
ದೆಹಲಿ(ಮಾ.14): ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಮತ್ತೊಂದು ಮಹಾ ಷಡ್ಯಂತ್ರಕ್ಕೆ ವೇದಿಕೆ ಸಜ್ಜಾಗಿದೆ. ಈ ಬಾರಿ ಲೆಟ್ ಕಾಶ್ಮೀರ ಸ್ಪೀಕ್ ಅನ್ನೋ ಹೆಸರಿನಲ್ಲಿ ಮಾರ್ಚ್ 15 ರಂದು ದೆಹಲಿಯಲ್ಲಿ ಹೋರಾಟ ನಡೆಯಲಿದೆ. ಪ್ರಮುಖ ಅಜೆಂಡಾ ನೋಡಿದರೆ ಬೆಚ್ಚಿ ಬೀಳುವುದು ಖಚಿತ. ಕಾರಣ ಕಾಶ್ಮೀರದಲ್ಲಿ ಭಾರತ ಅತಿಕ್ರಮಿಸಿಕೊಂಡಿರುವ ಪ್ರದೇಶದ ಕುರಿತು ಧ್ವನಿ ಎತ್ತುವುದು. ಜೈಲಿನಲ್ಲಿರುವ ನಾಯಕರ ಬಿಡುಗಡಗೆ ಆಗ್ರಹ, ಮಾಧ್ಯಮಗಳ ನಿರ್ಬಂಧ, ಜಮ್ಮು ಕಾಶ್ಮೀರದ ಮೇಲೆ ಕೇಂದ್ರ ಸರ್ಕಾರದ ದಬ್ಬಾಳಿಕೆ ವಿರೋಧ ಸೇರಿದಂತೆ ಹತ್ತು ಹಲವು ವಿಚಾರ ಮುಂದಿಟ್ಟುಕೊಂಡು ಈ ಪ್ರತಿಭಟನಾ ಆಂದೋಲನ ಹಮ್ಮಿಕೊಳ್ಳಲಾಗಿದೆ.
ಕಾಶ್ಮೀರ ಮಾತನಾಡಲು ಬಿಡಿ ಅನ್ನೋ ಹೆಸರಿನಲ್ಲಿ ಈ ಆಂದೋಲನ ಹುಟ್ಟು ಹಾಕಲಾಗಿದೆ. ಪ್ರಧಾನಿ ಮೋದಿ ಆಡಳಿತದಲ್ಲಿ ಕಾಶ್ಮೀರ ಮೇಲೆ ಹೇರಿರುವ ದಮನಕಾರಿ ನೀತಿಗಳ ವಿರುದ್ಧ ಸೆಮಿನಾರ್ ಹಾಗೂ ಚರ್ಚಾಕೂಟ ಹಮ್ಮಿಕೊಳ್ಳಲಾಗಿದೆ. ನ್ಯಾಯಾಂಗ, ಮಾಧ್ಯಮ, ಚಿತ್ರೋದ್ಯಮ ಸೇರಿದಂತೆ ಹಲವು ವಿಚಾರಗಳಲ್ಲಿ ಕೇಂದ್ರ ಸರ್ಕಾರದ ನಿಲುವುಗಳ ವಿರುದ್ದ ಹಲವು ಆಹ್ವಾನಿತ ಗಣ್ಯರು ಮಾತನಾಡಲಿದ್ದಾರೆ. ಇದೇ ವೇಳೆ ಪ್ರತ್ಯೇಕ ಕಾಶ್ಮೀರ ಹೆಸರಿನಡಿ ಭಯೋತ್ಪಾದನಾ ಚಟುವಟಿಕೆ, ದಾಳಿ ನಡೆಸಿದ ಹುರಿಯತ್ ನಾಯಕರ ಪರ ಧ್ವನಿ ಎತ್ತುವ ಕಾರ್ಯವೂ ನಡೆಯಲಿದೆ.
ಬ್ರಿಟನ್‌ನ ತೀವ್ರವಾದಿ ಮುಸ್ಲಿಮರಿಂದ ಕಾಶ್ಮೀರ ಮೇಲೆ ದಾಳಿ: ಭಾರತಕ್ಕೆ ಬ್ರಿಟನ್ನಿಂದಲೇ ಎಚ್ಚರಿಕೆ..!
ಕಾಶ್ಮೀರ ಮಾತನಾಡಲು ಬಿಡಿ ಅನ್ನೋ ಬೃಹತ್ ಆಂದೋಲವನ್ನು ಸಾಮಾಜಿಕ ಜಾಲತಾಣದಲ್ಲಿ ಕೆ2 ಬೆಂಬಲಿಸಿದೆ. ಈ ಕೆ2 ಆಪರೇಶನ್ ಕಾಶ್ಮೀರ ಹಾಗೂ ಖಲಿಸ್ತಾನ ಬೆಂಬಿಲಿಸುತ್ತಿರುವ ಪಾಕಿಸ್ತಾನದ ಸಂಸ್ಥೆಯಾಗಿದೆ. ಕೆಲ ಖಲಿಸ್ತಾನ ಬೆಂಬಲಿತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಇದೀಗ ಇದೇ ಸಂಸ್ಥೆ ದೆಹಲಿಯಲ್ಲಿ ಹಮ್ಮಿಕೊಂಡಿರುವ ಮೋದಿ ವಿರುದ್ಧದ ಕಾರ್ಯಕ್ರಮಕ್ಕೂ ಬೆಂಬಲ ನೀಡಿದೆ.ನಾಳೆ ಮಧ್ಯಾಹ್ನ 2 ಗಂಟೆಗೆ ದೆಹಲಿಯ ಗಾಂಧಿ ಪೀಸ್ ಫೌಂಡೇಶನನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಪಾಕಿಸ್ತಾನದ ಹಲವು ಮಾಧ್ಯಮಗಳು ಬೆಂಬಲ ಸೂಚಿಸಿದೆ.
ಈ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಹಸ್ನೈನ್ ಮಸೂದಿ, ಪ್ರೋಫೆಸರ್ ನಂದಿತಾ ನರೈನ್ ಮೊಹ್ಮದ್ ಯೂಸುಫ್ ತರಿಗಾಮಿ, ಮಿರ್ ಶಾಹೀದ್ ಸಲೀಮ್, ಸಂಜಯ್ ಕಾಕಾ ಹಾಗೂ ಅನಿಲ್ ಚಮಾಡಿಯ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರ ಜೊತೆಗೆ ಖಲಿಸ್ತಾನ ಉಗ್ರಸಂಘಟನೆಯ ಕೆಲ ನಾಯಕರು ಪಾಲ್ಗೊಳ್ಳುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ