ದೇಶದಲ್ಲಿ ಹಿಂದೂ ಸಂಖ್ಯೆ ಕುಸಿತ, ಮುಸ್ಲಿಮರ ಜನಸಂಖ್ಯೆಯಲ್ಲಿ ಏರಿಕೆ, ವರದಿ ಬಹಿರಂಗ!

By Chethan KumarFirst Published May 9, 2024, 1:46 PM IST
Highlights

ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿ ನಡೆಸಿದ ಸಮೀಕ್ಷಾ ವರದಿ ಬಹಿರಂಗವಾಗಿದೆ. ಸ್ಫೋಟಕ ಅಂಕಿ ಸಂಖ್ಯೆಗಳ ಈ ವರದಿ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ದೇಶದಲ್ಲಿ ಹಿಂದೂಗಳ ಜನಸಂಖ್ಯೆ ಶೇಕಡಾ 7.82ರಷ್ಟು ಇಳಿಕೆಯಾಗಿದ್ದರೆ, ಮುಸ್ಲಿಮ್ ಜನಸಂಖ್ಯೆ ಶೇ.43.15ರಷ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಈ ವರದಿ ಹೇಳುತ್ತಿದೆ. ಈ ವರದಿಯ ಅಂಕಿ ಸಂಖ್ಯೆ ಇಲ್ಲಿದೆ.
 

ನವದೆಹಲಿ(ಮೇ.09) ಭಾರತದಲ್ಲಿ ಜಸಸಂಖ್ಯಾ ಬದಲಾವಣೆ ಹಾಗೂ ಬೆಳವಣಿಗೆ ಕುರಿತು ಹಲವು ಸಂಘ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿದೆ. ಇದಕ್ಕೆ ಪೂರಕವಾಗಿ ಇದೀಗ ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿ ನಡೆಸಿದ ಸಮೀಕ್ಷಾ ವರದಿ ಬಹಿರಂಗವಾಗಿದೆ. ಈ ವರದಿ ಪ್ರಕಾರ ದೇಶದಲ್ಲಿ ಹಿಂದೂಗಳ ಜನಸಂಖ್ಯೆ ಗಣನೀಯವಾಗಿ ಕುಸಿತಕಂಡಿದೆ. ಹಿಂದೂಗಳ ಜನಸಂಖ್ಯೆ ಶೇ.7.82ರಷ್ಟು ಇಳಿಕೆ ಎಂದ ಅಧ್ಯಯನ ವರದಿ ಹೇಳಿದೆ. ಇದೇ ವೇಳೆ ಮುಸ್ಲಿಮರ ಜನಸಂಖ್ಯೆ ಶೇಕಡಾ 43.15ರಷ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಮೂಲಕ ದೇಶದಲ್ಲಿ ಇದೀಗ ಮುಸ್ಲಿಮರ ಜನಸಂಖ್ಯೆ ಶೇಕಡಾ 14.09ರಷ್ಟಾಗಿದೆ.. ಇದೇ ವೇಳೆ ಮುಸ್ಲಿಮೇತರ ಅಲ್ಪಸಂಖ್ಯಾತರ ಜನಸಂಖ್ಯೆ ಶೇ.6.58ರಷ್ಟು ಹೆಚ್ಚಳ ಎಂದು ವರದಿ ಹೇಳಿದೆ.

ಸ್ವಾತಂತ್ರ್ಯ ಬಳಿಕ ದೇಶದಲ್ಲಿ ಹಿಂದೂಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಮುಸ್ಲಿಮ್ ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇದು ಕಳವಳ ಅನ್ನೋ ಚರ್ಚೆ ಹಲವು ವರ್ಷಗಳಿಂದ ನಡೆಯುತ್ತಿದೆ. ಜನಸಂಖ್ಯಾ ಬೆಳವಣಿಗೆ ಹಾಗೂ ಬದಲಾವಣೆ  ನಿಯಮಿತ ಹಾಗೂ ಸ್ವಾಭಾವಿಕ ಪ್ರಮಾಣದಲ್ಲಿ ಏರಿಕೆಯಾಗುತ್ತಿಲ್ಲ ಅನ್ನೋ ವಾದಕ್ಕೆ ಇದೀಗ ಪುಷ್ಠಿ ಸಿಕ್ಕಿದೆ.

ಭಾರತೀಯರ ಹಿಂದೂ – ಮುಸ್ಲಿಮರಲ್ಲಿ ಯಾರು ಶ್ರೀಮಂತರು? ಶೇ.30ರಷ್ಟು ಮಂದಿ ಹತ್ರ ಕುಕ್ಕರ್ ಸಹ ಇಲ್ಲ!

1950ರಲ್ಲಿ ಶೇ.84.68ರಷ್ಟಿದ್ದ ಹಿಂದೂಗಳ ಜನಸಂಖ್ಯೆ ಇದೀಗ ಶೇ.78.06 ಇಳಿಕೆಯಾಗಿದೆ. ಆದರೆ ಶೇಕಡಾ 9.84 ರಷ್ಟಿದ್ದ ಮುಸ್ಲಿಮರ ಜನಸಂಖ್ಯೆ ಶೇ.14.09ಕ್ಕೆ ಏರಿಕೆಯಾಗಿದೆ. ಅಂದರೆ ಹಿಂದೂಗಳ ಜನಸಂಖ್ಯೆಯಲ್ಲಿ ಶೇಕಡಾ 7.82ರಷ್ಟು ಕುಸಿತ ಕಂಡಿದ್ದರೆ, ಮುಸ್ಲಿಮ್ ಜನಸಂಖ್ಯೆಯಲ್ಲಿ ಶೇಕಡಾ 43.15ರಷ್ಟು ಏರಿಕೆಯಾಗಿದೆ ಎಂದು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯಿಂದ ವರದಿ ಬಿಡುಗಡೆ ಮಾಡಿದೆ. 

ಲೋಕಸಭಾ ಚುನಾವಣೆ ಹೊತ್ತಲ್ಲಿ ಈ ವರದಿ ಬಿಡುಗಡೆಯಾಗಿದ್ದ ಇದೀಗ ಕೋಲಾಹಲ ಸೃಷ್ಟಿಸಿದೆ. ಕಾಂಗ್ರೆಸ್ ಒಲೈಕೆ ರಾಜಕಾರಣದಿಂದ ಹಿಂದೂಗಳ ಸಂಖ್ಯೆ ಇಳಿಕೆಯಾಗಿದ್ದರೆ, ಮುಸ್ಲಿಮರ ಸಂಖ್ಯೆ ಏರಿಕೆಯಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಬಾಂಗ್ಲಾದೇಶದ ಮುಸ್ಲಿಮರು ಹಾಗೂ ರೋಹಿಂಗ್ಯ ಮುಸ್ಲಿಮರಿಗೆ ಕಾಂಗ್ರೆಸ್ ಭಾರತದಲ್ಲಿ ಆಶ್ರಯ ನೀಡಿದೆ. ಕಾಂಗ್ರೆಸ್‌ಗೆ ಅಧಿಕಾರ ಸಿಕ್ಕರೆ ದೇಶದಲ್ಲಿ ಹಿಂದೂಗಳೇ ಇಲ್ಲದಾಗುತ್ತಾರೆ ಎಂದು ಬಿಜೆಪಿ ಆರೋಪಿಸಿದೆ. ದೇಶವನ್ನು ಕಾಂಗ್ರೆಸ್ ಧರ್ಮಶಾಲೆ ಮಾಡಲು ಯತ್ನಿಸುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. 

ಜನಸಂಖ್ಯೆ ಹೆಚ್ಚಿಸುವ ಲವ್ ಜಿಹಾದ್‌ಗೆ ಒಪ್ಪದ ನೇಹಾಳನ್ನು ಫಯಾಜ್ ಕೊಂದಿದ್ದಾನೆ; ಪ್ರಮೋದ್ ಮುತಾಲಿಕ್ ಆರೋಪ

ಇತ್ತ ಕಾಂಗ್ರೆಸ್ ಕೂಡ ತಿರುಗೇಟು ನೀಡಿದೆ. ನರೇಂದ್ರ ಮೋದಿ ದೇಶದಲ್ಲಿ ವಿಭಜನೆ ರಾಜಕೀಯ ಮಾಡುತ್ತಿದ್ದಾರೆ. ‘ಬೆಲೆ ಏರಿಕೆ ಮತ್ತು ಅಭಿವೃದ್ಧಿ ವಿಚಾರವಾಗಿ ಪ್ರಧಾನಿ ಮಾತಾಡುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಈ ಮಾಹಿತಿ ಬಹಿರಂಗ ಯಾಕೆ ಎಂದ ಕಾಂಗ್ರೆಸ್ ಪ್ರಶ್ನಿಸಿದೆ. ಹಿಂದೂ-ಮುಸ್ಲಿಂ ಎಂದು ಧರ್ಮದ ಆಧಾರದ ಮೇಲೆ ದೇಶ ಒಡೆಯಲಾಗುತ್ತಿದೆ. ಇದು ದೇಶಕ್ಕೆ ಅಪಾಯ ಎಂದು ಕಾಂಗ್ರೆಸ್ ಆರೋಪಿಸಿದೆ.

click me!