ಟಿಕೆಟ್ ಕೊಡದ್ದಕ್ಕೆ ತಮಿಳುನಾಡು ಸಂಸದ ಗಣೇಶಮೂರ್ತಿ ಆತ್ಮಹತ್ಯೆ ಯತ್ನ, ಪರಿಸ್ಥಿತಿ ಚಿಂತಾಜನಕ

By Kannadaprabha NewsFirst Published Mar 25, 2024, 8:56 AM IST
Highlights

ತಮಿಳುನಾಡಿನ ಎಂಡಿಎಂಕೆ ಸಂಸದ ಗಣೇಶಮೂರ್ತಿ ಅವರು ಕ್ರಿಮಿನಾಶಕ ಸೇವಿಸಿ ಭಾನುವಾರ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಕೆಟ್‌ ಕೈತಪ್ಪಿದ್ದಕ್ಕೆ ಅವರು ನಿರ್ಧಾರ ಕೈಗೊಂಡಿದ್ದರು ಎನ್ನಲಾಗಿದೆ.
 

ತಮಿಳುನಾಡು (ಮಾ.25): ಈರೋಡ್‌ ಲೋಕಸಭಾ ಸಂಸದ ಎಂಡಿಎಂಕೆ ನಾಯಕ ಗಣೇಶಮೂರ್ತಿ ಭಾನುವಾರ ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ಕೊಯಮತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅವರು ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಕೇಳಿದಾಗ ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಆದರೆ ವರದಿ ಈಗ ಅವರು ಆತ್ಮಹತ್ಯೆಗೆ ಪ್ರಯತ್ನಿಸಿರುವುದು ಸ್ಪಷ್ಟವಾಗಿದೆ. ಕೀಟನಾಶಕ 'ಸಲ್ಫಸ್' ಸೇವಿಸಿರುವುದು ಪ್ರಾಥಮಿಕ ವರದಿಯಿಂದ ಬೆಳಕಿಗೆ ಬಂದಿದ್ದ, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಭಾನುವಾರ ಬೆಳಿಗ್ಗೆ 9.30ರ ಸುಮಾರಿಗೆ ಗಣೇಶಮೂರ್ತಿ ಅವರು ವಾಂತಿ ಮಾಡಿಕೊಂಡು ತೀವ್ರ ಅಸ್ವಸ್ಥರಾದರು. ಆಗ ನೀರು ಬೆರೆಸಿದ ಕೀಟನಾಶಕ ಸೇವನೆ ಮಾಡಿರುವ ಬಗ್ಗೆ ನಮಗೆ ತಿಳಿಸಿದ್ದರು ಎಂದು ಕುಟುಂಬದ ಸದಸ್ಯರೊಬ್ಬರು ಹೇಳಿಕೆ ನೀಡಿದ್ದಾರೆ.

ಆಸ್ತಿಗಾಗಿ 9ವರ್ಷ ಅಪ್ಪನನ್ನೇ ಬೀದಿಲಿಟ್ಟ ರೇಮಂಡ್‌ ಮುಖ್ಯಸ್ಥನಿಗೆ ಹೆಂಡತಿ ಬಿಟ್ಟು ಹೋದ ಮೇಲೆ ತಂದೆ ಬೇಕಾಯ್ತು!

ತಕ್ಷಣ ಎಚ್ಚೆತ್ತ ಕುಟುಂಬಸ್ಥರು ಚಿಕಿತ್ಸೆಗಾಗಿ ಈರೋಡ್ ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅವರನ್ನು ತಪಾಸಣೆ  ಮಾಡಿ  ಐಸಿಯುಗೆ ದಾಖಲಿಸಿ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆದರೆ ಯಾವುದೇ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಮಧ್ಯಾಹ್ನ 2.30ಕ್ಕೆ ಅವರನ್ನು  ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಯ್ತು.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಬೆಳಗಾವಿಯಿಂದ ಶೆಟ್ಟರ್, ಸಂಸದ ಅನಂತ್ ಕುಮಾರ್ ಹೆಗಡೆಗೆ ಕೊಕ್!

ಲೋಕಸಭೆ ಚುನಾವಣೆಯಲ್ಲಿ ಈರೋಡ್ ಲೋಕಸಭೆ ಕ್ಷೇತ್ರದಿಂದ ಗಣೇಶಮೂರ್ತಿ ಅವರಿಗೆ ಟಿಕೆಟ್ ನೀಡಲು ಎಂಡಿಎಂಕೆ ಪಕ್ಷ ನಿರಾಕರಿಸಿದ್ದು, ಈ ಹಿನ್ನೆಲೆಯಲ್ಲಿ ತೀವ್ರ ಮನನೊಂದು ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಪಕ್ಷದ ಕೆಲ ಕಾರ್ಯಕರ್ತರು ಅಭಿಪ್ರಾಯ ಹೊರಹಾಕಿದ್ದಾರೆ. ಈರೋಡ್ ಪಟ್ಟಣದ ಆಸ್ಪತ್ರೆ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡದೆ ಉತ್ತರ ನೀಡಲು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.

77 ವರ್ಷದ ಕಾನೂನು ಪದವೀಧರ ಗಣೇಶಮೂರ್ತಿ  ಅವರು 2019 ಲೋಕಸಭೆ ಚುನಾವಣೆಯಲ್ಲಿ ಡಿಎಂಕೆಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಡಿಎಂಕೆಯ ‘ರೈಸಿಂಗ್ ಸನ್’ ಚಿಹ್ನೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಅವರ ಪತ್ನಿ ಬಾಲಾಮಣಿ ನಿಧನರಾಗಿದ್ದು, ಅವರು ತಮ್ಮ ಮಗ ಕಪಿಲನ್‌ನೊಂದಿಗೆ ವಾಸಿಸುತ್ತಿದ್ದಾರೆ.

click me!