ಲೋಕಸಭೆ ಚುನಾವಣಾ ಪೂರ್ವ ಸಮೀಕ್ಷೆ: ಎನ್‌ಡಿಎಗೆ 378, ಇಂಡಿಯಾಗೆ 98

Published : Mar 06, 2024, 07:28 AM IST
ಲೋಕಸಭೆ ಚುನಾವಣಾ ಪೂರ್ವ ಸಮೀಕ್ಷೆ: ಎನ್‌ಡಿಎಗೆ 378, ಇಂಡಿಯಾಗೆ 98

ಸಾರಾಂಶ

 ಲೋಕಸಭೆ ಚುನಾವಣೆ ಹತ್ತಿರ ಆಗುತ್ತಿದ್ದಂತೆಯೇ ಇಂಡಿಯಾ ಟೀವಿ-ಸಿಎನ್‌ಎಕ್ಸ್‌ ಚುನಾವಣಾ ಪೂರ್ವ ಜಂಟಿ ಸಮೀಕ್ಷೆ ಫಲಿತಾಂಶ ಪ್ರಕಟಿಸಿದ್ದು, ಎನ್‌ಡಿಎ 378 ಹಾಗೂ ತೃಣಮೂಲ ಕಾಂಗ್ರೆಸ್‌ ಹೊರತಾದ ಇಂಡಿಯಾ ಕೂಟ 98 ಸ್ಥಾನ ಪಡೆಯಲಿವೆ ಎಂದು ಭವಿಷ್ಯ ನುಡಿದಿವೆ.

ನವದೆಹಲಿ: ಲೋಕಸಭೆ ಚುನಾವಣೆ ಹತ್ತಿರ ಆಗುತ್ತಿದ್ದಂತೆಯೇ ಇಂಡಿಯಾ ಟೀವಿ-ಸಿಎನ್‌ಎಕ್ಸ್‌ ಚುನಾವಣಾ ಪೂರ್ವ ಜಂಟಿ ಸಮೀಕ್ಷೆ ಫಲಿತಾಂಶ ಪ್ರಕಟಿಸಿದ್ದು, ಎನ್‌ಡಿಎ 378 ಹಾಗೂ ತೃಣಮೂಲ ಕಾಂಗ್ರೆಸ್‌ ಹೊರತಾದ ಇಂಡಿಯಾ ಕೂಟ 98 ಸ್ಥಾನ ಪಡೆಯಲಿವೆ ಎಂದು ಭವಿಷ್ಯ ನುಡಿದಿವೆ. ಈ ಪೈಕಿ ಬಿಜೆಪಿ 335 ಸ್ಥಾನ ಪಡೆಯಲಿದ್ದು, ಕಳೆದ ಸಲಕ್ಕಿಂತ 32 ಸ್ಥಾನ ಹೆಚ್ಚು ಸಂಪಾದಿಸಲಿದೆ. ಕಳೆದ ಸಲ 52 ಸ್ಥಾನ ಪಡೆದಿದ್ದ ಕಾಂಗ್ರೆಸ್‌ ಈ ಸಲ ಕೇವಲ 37ಕ್ಕೆ ಕುಸಿದು, ಈವರೆಗಿನ ಅತಿ ಕಳಪೆ ಸಾಧನೆ ಪ್ರದರ್ಶಿಸಲಿದೆ. ಅದು ಬಿಟ್ಟರೆ ತೃಣಮೂಲ ಕಾಂಗ್ರೆಸ್‌ 21 ಸ್ಥಾನ ಪಡೆದು 3ನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದಿದೆ. ಫೆ.5ರಿಂದ 23ವರೆಗೆ 1,62,900 ಜನರನ್ನು ಸಂದರ್ಶಿಸಿ ಈ ಸಮೀಕ್ಷೆ ನಡೆಸಲಾಗಿದೆ ಎಂದು ಇಂಡಿಯಾ ಟೀವಿ ಹೇಳಿದೆ.

ಕರ್ನಾಟಕದಲ್ಲಿ ಬಿಜೆಪಿಗೆ 22, ಜೆಡಿಎಸ್‌ಗೆ 2, ಕೈಗೆ 4

ನವದೆಹಲಿ: ಕರ್ನಾಟಕದಲ್ಲಿ ಬಿಜೆಪಿ 22 ಹಾಗೂ ಜೆಡಿಎಸ್‌ 2 ಸ್ಥಾನ ಗೆಲ್ಲುವ ಮೂಲಕ ಎನ್‌ಡಿಎಗೆ 24 ಸ್ಥಾನ ಸಿಗಲಿವೆ. ರಾಜ್ಯದ ಆಡಳಿತಾರೂಢ ಕಸ್ಗ್ರೆಸ್‌ ಕೇವಲ 4ರಲ್ಲಿ ಗೆಲ್ಲಲಿದೆ ಎಂದು ಇಂಡಿಯಾ ಟೀವಿ-ಸಿಎನ್‌ಎಕ್ಸ್‌ ಸಮೀಕ್ಷೆ ಹೇಳಿದೆ. ಪ್ರಸ್ತುತ ಬಿಜೆಪಿ 25, ಜೆಡಿಎಸ್‌ 1, ಕಾಂಗ್ರೆಸ್‌ 1 ಹಾಗೂ ಪಕ್ಷೇತರರು 1 ಸ್ಥಾನ ಹೊಂದಿದ್ದಾರೆ.

ಮಾ. 14 ಅಥವಾ 15ರಂದು ಲೋಕ ಚುನಾವಣಾ ದಿನಾಂಕ ಪ್ರಕಟ: 7 ಹಂತಗಳಲ್ಲಿ ಚುನಾವಣೆ ?
 

ಚುನಾವಣಾ ಬಾಂಡ್‌ ಮಾಹಿತಿ ಬಹಿರಂಗ: ಜೂ.30ರವರೆಗೆ ಸಮಯ ಕೇಳಿದ ಎಸ್‌ಬಿಐ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!
ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ