ಲಾಕ್ಡೌನ್‌ ಸಂಕಷ್ಟ: ಕುಟುಂಬ ನಿರ್ವಹಣೆಗೆ ಯುವ ಮಹಿಳೆಯರ ಬಾಡಿಗೆ ತಾಯ್ತನ, ಅಂಡಾಣು ದಾನ!

Published : Jul 21, 2020, 09:48 AM ISTUpdated : Jul 21, 2020, 10:55 AM IST
ಲಾಕ್ಡೌನ್‌ ಸಂಕಷ್ಟ: ಕುಟುಂಬ ನಿರ್ವಹಣೆಗೆ ಯುವ ಮಹಿಳೆಯರ ಬಾಡಿಗೆ ತಾಯ್ತನ, ಅಂಡಾಣು ದಾನ!

ಸಾರಾಂಶ

ಲಾಕ್ಡೌನ್‌ ಸಂಕಷ್ಟ: ಯುವ ಮಹಿಳೆಯರ ಬಾಡಿಗೆ ತಾಯ್ತನ, ಅಂಡಾಣು ದಾನ!| ಹೈದರಾಬಾದ್‌ದಲ್ಲಿ ಕೆಲಸ ಇಲ್ಲದೆ ಕಂಗೆಟ್ಟವೃತ್ತಿಪರ ಯುವತಿಯರು| ಹಣಗಳಿಕೆ, ಕುಟುಂಬ ನಿರ್ವಹಣೆಗಾಗಿ ಬಾಡಿಗೆ ತಾಯ್ತನದ ಮೊರೆ

ಹೈದರಾಬಾದ್(ಜು.21)‌: ಲಾಕ್‌ಡೌನ್‌ನಿಂದಾಗಿ ಉದ್ಯೋಗ ನಷ್ಟಮತ್ತು ವೇತನ ಕಡಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಹೈದರಾಬಾದ್‌ನ ವೃತ್ತಿಪರ ಯುವ ಮಹಿಳೆಯರು ಅನಿವಾರ್ಯವಾಗಿ ಬಾಡಿಗೆ ತಾಯ್ತನ ಮತ್ತು ಅಂಡಾಣು ದಾನಕ್ಕೆ ಮುಂದಾಗುತ್ತಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ತಿಂಗಳ ಇಎಂಐ, ತಮ್ಮನ್ನು ಅವಲಂಬಿಸಿರುವ ಪೋಷಕರು, ಮನೆಯ ಜವಾಬ್ದಾರಿಯಿಂದಾಗಿ 25ರಿಂದ 35 ವರ್ಷದ ವೃತ್ತಿಪರ ಮಹಿಳೆಯರು ಬೇರೆ ಆಯ್ಕೆ ಕಾಣದೇ ಮಕ್ಕಳಿಲ್ಲದವರಿಗೆ ಬಾಡಿಗೆ ತಾಯಂದಿರಾಗುತ್ತಿದ್ದಾರೆ.

ಶಿಲ್ಪಾಶೆಟ್ಟಿಗರ್ಭ ಧರಿಸುವ ಆಸೆಗೆ ತಣ್ಣೀರೆರಚಿದ APLA; ಏನಿದು?

ಹೈದರಾಬಾದ್‌ನಲ್ಲಿ ಬಾಡಿಗೆ ತಾಯಿ ಆಗಲು ಮುಂದೆ ಬರುವ ಮಹಿಳೆಗೆ 5 ಲಕ್ಷ ರು. ವರೆಗೂ ಹಾಗೂ ಅಂಡಾಣು ದಾನಕ್ಕೆ 75ರಿಂದ 1 ಲಕ್ಷ ರು.ವರೆಗೂ ನೀಡಲಾಗುತ್ತದೆ. ಅದರ ಜೊತೆಗೆ ಆಹಾರ ಮತ್ತು ವೈದ್ಯಕೀಯ ವೆಚ್ಚವನ್ನೂ ಮಕ್ಕಳನ್ನು ಬಯಸುವ ಪೋಷಕರೇ ಭರಿಸುತ್ತಾರೆ. ಹೀಗಾಗಿ ವೃತ್ತಿಪರ ಯುವತಿಯರು ಕುಟುಂಬ ನಿರ್ವಹಣೆಯ ಅನಿವಾರ್ಯ ಕಾರಣಕ್ಕೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆಂಗ್ಲ ದೈನಿಕವೊಂದು ವರದಿ ಪ್ರಕಟಿಸಿದೆ.

ಬರ್ತ್‌ಡೇ ಬಾಯ್, ಶಾರುಖ್ ಮಗ ಅಬ್ರಾಮ್ ಬಗ್ಗೆ ಯಾಕೆ ಇಷ್ಟೆಲ್ಲಾ ರೂಮರ್?

‘ಲಾಕ್‌ಡೌನ್‌ಗೂ ಮುನ್ನ ನಾನು ಮಾಸಿಕ 45 ಸಾವಿರ ರು. ಸಂಪಾದಿಸುತ್ತಿದ್ದೆ. ಆದರೆ, ಆ ಬಳಿಕ ಏಕಾಏಕಿ ವೇತನ ಕಡಿತಗೊಳಿಸಲಾಯಿತು. ಇದರಿಂದ ಜೀವನ ದುಸ್ತರವಾಯಿತು. ಸ್ನೇಹಿತೆಯೊಬ್ಬರ ಸಲಹೆಯಂತೆ ಬಾಡಿಗೆ ತಾಯ್ತನಕ್ಕೆ ಒಪ್ಪಿಕೊಂಡೆ. ಈ ಕೆಲಸ ಮಾಡಲು ಯಾವುದೇ ಹಿಂಜರಿಕೆಯಿಲ್ಲ. ಕುಟುಂಬ ನಿರ್ವಹಣೆಯಷ್ಟೇ ಮುಖ್ಯ’ ಎಂದು ಹೈದರಾಬಾದ್‌ನ ಪ್ರತಿಷ್ಠಿತ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮೀರಾ ಎಂಬುವರು ತಮ್ಮ ಜೀವನದಲ್ಲಾದ ಘಟನೆಯೊಂದನ್ನು ವಿವರಿಸಿದ್ದಾರೆ. ಇದೇ ರೀತಿ ಇನ್ನೂ ಅನೇಕ ಮಹಿಳೆಯರು ಹಣ ಗಳಿಕೆಗಾಗಿ ಇಂಥ ಪರಾರ‍ಯಯ ಮಾರ್ಗ ಕಂಡುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಅಮೆರಿಕ ತೆರಿಗೆ ದಾಳಿಗೆ ಒಳಗಾದ ದೇಶಗಳಿಂದ ಮಾದರಿಯಾದ ಚೀನಾ; ಟ್ರಂಪ್‌ಗೆ ಶಾಕ್ ನೀಡಿ ದಾಖಲೆ ಬರೆದ ಡ್ರ್ಯಾಗನ್
ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ