ಆಸ್ಪತ್ರೆಯಿಂದ ಮನೆಗೆ ತೆರಳುವ ವೇಳೆ ಆಟೋ ತಡೆದ ಪೊಲೀಸರು| ಎಷ್ಟೇ ಬೇಡಿಕೊಂಡರೂ ಅಮಾನವೀಯ ವರ್ತನೆ| ಬೇರೆ ದಾರಿ ಕಾಣದೆ ವೃದ್ಧ ತಂದೆಯನ್ನು ಹೊತ್ತುಕೊಂಡೇ ಹೋದ ಮಗ| ವೈರಲ್ ಆಯ್ತು ವಿಡಿಯೋ
ಕೊಲ್ಲಂ(ಏ.16): ದೇಶದಾದ್ಯಂತ ಹೇರಲಾಗಿರುವ ಲಾಕ್‌ಡೌನ್ ಸದ್ಯ ಜನ ಸಾಮಾನ್ಯರ ನಿದ್ದೆ ಕಸಿದಿದೆ. ಒಂದೆಡೆ ಹೊರ ಹೋಗಲಾರದೆ ಜನರು ಪರದಾಡುತ್ತಿದ್ದು, ವಾಹನ ಸಂಚಾರಕ್ಕೂ ಬ್ರೇಕ್ ಹಾಕಲಾಗಿದೆ. ಹೀಗಿರುವಾಗ ಕೇರಳದ ಕೊಲ್ಲಂನಲ್ಲಿ ನಡೆದ ಘಟನೆಯೊಂದು ಸದ್ಯ ದೇಶದಾದ್ಯಂತ ಸೌಂಡ್ ಮಾಡುತ್ತಿದೆ. ಇಲ್ಲೊಬ್ಬ ವ್ಯಕ್ತಿ ತನ್ನ ವೃದ್ಧ ತಂದೆ ತಾಯಿಯನ್ನು ಆಟೋದಲ್ಲಿ ಕರೆದೊಯ್ಯುತ್ತಿದ್ದಾಗ ಪೊಲೀಸರು ಆತನನ್ನು ತಡೆದಿದ್ದಾರೆ. ಹೀಗಾಗಿ ಬೇರೆ ವಿಧಿ ಇಲ್ಲದ ಮಗ ಕಾಯಿಲೆಯಿಂದ ಬಳಲುತ್ತಿದ್ದ ತಂದೆಯನ್ನು ಹೆಗಲ ಮೇಲೆ ಹೊತ್ತುಕೊಂಡೇ ತೆರಳಿದ್ದಾನೆ.
ನೆರೆಯ ಕೇರಳದ ಕೊಲ್ಲಂ ಜಿಲ್ಲೆಯ ಕುಳತ್ತುಪುಝದಲ್ಲಿ ಈ ಘಟನೆ ನಡೆದಿದೆ. ಪುನಲೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 65ರ ವರ್ಷದ ವೃದ್ಧ ತಂದೆಯನ್ನು ಡಿಸ್ಟಾರ್ಜ್ ಮಾಡಿಸಿದ್ದ ಮಗ, ತನ್ನ ತಾಯಿಯೊಂದಿಗೆ ಆಸ್ಪತ್ರೆಯಿಂದ ಆಟೋ ಮಾಡಿಸಿಕೊಂಡು ಮನೆಗೆ ಸಾಗುತ್ತಿದ್ದ. ಆದರೆ ದಾರಿ ಮಧ್ಯೆ ಆಟೋ ತಡೆದ ಪೊಲೀಸರು, ವೃದ್ಧ ದಂಪತಿಯನ್ನು ಕೆಳಗಿಳಿಸಿದರು. ಎಷ್ಟೇ ಮನವಿ ಮಾಡಿದರೂ ಪೊಲೀಸರು ಕಿವಿಗೂಡಲಿಲ್ಲ. ಆಸ್ಪತ್ರೆ ದಾಖಲೆ ತೋರಿಸಿದರೂ ಪೊಲೀಸರು ಕನಿಕರ ತೋರಿಸಲಿಲ್ಲ. ಪೊಲೀಸರು ಕರುಣೆ ತೋರದಾಗ ಬೇರೆ ದಾರಿ ಕಾಣದ ಮಗ ಕಾಯಿಲೆಯಿಂದ ಬಳುತ್ತಿದ್ದ ತನ್ನ ತಂದೆಯನ್ನು ಹೊತ್ತುಕೊಂಡೇ ಸಾಗಿದ್ದಾನೆ. ಈ ವೇಳೆ ವೃದ್ಧ ತಾಯಿ ಕೂಡಾ ಮಗನೊಂದಿಗೆ ಹೆಜ್ಜೆ ಹಾಕಿದ್ದಾಳೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಪೊಲೀಸರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಅಲ್ಲದೇ ಈ ಪ್ರಕರಣ ಸಂಬಂಧ ಕೇರಳ ರಾಜ್ಯ ಮಾನವ ಹಕ್ಕುಗಳ ಆಯುಕ್ತ ದೂರು ದಾಖಲಿಸಿದೆ. ಕೊರೋನಾ ತಡೆಯುವ ನಿಟ್ಟಿನಲ್ಲಿ ಹೇರಲಾಗಿರುವ ಲಾಕ್‌ಡೌನ್ ವೇಳೆ ನಿಯಮ ಪಾಲಿಸುವುದು ಸರಿ, ಹೀಗೆಂದು ಅಮಾನವೀಯವಾಗಿ ವರ್ತಿಸುವುದು ಮಾತ್ರ ಸರಿಯಲ್ಲ. "
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ