
ನವದೆಹಲಿ(ಮಾ.05) ಪಬ್‌ಜಿ ಮೂಲಕ ಪ್ರಿಯಕರ ಸಚಿನ್ ಜೊತೆ ಪ್ರೀತಿಯಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್‌ಗೆ ಹೊಸ ಸಂಕಷ್ಟ ಶುರುವಾಗಿದೆ. ತನ್ನ ನಾಲ್ಕು ಮಕ್ಕಳೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ಆಗಮಿಸಿ ಸಚಿನ್ ಜೊತೆ ಮದುವೆಯಾಗಿರುವ ಸೀಮಾ ಹೈದರ್ ವಿರುದ್ದ ಮೊದಲ ಪತಿ, ಪಾಕಿಸ್ತಾನದಲ್ಲಿರುವ ಗುಲಾಮ್ ಹೈದರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಸೀಮಾ ಹೈದರ್ ಏಕಾಏಕಿ ತನನ್ನು ತೊರೆದು ಹೋಗಿದ್ದಾಳೆ. ನನ್ನ ಮಕ್ಕಳ ಜೊತೆ ಭಾರತಕ್ಕೆ ತೆರಳಿ ವಿವಾಹವಾಗಿದ್ದಾರೆ ಎಂದು ಗುಲಾಮ್ ಹೈದರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಈ ಕುರಿತು ಸೀಮಾ ಹೈದರ್‌ಗೆ ವಕೀಲರ ಮೂಲಕ ನೋಟಿಸ್ ಕಳುಹಿಸಿದ್ದಾರೆ.
ಸೀಮಾ ಹೈದರ್ ಹಾಗೂ ಆಕೆಯ ಪತಿ ಸಚಿನ್ ಕ್ಷಮೆ ಕೇಳಬೇಕು. ದಂಡದ ರೂಪದಲ್ಲಿ 3 ಕೋಟಿ ರೂಪಾಯಿ ಪಾವತಿಸಬೇಕು ಎಂದು ಈ ನೋಟಿಸ್‌ನಲ್ಲಿ ಸೂಚಿಸಿದ್ದಾರೆ. ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ. ಇದರೊಳಗೆ ಕ್ಷಮೆ ಕೇಳಿ 3 ಕೋಟಿ ರೂಪಾಯಿ ಪಾವತಿಸಲು ಕೋರಲಾಗಿದೆ. ಗುಲಾಮ್ ಹೈದರ್ ವಕೀಲ ಅಲಿ ಮೊಮಿನ್ ಮೂಲಕ ಈ ನೋಟಿಸ್ ಕಳುಹಿಸಲಾಗಿದೆ. ಒಂದು ತಿಂಗಳ ಒಳಗೆ ಸೀಮಾ ಹೈದರ್ ಹಾಗೂ ಆಕೆಯ 2ನೇ ಪತಿ ಸಚಿನ್ ಕ್ಷಮೆ ಕೇಳಿ 3 ಕೋಟಿ ರೂಪಾಯಿ ಪಾವತಿಸದಿದ್ದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ.
ಸೀಮಾ ಹೈದರ್ ಬಳಿಕ, ಕೋಲ್ಕತ್ತಾದ ಹುಡುಗನನ್ನು ಮದುವೆಯಾಗಲು ಪಾಕಿಸ್ತಾನದಿಂದ ಬಂದ ಯುವತಿ!
ಗುಲಾಮ್ ಹೈದರ್ ಪ್ರಮುಖವಾಗಿ ತನ್ನ ಮಕ್ಕಳ ವಿಚಾರ ಮುಂದಿಟ್ಟಿದ್ದಾರೆ. ನನ್ನ ಮಕ್ಕಳನ್ನು ನೋಡುವ, ಪಾಲನೆ ಮಾಡುವ ಹಕ್ಕನ್ನು ಸೀಮಾ ಹೈದರ್ ಕಸಿದುಕೊಂಡಿದ್ದಾರೆ. ತಂದೆಯಾಗಿ ನನಗೆ ಮಕ್ಕಳ ಮೇಲೆ ಹಕ್ಕಿದೆ. ಹೀಗಾಗಿ ನನ್ನ ಮಕ್ಕಳನ್ನು ಸೀಮಾ ಹಿಂತಿರುಗಿಸಬೇಕು. ಮಕ್ಕಳು ನನ್ನ ಜೊತೆ ಇರಬೇಕು ಎಂದು ಗುಲಾಮ್ ಹೈದರ್ ಹೇಳಿದ್ದಾರೆ. ಇದೀಗ ಕಾನೂನು ಹೋರಾಟ ಆರಂಭಗೊಂಡಿದೆ. ಮಕ್ಕಳ ವಿಚಾರದ ಕಾರಣ ಈ ಪ್ರಕರಣ ಏನಾಗಲಿದೆ ಅನ್ನೋ ಕುತೂಹಲ ಒಂದೆಡೆಯಾದರೆ ಸೀಮಾ ಹೈದರ್ ಕುಟುಂಬಕ್ಕೆ ಆತಂಕ ಹೆಚ್ಚಾಗುತ್ತಿದೆ.
ಇತ್ತೀಚೆಗಷ್ಟೇ ಸೀಮಾ ಹೈದರ್ ಗುಡ್ ನ್ಯೂಸ್ ನೀಡಿದ್ದರು. 2024ರಲ್ಲಿ ತಾನು ತಾಯಿಯಾಗುತ್ತಿರುವುದಾಗಿ ಹೇಳಿದ್ದರು. ಇದೀಗ ಮಾನನಷ್ಟ ಮೊಕದ್ದಮೆ ಪ್ರಕರಣದಿಂದ ಸಂಕಷ್ಟ ಹೆಚ್ಚಾಗಿದೆ. ಇತ್ತ ಸೀಮಾ ಪರ ವಕೀಲರು ಈ ನೋಟಿಸ್‌ಗೆ ಉತ್ತರಿಸಲು ಸಜ್ಜಾಗಿದ್ದಾರೆ. ಕಾನೂನು ಸಲಹೆ ಪಡೆಯುತ್ತಿರುವ ಸೀಮಾ ಹೈದರ್, ಶೀಘ್ರದಲ್ಲೇ ನೋಟಿಸ್‌ಗೆ ಉತ್ತರ ನೀಡಲು ತಯಾರಿ ನಡೆಸಿದ್ದಾರೆ.
Karachi to Noida: ಪ್ರೀತಿಗಾಗಿ ಪಾಕ್‌ನಿಂದ ಬಂದ 4 ಮಕ್ಕಳ ತಾಯಿ ಸೀಮಾ ಹೈದರ್ 'ರಾ' ಏಜೆಂಟ್? ಏನಿದು ಟ್ವಿಸ್ಟ್?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ