ಮತ್ತೊಂದು ಜನ್ಮ ತಾಳಲು ಮೋದಿಗೆ ಕೇಜ್ರಿ ಸವಾಲ್​: ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ಹಲ್​ಚಲ್​

Published : Feb 09, 2025, 02:30 PM ISTUpdated : Feb 10, 2025, 10:30 AM IST
ಮತ್ತೊಂದು ಜನ್ಮ ತಾಳಲು ಮೋದಿಗೆ ಕೇಜ್ರಿ ಸವಾಲ್​: ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ಹಲ್​ಚಲ್​

ಸಾರಾಂಶ

ಈ ಜನ್ಮದಲ್ಲಿ ದೆಹಲಿ ಗೆಲ್ಲಲು ಮೋದಿಗೆ ಸಾಧ್ಯವಿಲ್ಲ, ಮತ್ತೊಂದು ಜನ್ಮ ತಾಳಿ ಬರಬೇಕು ಎಂದಿದ್ದ ಅರವಿಂದ ಕೇಜ್ರಿವಾಲ ಅವರ ವಿಡಿಯೋ ವೈರಲ್​ ಆಗುತ್ತಿದೆ.   

ದೆಹಲಿಯ ಚುನಾವಣೆಯ ಬಹುತೇಕ ಫಲಿತಾಂಶ ಹೊರಬಿದ್ದಿದೆ. 27 ವರ್ಷಗಳ ಬಳಿಕ ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಸಜ್ಜಾಗಿ ನಿಂತಿದೆ. ಸೋಲೇ ಇಲ್ಲದ ಸರದಾರ ಎಂದು ಹೇಳಿಕೊಂಡಿದ್ದ ಆಪ್​ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ಗೆ ಭಾರಿ ಮುಖಭಂಗವಾಗಿದೆ. ಇದರ ಜೊತೆ ಮಾಜಿ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಕೂಡ ಪರಾಭವಗೊಂಡಿದ್ದಾರೆ. ಹಾಲಿ ಮುಖ್ಯಮಂತ್ರಿ ಅತಿಶಿ ಅವರು ಕೆಲವೇ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ, ಆಪ್​ ಮರ್ಯಾದೆಯನ್ನು ಕಾಪಾಡಿದ್ದಾರೆ. ಇನ್ನು ಕಾಂಗ್ರೆಸ್​ ಕಳೆದೆರಡು ಚುನಾವಣೆಗಳಂತೆಯೇ ಸತತ ಮೂರನೆಯ ಬಾರಿ ಒಂದೂ ಖಾತೆ ತೆರೆಯದೇ ಜೀರೋದಲ್ಲಿಯೇ ಇದೆ.  

ಬಿಜೆಪಿ ಕಾರ್ಯಕರ್ತರು ಫಲಿತಾಂಶದ ಖುಷಿಯನ್ನು ಸವಿಯುತ್ತಿರುವ ನಡುವೆಯೇ, ಇದೀಗ ದೆಹಲಿಯ ಸರದಾರ ನಾವೇ. ಪ್ರಧಾನಿ ನರೇಂದ್ರ ಮೋದಿ ಈ ಜನ್ಮದಲ್ಲಿ ಕನಸು ಕಾಣಬೇಕಷ್ಟೇ. ದೆಹಲಿಯನ್ನು ಆಳಬೇಕಿದ್ದರೆ ಮತ್ತೊಂದು ಜನ್ಮ ಎತ್ತಿ ಬರಬೇಕು ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ, ಆಪ್​ ನಾಯಕ ಅರವಿಂದ ಕೇಜ್ರಿವಾಲ ಅವರು ಹೇಳಿರುವ ವಿಡಿಯೋಗಳು ಈಗ ಸೋಷಿಯಲ್​  ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ದೆಹಲಿ ಫಲಿತಾಂಶದ ಬೆನ್ನಲ್ಲೇ ಕೇಜ್ರಿವಾಲ್​, ಮೋದಿ ಗುದ್ದಾಟ: EVM ಗದ್ದಲ! ಅಬ್ಬಬ್ಬೋ ಜಾಲತಾಣದಲ್ಲಿ ಇದೇನಿದು?

ಒಂದರಲ್ಲಿ ಭಾಷಣ ಮಾಡುತ್ತಾ ಕೇಜ್ರಿವಾಲ ಅವರು, ದೆಹಲಿಯನ್ನು ಆಳುವ ಕನಸನ್ನು ಬಿಜೆಪಿ ಮತ್ತು ಮೋದಿ ಕಾಣುತ್ತಿದ್ದಾರೆ. ಇದಕ್ಕಾಗಿ ಹಲವಾರು ಹಗರಣಗಳಲ್ಲಿ ನಮ್ಮನ್ನು ಸಿಲುಕಿಸಿ ಜೈಲಿಗೆ ಅಟ್ಟಿದರು. ಆದರೆ ಮೋದಿಗೆ ಗೊತ್ತಿಲ್ಲ. ಜೈಲಿನಲ್ಲಿ ಇದ್ದುಕೊಂಡೇ ಗೆಲುವು ಸಾಧಿಸುವುದು ಹೇಗೆ ಎನ್ನುವುದು ನಮಗೆ  ಗೊತ್ತು. ಜೈಲಿನಲ್ಲಿ ಇದ್ದುಕೊಂಡೇ ಆಪ್​ ಸರ್ಕಾರ ಮಾಡುತ್ತದೆ. ನೋಡುತ್ತಿರಿ, ನಿಮ್ಮ ಕನಸು ನನಸಾಗುವುದಿಲ್ಲ ಎಂದಿದ್ದರು. ಮೋದಿಜಿ ಗಮನವಿಟ್ಟು ಕೇಳಿ, ಈ ಜನ್ಮದಲ್ಲಿ ನೀವು ಸರ್ಕಾರ ರಚನೆ  ಮಾಡಲು ಸಾಧ್ಯವಿಲ್ಲ, ಬೇಕಿದ್ದರೆ ಮತ್ತೊಂದು ಜನ್ಮ ಎತ್ತಿ ಬನ್ನಿ ಎಂದು ಹೇಳಿದ್ದರು.

ಅದೇ ಇನ್ನೊಂದು ವಿಡಿಯೋದಲ್ಲಿ ಸದನದಲ್ಲಿ ಮಾತನಾಡುವ ಸಂದರ್ಭದಲ್ಲಿ ಅರವಿಂದ ಕೇಜ್ರಿವಾಲ ಅವರು, ದೆಹಲಿಯ ಬಾಸ್​ ನಾವು. ಆಪ್​  ಸರ್ಕಾರವೇ ಇಲ್ಲಿಯ ಬಾಸ್​. ಬೇರೆ ಯಾರೂ ಇದನ್ನು ಆಳಲು ಸಾಧ್ಯವಿಲ್ಲ. ಹಿಂದಿನ ಎರಡೂ ಅವಧಿಯಲ್ಲಿಯೂ ಆಮ್​ ಆದ್ಮಿ ಪಕ್ಷವೇ ಆಳಿದೆ. ಮುಂದಿನ ಚುನಾವಣೆಯಲ್ಲಿಯೂ ನಾವೇ ಆಳುವುದು. ಇದನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದಿದ್ದರು. ಈ ಎರಡೂ ವಿಡಿಯೋಗಳು ಈಗ ಥಹರೇವಾರಿ ಕಮೆಂಟ್ಸ್​ ಜೊತೆ ವೈರಲ್​ ಆಗುತ್ತಿವೆ. 

ದಿಲ್ಲಿಯಲ್ಲಿ 27 ವರ್ಷಗಳ ನಂತರ ಬಿಜೆಪಿಗೆ ಅಧಿಕಾರ, ಎಎಪಿ ಸೋಲಿಗೆ ಕಾರಣವೇನು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ