ಲೀವ್ ಇನ್ ರಿಲೇಶನ್‌ಶಿಪ್ ನೈತಿಕವಾಗಿ, ಸಾಮಾಜಿಕವಾಗಿ ಒಪ್ಪಲು ಸಾಧ್ಯವಿಲ್ಲ; ಹೈಕೋರ್ಟ್!

By Suvarna NewsFirst Published May 18, 2021, 9:33 PM IST
Highlights
  • ಲೀವ್ ಇನ್ ರಿಲೇಶನ್‌ಶಿಫ್ ಸಂಬಂಧಗಳು ಇದೀಗ ಸಾಮಾನ್ಯವಾಗುತ್ತಿವೆ
  • ಜೊತೆಯಾಗಿರುವ ಈ ಸಂಬಂಧ ಕುರಿತು ಅಷ್ಟೇ ಪ್ರಕರಣಗಳು ದಾಖಲಾಗಿವೆ
  • ಲೀವ್ ಇನ್ ರಿಲೇಶನ್‌ಶಿಪ್ ಒಪ್ಪಲು ಸಾಧ್ಯವಿಲ್ಲ ಎಂದ ಹೈಕೋರ್ಟ್

ಚಂಡಿಘಡ(ಮೇ.18): ಲೀವ್ ಇನ್ ರಿಲೇಶನ್‌ಶಿಪ್ ಕುರಿತು ಈ ಯುಗದಲ್ಲಿ ಕೇಳದವರು ಅಥವಾ ಅನುಭವಿಸದವರು ವಿರಳ ಎಂದರೂ ತಪ್ಪಲ್ಲ. ಅಷ್ಟರ ಮಟ್ಟಿಗೆ ಯುವ ಜನಾಂಗವನ್ನು ಲೀವ್ ಇನ್ ರಿಲೇಶನ್‌ಶಿಪ್ ಆವರಿಸಿಕೊಂಡು ಬಿಟ್ಟಿದೆ. ಮದುವೆ ಕಟ್ಟುಪಾಡುಗಳಿಲ್ಲದೆ ಜೊತೆಯಾಗಿರುವ ಸಂಬಂಧವೇ ಲೀವ್ ಇನ್ ರಿಲೇಶನ್‌ಶಿಪ್. ರಿಲೇಶನ್‌ಶಿಪ್‌ ಮದುವೆಯ ಅರ್ಥ ಪಡೆದುಕೊಂಡರೆ ಸಂಸಾರ, ಇಲ್ಲದಿದ್ದರೆ ಗುಡ್‌ ಬಾಯ್. ಇದೀಗ ಈ ಸಂಬಂಧ ನೈತಿಕವಾಗಿ, ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲ ಎಂದು ಪಂಜಾಬ್ ಹೈಕೋರ್ಟ್ ಹೇಳಿದೆ.

ಹರೆಯದ ಸ್ವಂತ ಮಗುವನ್ನು ಮದುವೆಯಾಗಲು ಕೋರ್ಟ್ ಮೆಟ್ಟಿಲೇರಿದ ಪೋಷಕ..!.

ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಜೋಡಿಗಳು ತಮಗೆ ರಕ್ಷಣೆ ನೀಡಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. 19 ವರ್ಷದ ಗುಲ್ಜಾ ಕುಮಾರಿ ಹಾಗೂ 22 ವರ್ಷದ ಗುರ್ವಿಂದರ್ ಸಿಂಗ್ ಸಲ್ಲಿಸಿದ ಅರ್ಜಿ ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್, ಈ ಮಹತ್ವದ ಆದೇಶ ನೀಡಿದೆ. 

ಗುಲ್ಜಾ ಕುಮಾರಿ ಹಾಗೂ ಗುರ್ವಿಂದರ್ ತಮ್ಮ ಅರ್ಜಿಯಲ್ಲಿ ನಾವು ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದು, ಶೀಘ್ರದಲ್ಲೇ ಮದುವೆಯಾಗುತ್ತೇವೆ. ಆದರೆ ಗುಲ್ಜಾ ಕುಮಾರಿ ಪೋಷಕರಿಂದ ನಮಗೆ ಜೀವ ಬೆದರಿಕೆ ಇದೆ. ಹೀಗಾಗಿ ರಕ್ಷಣೆ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.

ಗರ್ಲ್ ಫ್ರೆಂಡ್ ಮೀಟ್ ಮಾಡೋದು ಅಗತ್ಯ ಸೇವೆಯಡಿ ಬರಲ್ವಲ್ಲಪ್ಪಾ!

ಅರ್ಜಿ ಕೈಗೆತ್ತಿಕೊಂಡ ಪಂಜಾಬ್ ಹೈಕೋರ್ಟ್, ಅರ್ಜಿದಾರರು ತಮ್ಮ ಲೀವ್ ಇನ್ ರಿಲೇಶನ್‌ಶಿಪ್ ಸಂಬಂಧಕ್ಕೆ ಅನುಮೋದನೆ ಕೋರಿದ್ದಾರೆ. ಲೀವ್ ಇನ್ ರಿಲೇಶನ್‌ಶಿಪ್ ನೈತಿಕವಾಗಿ, ಸಾಮಾಜಿಕವಾಗಿ ಸ್ವೀಕಾರರ್ಹವಲ್ಲ ಎಂದು ನ್ಯಾಯಮೂರ್ತಿ ಎಚ್.ಎಸ್. ಮದನ್ ಅರ್ಜಿಯನ್ನು ತಿರಸ್ಕರಿಸಿ ಆದೇಶ ಹೊರಡಿಸಿದ್ದಾರೆ.

click me!