ಜಮ್ಮುಕಾಶ್ಮೀರದಲ್ಲಿರುವ ಬಂಡೀಪುರದ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿಯಾಗಲು ವಿಶೇಷ ಅತಿಥಿಯೊಬ್ಬರು ಬಂದರು. ಈ ಪುಟ್ಟ ಅತಿಥಿಯನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿಗೆ ಅಚ್ಚರಿಯೊಂದು ಕಾದಿತ್ತು. ಪುಟ್ಟ ಅತಿಥಿಯ ಕರುಣೆಯ ಬಗ್ಗೆ ಟ್ವಿಟರ್‌ನಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
ಶ್ರೀನಗರ(ಏ.16): ಜಮ್ಮುಕಾಶ್ಮೀರದಲ್ಲಿರುವ ಬಂಡೀಪುರದ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿಯಾಗಲು ವಿಶೇಷ ಅತಿಥಿಯೊಬ್ಬರು ಬಂದರು. ಈ ಪುಟ್ಟ ಅತಿಥಿಯನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿಗೆ ಅಚ್ಚರಿಯೊಂದು ಕಾದಿತ್ತು. ಪುಟ್ಟ ಅತಿಥಿಯ ಕರುಣೆಯ ಬಗ್ಗೆ ಟ್ವಿಟರ್‌ನಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
ಜಮ್ಮು ಕಾಶ್ಮೀರದ ನೌಪುರದ 8 ವರ್ಷದ ಪೋರ ಮಲಿಕ್ ಉಬೀದ್ ಡಿಸಿ ಆಫೀಸ್‌ಗೆ ಬಂದಿಳಿದಿದ್ದ. ಕೈಯಲ್ಲೊಂದು ಪಿಗ್ಗಿ ಬ್ಯಾಂಕ್. ಕೊರೋನಾ ತಡೆಗಟ್ಟಲು ದೇಶಾದ್ಯಂತ ಲಾಕ್‌ಡೌನ್ ಮಾಡಲಾಗಿದ್ದು, ಈ ಸಂದರ್ಭ ಕಷ್ಟಪಡುತ್ತಿರುವರಿಗಾಗಿ ವಿನಿಯೋಗಿಸಲೆಂದು ಬಾಲಕ ತನ್ನ ಪೂರ್ತಿ ಪಿಗ್ಗಿ ಬ್ಯಾಂಕ್ ಡಿಸಿಗೆ ಕೊಟ್ಟಿದ್ದಾನೆ.
ಜಮ್ಮು ಕಾಶ್ಮೀರದ ಸಾರ್ವಜನಿಕ ಸಂಪರ್ಕ ಇಲಾಖೆ ಈ ಹೃದಯ ಸ್ಪರ್ಶಿ ಘಟನೆಯ ಬಗ್ಗೆ ಬರೆದು ಟ್ವೀಟ್ ಮಾಡಿದೆ. ನೌಪುರದ 4 ನೇ ತರಗತಿಯಲ್ಲಿ ಓದುತ್ತಿರುವ ನಾಲ್ಕು ವರ್ಷದ ಬಾಲಕ ಮಲಿಕ್ ಉಬೀದ್ ತನ್ನ ಪಿಗ್ಗಿ ಬ್ಯಾಂಕ್‌ನೊಂದಿಗೆ ಡಿಸಿ ಕಚೇರಿಗೆ ಬಂದಿದ್ದ. ಪಿಗ್ಗಿ ಬ್ಯಾಂಕ್‌ನ್ನು ಡಿಸಿ ಕೈಗಿಟ್ಟ ಬಾಲಕ ಆ ಹಣವನ್ನು ಕೊರೋನಾ ವಿರುದ್ಧದ ಹೋರಾಟಕ್ಕೆ ಬಳಸಬೇಕೆಂದು ಕೋರಿದ್ದಾನೆ ಎಂದು ಟ್ವೀಟ್ ಮಾಡಲಾಗಿದೆ.
#Beautiful_Surprise This 8 yrs old kid, Malik Ubeed frm Nowpora, a student of class 4th, dropped in at DC Bandipora office today along with his Piggy Bank. He walked in & handed over his piggy bank saving to the DC & wanted the money to be spend in the fight against #COVID19. pic.twitter.com/xrPbTzi18f
— DIPR-J&K (@diprjk) April 13, 2020
ಈ ಟ್ವೀಟ್‌ಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಉಬೀದ್‌ನ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ನಿಜವಾದ ದಯೆಯಿಂದ ಈ ಬಾಲಕನಿಂದ ಕಲಿಯಬೇಕು ಎಂದು ಜನ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ