ಮೂರನೇ ಹಂತದ ಲಾಕ್‌ಡೌನ್‌ ಕೊನೆ, ಹೇಗಿರಲಿದೆ 4.0?

By Suvarna NewsFirst Published May 14, 2020, 12:41 PM IST
Highlights

ಮೂರನೇ ಹಂತದ ಲಾಕ್‌ಡೌನ್‌ ಮೇ 17ರಂದು ಕೊನೆ| ಲಾಕ್ಡೌನ್‌ 4.0 ಮಾರ್ಗಸೂಚಿ ನಾಳೆ ಪ್ರಕಟ ಸಾಧ್ಯತೆ| ಹೊಸ ನಿಯಮದಲ್ಲಿ ಹಲವು ವಲಯಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡುವ ಸಾಧ್ಯತೆ 

ನವದೆಹಲಿ(ಮೇ.14): ಮೂರನೇ ಹಂತದ ಲಾಕ್‌ಡೌನ್‌ ಮೇ 17ರಂದು ಕೊನೆಗೊಳ್ಳಲಿದ್ದು, ಲಾಕ್‌ಡೌನ್‌ 4.0 ಹೇಗಿರಲಿದೆ ಎಂಬ ಕುರಿತಾದ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಮೇ 15ರಂದು ಘೋಷಿಸುವ ಸಾಧ್ಯತೆ ಇದೆ.

ಮಂಗಳವಾರ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದ ನರೇಂದ್ರ ಮೋದಿ ನಾಲ್ಕನೇ ಹಂತದ ಲಾಕ್‌ಡೌನ್‌ ಬಗ್ಗೆ ಮೇ 18ರ ಒಳಗಾಗಿ ಸಂಪೂರ್ಣ ಮಾಹಿಯನ್ನು ನೀಡಲಾಗುವುದು ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರ ರಾಜ್ಯಗಳ ಅಭಿಪ್ರಾಯವನ್ನು ಎದುರು ನೋಡುತ್ತಿದೆ.

ಕೊರೋನಾದಿಂದ ಜನ ಹೇಗೆ ಸಾಯುತ್ತಾರೆಂಬುದು ಕೊನೆಗೂ ಪತ್ತೆ!

ಹೊಸ ನಿಯಮದಲ್ಲಿ ಹಲವು ವಲಯಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡುವ ಸಾಧ್ಯತೆ ಇದೆ. ಜೊತೆಗೆ ನಿಯಮಾವಳಿಗಳು ರಾಜ್ಯಗಳ ಮುಖ್ಯಮಂತ್ರಿಗಳ ಸಲಹೆಗಳನ್ನುಅವಲಂಬಿಸಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿಯ ಲಾಕ್‌ಡೌನ್‌ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಸ್ವಚ್ಛತೆ ಮತ್ತು ಸ್ಯಾನಿಟೈಸರ್‌ ಬಳಕೆ ಹಿಂದಿನಂತೆಯೇ ಇರಲಿದೆ. ಅವುಗಳ ಪಾಲನೆಗೆ ಜನರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಕೊರೋನಾ ವೈರಸ್‌ ಎದುರಿಸಲು ಹಲವು ರಾಜ್ಯಗಳು ಉತ್ತಮ ರೀತಿಯಲ್ಲಿ ಸಜ್ಜಾಗಿವೆ. ನಾವು ಉತ್ತಮ ಆರೋಗ್ಯ ಸೇವೆ ನೀಡುವ ಸ್ಥಿತಿಯಲ್ಲಿದ್ದೇವೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

click me!