ಗ್ರಾಮಕ್ಕೆ ಬಂದು ಬಿಸಿಲಿನಿಂದ ಬಳಲಿದ ಕುನೋ ಚೀತಾಗೆ ನೀರು ಕುಡಿಸಿದ ಗ್ರಾಮಸ್ಥರು, ವಿಡಿಯೋ

ಕೂನೋ ರಾಷ್ಟ್ರೀಯ ಉದ್ಯಾನವನದಿಂದ ಐದು ಚಿರತೆಗಳು ಆಹಾರ ಹುಡುಕುತ್ತಾ ಗ್ರಾಮಕ್ಕೆ ಎಂಟ್ರಿಕೊಟ್ಡಿದೆ. ಹೆಣ್ಣು ಚಿರತೆ ಜ್ವಾಲಾ ತನ್ನ ಮಕ್ಕಳೊಂದಿಗೆ ಮೇಕೆಯನ್ನು ಬೇಟೆಯಾಡಿದ ಬಳಿಕ ಬಿಸಿಲಿನಿಂದ ಬಸವಳಿದಿದೆ. ಉರಿ ಬಿಸಿಲಿನಿಂದ ಬಸವಳಿದು ವಿಶ್ರಾಂತಿ ಪಡೆಯುತ್ತಿದ್ದ ಚೀತಾಗೆ ಯುವಕನೊಬ್ಬ ನೀರು ಕುಡಿಸುತ್ತಿರುವ ದೃಶ್ಯ ಭಾರಿ ವೈರಲ್ ಆಗಿದೆ. 
 


ಇಂದೋರ್(ಏ.05)  ಕುನೋ ರಾಷ್ಟ್ರೀಯ ಉದ್ಯಾನವನದ 5 ಚೀತಾಗಳು ನಾಡಿಗೆ ಎಂಟ್ರಿಕೊಟ್ಟು ಮೇಕೆ ಸೇರಿದಂತೆ ಇತರ ಸಾಕು ಪ್ರಾಣಿಗಳ ಭೇಟೆಯಾಡದ ಘಟನೆ ನಡೆದಿದೆ. ದಟ್ಟ ಕಾಡಿನಿಂದ ನಾಡಗೆ ಬಂದ ಚೀತಾಗಳು ಉರಿ ಬಿಸಿಲಿನಿಂದ ಬಸವಳಿದಿದೆ. ಪರಿಣಾಮ ಈ ಚೀತಾಗಗಳಿಗೆ ಗ್ರಾಮಸ್ಥರು ನೀರು ಕುಡಿಸಿದ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ.  ಕುನೋ ರಾಷ್ಟ್ರೀಯ ಅರಣ್ಯದ ಪಕ್ಕದಲ್ಲಿರುವ ಉಮರಿಕಲನ್ ಗ್ರಾಮದಲ್ಲಿ ಈ ಚಿರತೆಗಳು ರೈತನ ಕೆಲ ಮೇಕೆಗಳನ್ನು ಬೇಟೆಯಾಡಿದೆ. ಬಳಿಕ ಅಲ್ಲೇ ವಿಶ್ರಾಂತಿಗೆ ಜಾರಿದೆ. ಉರಿ ಬಿಸಿಲಿನ ಕಾರಣದಿಂದ ಚೀತಾಗಳು ತೀರಾ ಬಸವಳಿದಿದೆ. ಹೀಗಾಗಿ ಗ್ರಾಮದ ಯುವಕನೊಬ್ಬ ಚೀತಾಗಳ ಬಳಿ ಧೈರ್ಯದಿಂದ ತೆರಳಿ ನೀರು ಕುಡಿಸಿದ ಘಟನೆ ವೈರಲ್ ಆಗಿದೆ.  

ಉಮರಿಕಲನ್ ಗ್ರಾಮದಲ್ಲಿ ದಿಢೀರ್ ಸಂಚಲನ
ವಾಸ್ತವವಾಗಿ, ಉಮರಿಕಲನ್ ಗ್ರಾಮದಲ್ಲಿ ಇದ್ದಕ್ಕಿದ್ದಂತೆ ಸಂಚಲನ ಸಷ್ಟಿಯಾಗಿತ್ತು. ಕುನೋ ಅರಣ್ಯದ ಚೀತಾಗಳು ನಾಡಿಗೆ ಆಗಮಿಸಿತ್ತು. ದಟ್ಟ ಕಾಡಿನಿಂದ ನಾಡಿಗೆ ಬಂದ ಚೀತಾ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು.  ಗ್ರಾಮಸ್ಥರು ಐದು ಚಿರತೆಗಳು ಹೊಲಗಳ ಬಳಿ ಅಡ್ಡಾಡುತ್ತಿರುವುದನ್ನು ನೋಡಿದ್ದಾರೆ. ಹೆಣ್ಣ ಚೀತಾ ಜ್ವಾಲಾ ಹಾಗೂ ಅದರ ಮರಿಗಳು ರೈತನ ಮೇಕೆಗಳನ್ನು ಗುರಿಯಾಗಿಸಿತ್ತು. ಮತ್ತು ಅಲ್ಲೇ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯಲು ಪ್ರಾರಂಭಿಸಿದರು. ಈ ಸಂಪೂರ್ಣ ಘಟನೆಯನ್ನು ಗ್ರಾಮದ ಕೆಲವು ಯುವಕರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ.

Latest Videos

ಕುನೋ ಅರಣ್ಯದಲ್ಲಿ 5 ಮರಿಗಳೊಂದಿಗೆ ಆಫ್ರಿಕಾ ಚೀತಾ ಆಟ,ಹೃದಯಸ್ವರ್ಶಿ ವಿಡಿಯೋ!

ಸಿನಿಮಾ ದೃಶ್ಯಕ್ಕಿಂತ ಕಡಿಮೆಯಿಲ್ಲದ ವೈರಲ್ ವಿಡಿಯೋ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಯಾವುದೇ ಸಿನಿಮಾ ದೃಶ್ಯಕ್ಕಿಂತ ಕಡಿಮೆಯಿಲ್ಲ. ವಿಡಿಯೋದಲ್ಲಿ ಜ್ವಾಲಾ ಮತ್ತು ನಾಲ್ಕು ಮರಿಗಳು ಕೆಳಗೆ ವಿಶ್ರಾಂತಿ ಪಡೆಯುತ್ತಿರುವುದು ಪತ್ತೆಯಾಗಿದೆ. ಬಿಸಿಲಿನ ಕಾರಣದಿಂದ ಚೀತಾಗಳು ಏಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಯುವಕನೊಬ್ಬ ಬಂದು ಅವರ ಮುಂದೆ ಪಾತ್ರೆಯಲ್ಲಿ ನೀರು ಇಟ್ಟಿದ್ದಾನೆ. ಸ್ವಲ್ಪ ಸಮಯದ ನಂತರ, ಚಿರತೆಗಳು ಎದ್ದು ಯಾವುದೇ ಭಯವಿಲ್ಲದೆ ನೀರು ಕುಡಿಯಲು ಆರಂಭಿಸಿದೆ.

 

Viral Video: चीतों से दोस्ती- क्योंकि चीता भी 'पीता' है pic.twitter.com/y59YQyOOEl

— Asianetnews Hindi (@AsianetNewsHN)

 

ಕೂನೋ ರಾಷ್ಟ್ರೀಯ ಉದ್ಯಾನವನದ ಟ್ರ್ಯಾಕಿಂಗ್ ತಂಡದಿಂದ ಘಟನೆಯ ಮಾಹಿತಿ
ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ಕೂನೋ ರಾಷ್ಟ್ರೀಯ ಉದ್ಯಾನವನದ ಟ್ರ್ಯಾಕಿಂಗ್ ತಂಡ ಸ್ಥಳಕ್ಕೆ ಧಾವಿಸಿತು. ಅವರು ಕೇವಲ ಜಮೀನುಗಳನ್ನು ಪರಿಶೀಲಿಸಲಿಲ್ಲ, ಆದರೆ ಗ್ರಾಮಸ್ಥರೊಂದಿಗೆ ಮಾತನಾಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಟ್ರ್ಯಾಕಿಂಗ್ ತಂಡದ ಸದಸ್ಯರು ಈಗ ಈ ಚಿರತೆಗಳ ಚಲನವಲನದ ಮೇಲೆ ನಿರಂತರವಾಗಿ ನಿಗಾ ಇಟ್ಟಿದ್ದಾರೆ. ಚೀತಾಗಳನ್ನು ಮತ್ತೆ ಕಾಡಿಗೆ ಮರಳುವಂತೆ ಮಾಡಲು ಅಧಿಕಾರಿಗಳ ತಂಡ ಶ್ರಮಿಸುತ್ತಿದೆ. 

ಗುಡ್ ನ್ಯೂಸ್, ಕುನೋ ಅರಣ್ಯದಲ್ಲಿ 5 ಮರಿಗಳಿಗೆ ಜನ್ಮ ನೀಡಿದ ಆಫ್ರಿಕಾ ಚೀತಾ ಗಾಮಿನಿ!

click me!