ಕಾಂಗ್ರೆಸ್‌ಗೆ ರಾಜೀನಾಮೆ ಶಾಕ್, ಪಕ್ಷ ತೊರೆದು ಬಿಜೆಪಿ ಸೇರಿದ ಮಾಜಿ ಸಂಸದ ನವೀನ್ ಜಿಂದಾಲ್!

By Suvarna NewsFirst Published Mar 24, 2024, 8:44 PM IST
Highlights

ಕಾಂಗ್ರೆಸ್ ನಾಯಕ, ಕುರುಕ್ಷೇತ್ರ ಮಾಜಿ ಸಂಸದ ನವೀನ್ ಜಿಂದಾಲ್ ಇದೀಗ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ತೊರೆದ ಬೆನ್ನಲ್ಲೇ ನವೀನ್ ಜಿಂದಾಲ್ ಬಿಜೆಪಿ ಸೇರಿಕೊಂಡಿದ್ದಾರೆ.
 

ಹರ್ಯಾಣ(ಮಾ.24) ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರು ಪಕ್ಷಾಂತರ ಪರ್ವ ನಡೆಸುತ್ತಿದ್ದಾರೆ. ಕೆಲವರು ಟಿಕೆಟ್ ಸಿಗದೇ ಬೇರೆ ಪಕ್ಷಗಳತ್ತ ವಲಸೆ ಹೋಗುತ್ತಿದ್ದರೆ, ಮತ್ತೆ ಕೆಲವರು ಪಕ್ಷ ಕಡೆಗಣಿಸುತ್ತಿದೆ ಎಂದು ತೊರೆಯುತ್ತಿದ್ದಾರೆ. ಇದೀಗ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಹೊಡೆತ ಎದುರಾಗಿದೆ. ಹರ್ಯಾಣದ ಕುರುಕ್ಷೇತ್ರದ ಮಾಜಿ ಸಂಸದ ನವೀನ್ ಜಿಂದಾಲ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಬಿಜೆಪಿ ಸೇರಿಕೊಂಡಿದ್ದಾರೆ.

ಟ್ವಿಟರ್ ಮೂಲಕ ನವೀನ್ ಜಿಂದಾಲ್ ತಮ್ಮ ರಾಜೀನಾಮೆಯನ್ನು ಬಹಿರಂಗಪಡಿಸಿದ್ದರು. ಮೂರು ಸಾಲಿನ ರಾಜೀನಾಮೆಯನ್ನು ಟ್ವೀಟ್ ಮೂಲಕ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ್ದಾರೆ.  ಕುರಕ್ಷೇತ್ರದ ಸಂಸದನಾಗಿ ಕಳೆದ 10 ವರ್ಷ ಸಂಸತ್ತಿನಲ್ಲಿ ಕಾಂಗ್ರೆಸ್ ಪಕ್ಷವನ್ನ ಪ್ರತಿನಿಧಿಸಿದ್ದೇನೆ. ಈ ಸಂದರ್ಭದಲ್ಲಿ ನಾನು ಕಾಂಗ್ರೆಸ್ ನಾಯಕರಿಗೆ , ಹಿಂದಿನ ಪ್ರಧಾನಿ ಮನ್ ಮೋಹನ್ ಸಿಂಗ್ ಅವರಿಗೆ ಧನ್ಯವಾದ ಸಲ್ಲಿಸುತ್ತಿದ್ದೇನೆ. ಇಂದು ನಾನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಜಿಂದಾಲ್ ಟ್ವೀಟ್ ಮಾಡಿದ್ದಾರೆ. 

ಮೋದಿ ವಿರುದ್ಧ ಸ್ಪರ್ಧಿಸಲು ಮಾಜಿ ಎಬಿವಿಪಿ ಕಾರ್ಯಕರ್ತನಿಗೆ ಕಾಂಗ್ರೆಸ್ ಟಿಕೆಟ್, ಯಾರು ಈ ಅಜಯ್ ರೈ?

ಈ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಬಿಜೆಪಿ ಕಚೇಯಲ್ಲಿ ಹಾಜರಾಗಿದ್ದಾರೆ. ಪಕ್ಷದ ಮುಖಂಡರು ನವೀನ್ ಜಿಂದಾಲ್ ಅವರನ್ನು ಬಿಜೆಪಿಗೆ ಸ್ವಾಗತ ಕೋರಿದ್ದಾರೆ. ಲೋಕಸಭಾ ಚುನಾವಣೆ ಹೊತ್ತಲ್ಲಿ ನವೀನ್ ಜಿಂದಾಲ್ ಬಿಜೆಪಿ ಸೇರ್ಪಡೆ  ಹರ್ಯಾಣ ಭಾಗದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

 

Shri Naveen Jindal joins BJP at part headquarters in New Delhi. https://t.co/fS0yFCdUPn

— BJP (@BJP4India)

 

ನಿವೃತ್ತ ವಾಯುಸೇನಾ ಮುಖ್ಯಸ್ಥ ಆರ್‌ಕೆಎಸ್ ಬದೌರಿಯಾ ಬಿಜೆಪಿ ಸೇರಿಕೊಂಡ ಬೆನ್ನಲ್ಲೇ ಇದೀಗ ನವೀನ್ ಜಿಂದಾಲ್ ಕೂಡ ಬಿಜೆಪಿ ಸೇರಿಕೊಂಡಿದ್ದಾರೆ. ಜಿಂದಾಲ್ ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದು, ಸಂಸದರಾಗಿಯೂ ಕೆಲಸ ಮಾಡಿದ್ದಾರೆ. ಆದರೆ ಬದೌರಿಯಾ, ಸೇನೆಯಿಂದ ನಿವೃತ್ತಿಯಾಗಿ ಇದೇ ಮೊದಲ ಬಾರಿಗೆ ರಾಜಕೀಯಕ್ಕೆ ಧುಮುಕಿದ್ದಾರೆ.

ಲೋಕಸಭಾ ಚುನಾವಣೆ ಬೆನ್ನಲ್ಲೇ ಕೆಪಿಸಿಸಿಗೆ 5 ಹೊಸ ಕಾರ್ಯಾಧ್ಯಕ್ಷರ ನೇಮಕ

2004ರ ಲೋಕಸಭಾ ಚುನಾವಣೆಯಲ್ಲಿ ನವೀನ್ ಜಿಂದಾಲ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಕುರುಕ್ಷೇತ್ರದಿಂದ ಸ್ಪರ್ಧಿಸಿದ ನವೀನ್ ಜಿಂದಾಲ್ 130,000 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. 2009ರಲ್ಲಿ ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ನವೀನ್ ಜಿಂದಾಲ್ ಸತತ 2ನೇ ಬಾರಿಗೆ ಗೆಲುವು ಸಾಧಿಸಿದ್ದರು. ಆದರೆ 2014ರ ಚುನಾವಣೆಯಲ್ಲಿ ನವೀನ್ ಜಿಂದಾಲ್ ಸೋಲು ಅನುಭವಿಸಿದ್ದರು.

click me!