ಅಮ್ಮ ಬೈತಾರೆ ಬಿಡು, ಟಿ ಶರ್ಟ್ ಕಚ್ಚಿದ ಮೃಗಾಲಯದಲ್ಲಿ ಹುಲಿ ಬಳಿ ಅಂಗಲಾಚಿದ ಬಾಲಕ

Published : Feb 09, 2025, 09:23 PM IST
ಅಮ್ಮ ಬೈತಾರೆ ಬಿಡು, ಟಿ ಶರ್ಟ್ ಕಚ್ಚಿದ ಮೃಗಾಲಯದಲ್ಲಿ ಹುಲಿ ಬಳಿ ಅಂಗಲಾಚಿದ ಬಾಲಕ

ಸಾರಾಂಶ

ಮೃಗಾಲದ ಬೋನಿನಲ್ಲಿದ್ದ ಹುಲಿ ಬಾಲಕನ ಟಿಶರ್ಟ್ ಕಚ್ಚಿದೆ. ಆತಂಕಗೊಂಡ ಬಾಲಕ, ಕೂಗಿಕೊಂಡಿದ್ದಾನೆ. ದಯವಿಟ್ಟು ಟಿ ಶರ್ಟ್ ಬಿಡು, ನನ್ನ ಅಮ್ಮ ಬೈತಾರೆ ಎಂದು ಅಂಗಲಾಚಿದ ವಿಡಿಯೋಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. 

ಹಲವು ಬಾರಿ ರೀಲ್ಸ್, ವೈರಲ್ ಆಗಲು ಮಾಡುವ ವಿಡಿಯೋಗಳು ಗುರಿ ಈಡೇರಿದರೂ ಭಾರಿ ಟೀಕೆ, ಆಕ್ರೋಶಗಳು ವ್ಯಕ್ತವಾದ ಹಲವು ಉದಾಹರಣೆಗಳಿವೆ. ಇಷ್ಟೇ ಅಲ್ಲ ಅಪಾಯಕ್ಕೆ ಸಿಲುಕಿದ ಘಟನೆಗಳು ಹಲವಿದೆ. ಇದೀಗ ಮೃಗಾಲಯದ ವಿಡಿಯೋ ಒಂದು ಭಾರಿ ವೈರಲ್ ಆಗಿೆ. ಆದರೆ ಅಷ್ಟೇ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಪುಟ್ಟ ಬಾಲಕ ಮೃಗಾಲಯಕ್ಕೆ ಆಗಮಿಸಿದ್ದಾನೆ. ಹುಲಿ ಬೋನಿನ ಬಳಿ ನಿಂತು ಚೇಷ್ಟೆ ಮಾಡಿದ್ದಾನೆ. ಆದರೆ ಹುಲಿ ಬಾಲಕನ ಟಿಶರ್ಟ್ ಕಚ್ಚಿ ಎಳೆದಿದೆ.  ಈ ವೇಳೆ ಕಾಪಾಡಲು ಬಾಲಕ ಮನವಿ ಮಾಡಿದ್ದಾನೆ. ಬಳಿಕ ದಯವಿಟ್ಟು ಟಿ ಶರ್ಟ್ ಬಿಟ್ಟು ಬಿಡು, ನನ್ನ ಅಮ್ಮ ಬೈತಾರ ಎಂದು ಹುಲಿ ಬಳಿ ಅಂಗಲಾಚಿದ ವಿಡಿಯೋ ಸದ್ದು ಮಾಡುತ್ತಿದೆ. ಆದರೆ ಈ ವಿಡಿಯೋಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋದ ಸ್ಥಳ ಹಾಗೂ ದಿನಾಂಕ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಮೃಗಾಲಯಕ್ಕೆ ಆಗಮಿಸಿದ ಬಾಲಕ ಹಲವು ಪ್ರಾಣಿಗಳ ಬೋನಿನ ಬಳಿ ತೆರಳಿ ವೀಕ್ಷಿಸಿದ್ದಾರೆ. ಇದೇ ರೀತಿ ಹುಲಿ ಬೋನಿನ ಬಳಿ ಬಂದಿದ್ದಾನೆ. ಆದರೆ ಹುಲಿ ಬೋನಿನ ಬಳಿ ನಿಂತು ಚೇಷ್ಟೆ ಮಾಡಿದ್ದಾನೆ.ಏಕಾಏಕಿ ಹುಲಿ ದಾಳಿ ಮಾಡಿದೆ. ಆದರೆ ಬೋನಿನ ಒಳಗಿರುವ ಕಾರಣ ಬಾಲಕ ಟಿಶರ್ಟ್ ಕಚ್ಚಿ ಹಿಡಿದುಕೊಂಡಿದೆ. ಇತ್ತ ಬಾಲಕ ಹುಲಿಯ ಬಾಯಿಯಿಂದ ಬಿಡಿಸಿಕೊಳ್ಳಲು ಕೂಗಿಕೊಂಡಿದ್ದಾನೆ. ಕಾಪಾಡಿ ಕಾಪಾಡಿ ಎಂದು ಕೂಗಿದ್ದಾನೆ.

ಮನೆಯ ಬಾಗಿಲು ತೆಗೆದರೆ ಗಂಡನ ಬದಲು ಹುಲಿ ಪ್ರತ್ಯಕ್ಷ; ಪರಮೇಶ್ವರನ ಪಾದ ಸೇರಿದನಾ ಪತಿರಾಯ!

ಆದರೆ ಹುಲಿ ಟಿ ಶರ್ಟ್ ಕಚ್ಚಿ ಹಿಡಿದು ಬಿಡಲೇ ಇಲ್ಲ. ಬಾಲಕನ ಬೋನಿನತ್ತ ಹಿಡಿದೆಳೆಯುತ್ತಿದೆ. ಇತ್ತ ಬಾಲಕ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ದಯವಿಟ್ಟು ಟಿಶರ್ಟ್ ಬಿಟ್ಟು ಬಿಡು ನನ್ನ ತಾಯಿ ಶರ್ಟ್ ವಿಚಾರದಲ್ಲಿ ಬೈಯುತ್ತಾರೆ. ಟಿಶರ್ಟ್ ಬಿಟ್ಟುಬಿಡುವಂತೆ ಅಂಗಲಾಚಿದ್ದಾನೆ. ಬಾಲಕ ಬೇಡಿಕೊಂಡರೂ ಹುಲಿ ಕೇಳಬೇಕಲ್ಲ, ಬಿಡಲೇ ಇಲ್ಲ. ಈ ವಿಡಿಯೋ ಹರಿದಾಡುತ್ತಿದೆ. ಹುಲಿ ಬಳಿ ಟಿ ಶರ್ಟ್ ಬಿಡುವಂತೆ ಬಾಲಕ ಮನವಿ ಮಾಡುತ್ತಿರುವ  ವಿಡಿಯೋಗೆ ಬಾಲಕನ ಮುಗ್ದತೆ, ಭಯದ ಕುರಿತು ಕಮೆಂಟ್ ಮಾಡಿದ್ದಾರೆ. ಆದರೆ ಬಹುತೇಕರು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

 

 

ಬಾಲಕನ ಟಿಶರ್ಟ್ ಹಿಡಿದೆಳೆಯುತ್ತಿರುವಾಗ ವಿಡಿಯೋ ಮಾಡಿಕೊಂಡು ನಿಂತಿದ್ದಾರೆ. ಬಾಲಕನ ಬಿಡಿಸುವ ಪ್ರಯತ್ನ ಮಾಡಿಲ್ಲ. ಇಷ್ಟೇ ಅಲ್ಲ ಬಾಲಕ ಹುಲಿ ಇರುವ ಗೂಡಿನ ಮುಂಭಾಗದ ಗ್ರಿಲ್ ಮೇಲೆ ಕೈ ಇಡುತ್ತಿದ್ದಾನೆ. ಇದು ಮತ್ತಷ್ಟು ಅಪಾಯಾಕಾರಿ. ಬೆರಳುಗಳನ್ನು ಹುಲಿ ಕಚ್ಚುವ ಸಾಧ್ಯತೆ ಇತ್ತು. ಈ ರೀತಿ ಕೆಲ ಮೃಗಾಲಯದಲ್ಲಿ ನಡೆದಿದೆ. ಇದು ಬಾಲಕನ ಪ್ರಾಣಕ್ಕೆ ಅಪಾಯ ತರುವ ಸಾಧ್ಯತೆ ಇತ್ತು. ಆದರೆ ವಿಡಿಯೋ ಮಾಡುತ್ತಾ ನಿಂತಿದ್ದಾರೆ. ಇದು ಯಾವ ಮನಸ್ಥಿತಿ? ವಿಡಿಯೋ ವೈರಲ್ ಆಗಲು ಈ ರೀತಿಯ ಹುಚ್ಚು ಸಾಹಸಕ್ಕೆ ಇಳಿಯಬೇಡಿ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ವೈರಲ್ ಉದ್ದೇಶದಿಂದ ಮಾಡಲಾಗಿದೆ. ಆದರೆ ಅಪಾಯ ಹೆಚ್ಚಾದರೂ ವಿಡಿಯೋ ಮಾಡುತ್ತಲೇ ನಿಂತಿದ್ದಾರೆ. ಮೃಗಾಲಯದೊಳಗೆ ಈ ರೀತಿ ಮಾಡಲು ಅವಕಾಶ ನೀಡಿದ್ದು ಯಾರು? ಮೃಗಾಲಯ ಸಿಬ್ಬಂಧಿಗಳು ಎಲ್ಲಿದ್ದಾರೆ? ಬಾಲಕನ ಜೊತೆಗೆ ಬಂದವರು ಎಲ್ಲಿದ್ದಾರೆ? ಹೀಗೆ ಹಲವು ಪ್ರಶ್ನೆಗಳು ಎದುರಾಗಿದೆ. ಇದೀಗ ಈ ವಿಡಿಯೋ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲು ಹಲವರು ಪೊಲೀಸರಿಗೆ ಮನವಿ ಮಾಡಿದ್ದಾರೆ. 

'ನಾಯಿ ಜೊತೆಗೆ ಸ್ನೇಹ ಮಾಡಿದ ಹುಲಿ'ಯ ವಿಡಿಯೋ ವೈರಲ್; ಇದು ಸಸ್ಯಾಹಾರಿ ಹುಲಿಯೇ?
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!