ್ ಮಾಡೋ ಗುರಿ ಇಟ್ಟುಕೊಂಡಂತೆ ಕಾಣುತ್ತಿದೆ.  ಇದೇ ಆಧಾರದಲ್ಲಿ ಬಿಜೆಪಿ ಹೈಕಮಾಂಡ್ ಮೀರತ್ ಲೋಕಸಭಾ ಕ್ಷೇತ್ರದಿಂದ ಶ್ರೀರಾಮನ ಪಾತ್ರಧಾರಿ ಅರುಣ್ ಗೋವಿಲ್ಗೆ ಟಿಕೆಟ್ ನೀಡಿತ್ತು. ಮುಸ್ಲಿಮರೇ ನಿರ್ಣಾಯಕರಾಗಿರೋ ಈ ಕ್ಷೇತ್ರದಲ್ಲಿ ಬಿಜೆಪಿ ಹಿಂದುತ್ವದ ಅಸ್ತ್ರ ಪ್ರಯೋಗಿಸಲು.. ದೂರದರ್ಶನದಲ್ಲಿ ಹಿಂದೆ ಪ್ರಸಾರವಾಗ್ತಿದ್ದ ರಾಮಾಯಣದ ಶ್ರೀರಾಮನ ಪಾತ್ರಧಾರಿ ಅರುಣ್ ಗೋವಿಲ್ರನ್ನ ಕಣಕ್ಕಿಳಿಸಿತ್ತು.. ಇದು ಸಮಾಜವಾದಿ ನಾಯಕ ಅಖಿಲೇಶ್ ಯಾದವ್ರ ನಿದ್ದೆಗೆಡಿಸಿದ್ದು..  ಮೀರತ್ ಕ್ಷೇತ್ರದ ತನ್ನ ಪಕ್ಷದ ಅಭ್ಯರ್ಥಿಯನ್ನ ಬದಲಾವಣೆ ಮಾಡುವಂತೆ ಮಾಡಿದೆ. 

ಸಮಾಜವಾದಿ ಪಕ್ಷ ಅಭ್ಯರ್ಥಿ ಬದಲಾಯಿಸಿದ್ದೇಕೆ?
ಬಿಜೆಪಿ ಅಭ್ಯರ್ಥಿ ಘೋಷಣೆಗೂ ಮುನ್ನವೇ ಟಿಕೆಟ್ ಘೋಷಣೆ ಮಾಡಿದ್ದ ಸಮಾಜವಾದಿ ಪಕ್ಷ ಮೀರತ್‌ನಿಂದ ದಲಿತ ನಾಯಕ ಭಾನು ಪ್ರತಾಪ್ ಸಿಂಗ್‌ರನ್ನು ಕಣಕ್ಕೆ ಇಳಿಸಿತ್ತು.. ಆದ್ರೆ ಬಿಜೆಪಿ ಯಾವಾಗ ರಾಮನ ಪಾತ್ರಧಾರಿ ಅರುಣ್ ಗೋವಿಲ್‌ಗೆ ಟಿಕೆಟ್ ನೀಡಿತ್ತೋ, ಎಸ್ಪಿ ನಾಯಕರು ತಮ್ಮ ನಿರ್ಧಾರವನ್ನ ಮರು ಪರಿಶೀಲಿಸುವಂತೆ ಮಾಡಿತ್ತು.. 

ಚೆನ್ನಪಟ್ಟಣದಲ್ಲಿ ಅಮಿತ್ ಶಾ ರೋಡ್ ಶೋ, ಡಿಕೆಶಿ ಕೋಟೆಯಲ್ಲಿ ಕೇಸರಿ ಸುನಾಮಿ!

ಇತ್ತೀಚೆಗೆ ಮೀರತ್‌ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್ ಗೋವಿಲ್ ಭಾಗಿಯಾಗಿದ್ದರು. ಆ ಸಭೆಯಲ್ಲಿ ಭಾಗಿಯಾಗಿದ್ದ ಜನರೆಲ್ಲಾ ಸ್ವತಃ ಶ್ರೀರಾಮನ ಹಾಡು ಹಾಡಿ ಕುಣಿದು ಸಂಭ್ರಮಿಸಿದ್ದಾರೆ.. ಅಷ್ಟೇ ಅಲ್ಲದೇ ಮೀರತ್ ಅರುಣ್ ಗೋವಿಲ್ ಹುಟ್ಟೂರು ಆಗಿದ್ದು.. ನನಗೆ ಇಲ್ಲಿಗೆ ಟಿಕೆಟ್ ನೀಡಿದ್ದು.. ನನ್ನ ಮನೆಗೆ ಬಂದಂತೆ ಆಗಿದೆ ಎಂದು ಇತ್ತೀಚೆಗೆ ಹೇಳಿದ್ದರು. ಇದು ಕೂಡ ಶ್ರೀರಾಮಮಂದಿರ ಉದ್ಘಾಟನೆ ಬಳಿಕ ಶ್ರೀರಾಮ ಮರಳಿ ಅಯೋಧ್ಯೆಗೆ ಬಂದಂತೆ ಭಾವನಾತ್ಮಕವಾಗಿ ಅಲ್ಲಿನ ಜನರನ್ನ ಬೆಸೆದುಕೊಳ್ಳುತ್ತಿದೆ. 

ಇನ್ನೂ ಭಾನು ಪ್ರತಾಪ್ ಸಿಂಗ್ ದಲಿತ ಅಭ್ಯರ್ಥಿಯಾಗಿದ್ದು, ಅರುಣ್ ಗೋವಿಲ್ ಟಿಕೆಟ್ ಘೋಷಣೆಗೂ ಮುಂಚೆ ಉತ್ತಮ ಅಭ್ಯರ್ಥಿಯೆಂದೇ ಬಿಂಬಿಸಲಾಗಿತ್ತು.. ಸುಪ್ರೀಂ ಕೋರ್ಟ್ ವಕೀಲರಾಗಿರೋ ಭಾನು ಪ್ರತಾಪ್ ಸಿಂಗ್, ದೇಶಾದ್ಯಂತ ಇವಿಎಂ ವಾಪಸ್‌ ಅಭಿಯಾನದಿಂದಲೇ ಪ್ರಖ್ಯಾತರಾಗಿದ್ರು. ಅಷ್ಟೇ ಅಲ್ಲದೇ ಲಖಿಂಪುರ್ ಖೇರಿ ರೈತ ಹೋರಾಟದಲ್ಲಿ ಸಹ ಮುಂಚೂಣಿಯಲ್ಲಿದ್ರು. ಆದ್ರೆ ಬಿಜೆಪಿ ಅಭ್ಯರ್ಥಿ ಘೋಷಣೆ ಬಳಿಕ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ತಮ್ಮ ಅಭ್ಯರ್ಥಿಯನ್ನ ಹಿಂಪಡೆದು ಮತ್ತೊಬ್ಬರಿಗೆ ಟಿಕೆಟ್ ನೀಡಿದ್ದಾರೆ. 

ಎಸ್ಪಿ ಹೊಸ ಅಭ್ಯರ್ಥಿ ಅತುಲ್ ಪ್ರಧಾನ್ ಯಾರು?
ತಮ್ಮ ದಲಿತ ಅಭ್ಯರ್ಥಿಯನ್ನ ಹಿಂಪಡೆದ ಬಳಿಕ ಸಮಾಜವಾದಿ ನಾಯಕರು ಮತ್ತೊಬ್ಬ ಪ್ರಬಲ ನಾಯಕನಿಗೆ ಟಿಕೆಟ್ ನೀಡಿದ್ದಾರೆ, ಸರ್ದಾನ ಕ್ಷೇತ್ರ ಸಮಾಜವಾದಿ ಪಕ್ಷದ ಶಾಸಕ ಅತುಲ್ ಪ್ರಧಾನ್ರನ್ನ  ಅರುಣ್ ಗೋವಿಲ್ ವಿರುದ್ಧ ಕಣಕ್ಕೆ ಇಳಿಸಿದ್ದಾರೆ. 

'ದೇಶವೇ ಹೊತ್ತಿ ಉರಿಯುತ್ತದೆ..' ರಾಹುಲ್‌ ಗಾಂಧಿ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು!

ಅತುಲ್ ಪ್ರಧಾನ್ 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ 2 ಬಾರಿ ಶಾಸಕ ಸಂಗೀತ್ ಸೋಮ್ರನ್ನ ಪರಾಭವಗೊಳಿಸಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ರು. ಸಮಾಜವಾದಿ ಪಕ್ಷದಲ್ಲಿದ್ರು ಇವರನ್ನ ಬಲಪಂಥೀಯ ನಾಯಕ ಎಂದೇ ಗುರುತಿಸಲಾಗುತ್ತೆ. ಇತ್ತೀಚೆಗೆ ಮುಜಾಫರ್ನಗರ ಗಲಭೆಯಲ್ಲೂ ಇವರು ಆರೋಪಿಯಾಗಿದ್ದು. ಉತ್ತರ ಪ್ರದೇಶದಲ್ಲಿ ಗೋಮಾಂಸ ವಿರುದ್ಧ  ಅಭಿಯಾನ ಮಾಡಿದ್ರು. 2022ರಲ್ಲಿ ಪ್ರಧಾನಿ ಮೋದಿ ವಿರುದ್ಧ ಠೀಕೆ ಮಾಡಿದ್ದಕ್ಕೆ ಅತುಲ್ ಪ್ರಧಾನ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿತ್ತು. ಅಷ್ಟೇ ಅಲ್ಲದೇ ಪೊಲೀಸರಿಗೂ ಬೆದರಿಕೆ ಹಾಕಿದ ಆರೋಪ ಇವರ ಮೇಲಿದೆ. 

ಸದ್ಯ ಮೀರತ್ನಲ್ಲಿ ಬಿಜೆಪಿ ಪ್ರಬಲ ಅಭ್ಯರ್ಥಿ ಅರುಣ್ ಗೋವಿಲ್ ವಿರುದ್ಧ ಸಮಾಜವಾದಿ ಹಿಂದುತ್ವದ ಹಿನ್ನೆಲೆ ಇರುವ ತನ್ನ ಶಾಸಕ ಅತುಲ್ ಪ್ರಧಾನ್ರನ್ನ ಕಣಕ್ಕೆ ಇಳಿಸಿದ್ದು.. ಮೀರತ್ನಲ್ಲಿ ಭಾರೀ ಪೈಪೋಟಿ ಎದುರಾಗುವ ನಿರೀಕ್ಷೆ ಮಾಡಲಾಗಿದೆ.
 

click me!