ಕೊರೋನಾ ಭೀತಿ: ಕೇರಳದಾದ್ಯಂತ ರಜೆ ಘೋಷಣೆ, ಪರೀಕ್ಷೆ ಕ್ಯಾನ್ಸಲ್

By Suvarna News  |  First Published Mar 10, 2020, 2:40 PM IST

ಕೊರೋನಾ ವೈರಸ್‌ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಅಂಗನವಾಡಿಯಿಂದ ಏಳನೇ ತರಗತಿಯವರೆಗಿನ ಎಲ್ಲ ಮಕ್ಕಳಿಗೆ ರಜೆ ಘೋಷಿಸಲಾಗಿದೆ. ಈಗಾಗಲೇ ಕೇರಳದಲ್ಲಿ ಕೊರೋನಾ ಪತ್ತೆಯಾಗಿದೆ.


ತಿರುವನಂತಪುರಂ(ಮಾ.10): ಕೊರೋನಾ ವೈರಸ್‌ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಅಂಗನವಾಡಿಯಿಂದ ಏಳನೇ ತರಗತಿಯವರೆಗಿನ ಎಲ್ಲ ಮಕ್ಕಳಿಗೆ ರಜೆ ಘೋಷಿಸಲಾಗಿದೆ. ಈಗಾಗಲೇ ಕೇರಳದಲ್ಲಿ ಕೊರೋನಾ ಪತ್ತೆಯಾಗಿದೆ.

ಕೇರಳ ರಾಜ್ಯಾದ್ಯಂತ ಕೊರೋನಾ ವೈರಸ್ ಆತಂಕ ಹಿನ್ನೆಲೆ ಕೇರಳ ರಾಜ್ಯಾದ್ಯಂತ ಅಂಗನವಾಡಿಯಿಂದ ಏಳನೇ ತರಗತಿವರೆಗೆ ರಜೆ ಘೋಷಣೆ ಮಾಡಲಾಗಿದೆ. ಕೇರಳ ಸರ್ಕಾರ ಪರೀಕ್ಷೆ ಮುಂದೂಡಿ ದಢೀರ್ ರಜೆ ಘೋಷಿಸಿದೆ.

Tap to resize

Latest Videos

ಕೊರೋನಾ ಭೀತಿ ಮಧ್ಯೆ ಜಮಖಂಡಿಯಲ್ಲಿ ಸಂಭ್ರಮದ ಹೋಳಿ ಹಬ್ಬ

ಕರ್ನಾಟಕ ಗಡಿಭಾಗ ಕಾಸರಗೋಡು ಸೇರಿ ಕೇರಳದಾದ್ಯಂತ ರಜೆ ಘೋಷಣೆ ಮಾಡಲಾಗಿದೆ. ಸಾರ್ವಜನಿಕ ಕಾರ್ಯಕ್ರಮ, ಸರ್ಕಾರಿ ಸಭೆ-ಸಮಾರಂಭಗಳಿಗೂ ಅವಕಾಶವಿಲ್ಲ.

ಕೊರೋನಾ ಭೀತಿ: ಹೈದರಾಬಾದ್‌ನಲ್ಲಿ 1300 ಫ್ರೀ ಮಾಸ್ಕ್ ವಿತರಿಸಿದ ಬೀದರ್‌ ಡಾಕ್ಟರ್‌

ಮಾರ್ಚ್ ಅಂತ್ಯದ ತನಕ ಮುಂಜಾಗ್ರತಾ ಕ್ರಮದ ಜೊತೆಗೆ ನಿಯಂತ್ರಣಕ್ಕೆ ಸೂಚನೆ ನೀಡಲಾಗಿದೆ.8,9 ಮತ್ತು ಹತ್ತನೇ ತರಗತಿ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಕೇರಳದಲ್ಲಿ ಈಗಾಗಲೇ ಆರು ಮಂದಿಯಲ್ಲಿ ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸಲಾಗಿದೆ.

ಬೆಂಗಳೂರು ಕೊರೋನಾ ಪ್ರಕರಣ ಅಪ್ಡೇಟ್ಸ್:

"

click me!