ಬಂಗಾಳ ರಾಜ್ಯಪಾಲರ ಬದಲಾಯಿಸಿ; ಪ್ರಧಾನಿ ಮೋದಿ, ರಾಷ್ಟ್ರಪತಿಗೆ ಮಮತಾ ಪತ್ರ!

By Suvarna News  |  First Published May 18, 2021, 8:49 PM IST
  • ಬಂಗಾಳ ರಾಜ್ಯಪಾಲರ ಬದಲಾಯಿಸಲು ಮಮತಾ ಆಗ್ರಹ
  • ಪ್ರಧಾನಿ, ರಾಷ್ಟ್ರಪತಿಗೆ ಪತ್ರ ಬರೆದ ಸಿಎಂ ಮಮತಾ ಬ್ಯಾನರ್ಜಿ
     

ಕೋಲ್ಕತಾ(ಮೇ.18): ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ನೂತನ ಸರ್ಕಾರ ಹಾಗೂ ಈ ಹಿಂದಿನ ಸರ್ಕಾರಕ್ಕೆ ತೀವ್ರ ತಲೆನೋವಾಗಿರುವುದು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ದನ್ಕರ್. ಚುನಾವಣೆ  ಬಳಿಕ ನಡೆದ ಹಿಂಸಾಚಾರ, ಚುನಾವಣೆ ಸಂದರ್ಭದಲ್ಲಿನ ಗೋಲಿಬಾರ್,  ಹಿಂದೂಗಳ ಮೇಲಿನ ದೌರ್ಜ್ಯನ್ಯ ಸೇರಿದಂತೆ ಹಲವು ಕಾರಣಗಳಿಗೆ ರಾಜ್ಯಪಾಲರು ಮಮತಾಗೆ ಚಾಟಿ ಬೀಸಿದ್ದಾರೆ. ಇದೀಗ ಮಮತಾ ಬ್ಯಾನರ್ಜಿ ರಾಜ್ಯಪಾಲರನ್ನೇ ಬದಲಾಯಿಸುವಂತೆ ಆಗ್ರಹಿಸಿದ್ದಾರೆ.

ಬಂಗಾಳದಲ್ಲಿ ರಾಜ್ಯಪಾಲರ ಕಾರಿಗೇ ತಡೆ, ಕಪ್ಪು ಬಾವುಟ ಪ್ರದರ್ಶನ!.

Tap to resize

Latest Videos

ಪಶ್ಚಿಮ ಬಂಗಾಳದಲ್ಲಿ ಉತ್ತಮ ಆಡಳಿತ ನಡೆಸಲು ಶೀಘ್ರದಲ್ಲಿ ರಾಜ್ಯಪಾಲರನ್ನು ಬದಲಾಯಿಸಿ ಎಂದು ಸಿಎಂ ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಗೆ ಪತ್ರ ಬರೆದಿದ್ದಾರೆ.  ನಾರಾದ ಹಗರಣ ಕುರಿತು ನಾಲ್ವರು ಟಿಎಂಸಿ ನಾಯಕರನ್ನು ಸಿಬಿಐ ಪೊಲೀಸ್ ಬಂಧಿಸಿದ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಅಮಾನತುಗೊಂಡಿದ್ದ ಪೊಲೀಸ್‌ ಅಧಿಕಾರಿಗಳನ್ನು ಸಿಎಂ ಆದ ಬೆನ್ನಲ್ಲೇ ವಾಪಸ್ ಕರೆಸಿದ ಮಮತಾ!

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಮಮತಾ ಬ್ಯಾನರ್ಜಿ ಸರ್ಕಾರವೇ ಕಾರಣ ಎಂದು ಜಗದೀಪ್ ದನ್ಕರ್ ನೇರ ಆರೋಪ ಮಾಡಿದ್ದರು. ತಮ್ಮ ಆಡಳಿತಕ್ಕೆ ಗರ್ವನರ್ ತಡೆಯೊಡ್ಡುತ್ತಿದ್ದಾರೆ. ಸುಗಮ ಹಾಗೂ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಶ್ಚಿಮ ಬಂಗಳಾದ ಹಿತ ದೃಷ್ಟಿಯಿಂದ ಗವರ್ನರ್ ಬದಲಾಯಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ಕೋವಿಂದ್‌ಗೆ ಪತ್ರ ಇಂದು(ಮೇ.18) ರವಾನಿಸಿದ್ದಾರೆ.

click me!