ಸೇನೆಯಲ್ಲಿ ಯುವಕರಿಗೆ 3 ವರ್ಷ ಸೇವೆ ಅವಕಾಶ?

By Kannadaprabha NewsFirst Published May 14, 2020, 9:25 AM IST
Highlights

ಸೇನೆಯಲ್ಲಿ ಯುವಕರಿಗೆ 3 ವರ್ಷ ಸೇವೆ ಅವಕಾಶ?| ಟೂರ್‌ ಡ್ಯೂಟಿ ಪ್ರಸ್ತಾವ ಪರಿಶೀಲನೆ| ಸೇನಾ ಜೀವನವನ್ನು ಅನುಭವಿಸಲು ಬಯಸುವ ಆಸಕ್ತಿ ಹೊಂದಿರುವ ಯುವಕರನ್ನು ಸೆಳೆಯಲು ಸೇನೆಯ ಯೋಜನೆ

ನವದೆಹಲಿ(ಮೇ.14): ಯುವ ವೃತ್ತಿಪರರೂ ಸೇರಿದಂತೆ ದೇಶದ ನಾಗರಿಕರು ಸೇನಾಧಿಕಾರಿಗಳು ಹಾಗೂ ಸೇನೆಯ ಇನ್ನಿತರೆ ಹುದ್ದೆಗಳಲ್ಲಿ ಸೇವೆ ಸಲ್ಲಿಸಲು ಮೂರು ವರ್ಷಗಳ ಮಟ್ಟಿಗೆ ಅವಕಾಶ ನೀಡುವ ಕುರಿತು ಭಾರತೀಯ ಸೇನೆ ಗಂಭೀರ ಪರಿಶೀಲನೆಯಲ್ಲಿ ತೊಡಗಿದೆ.

ಮೊದಲ ಹಂತದಲ್ಲಿ 100 ಅಧಿಕಾರಿಗಳು ಹಾಗೂ ಒಂದು ಸಾವಿರ ವ್ಯಕ್ತಿಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳುವ ಉದ್ದೇಶ ಹೊಂದಿದೆ.

'ನನ್ನನ್ನು ಸೇನೆಗೆ ಸೇರಿಸಿಕೊಳ್ಳಿ, ಇಲ್ಲಾ ಮಗಳನ್ನು ಕಳಿಸುತ್ತೇನೆ' ಹುತಾತ್ಮ ಯೋಧನ ಪತ್ನಿ

ಮೂರು ವರ್ಷಗಳ ಅವಧಿಗೆ ಸೇನೆಯಲ್ಲಿ ಸೇವೆ ಸಲ್ಲಿಸಲು ಸಿಗುವ ಈ ಅವಕಾಶವನ್ನು ‘ಟೂರ್‌ ಆಫ್‌ ಡ್ಯೂಟಿ’ ಎಂದು ಹೇಳಲಾಗುತ್ತದೆ.

ತ್ತಿಯಾಗಿ ಸೇನೆಯನ್ನು ಆಯ್ಕೆ ಮಾಡಿಕೊಳ್ಳದ ಆದರೆ ತಾತ್ಕಾಲಿಕ ಅವಧಿಗೆ ಸೇನಾ ಜೀವನವನ್ನು ಅನುಭವಿಸಲು ಬಯಸುವ ಆಸಕ್ತಿ ಹೊಂದಿರುವ ಯುವಕರನ್ನು ಸೆಳೆಯಲು ಸೇನೆ ಮುಂದಾಗಿದೆ.

click me!