ದೆಹಲಿ ಚುನಾವಣಾ ಪೂರ್ವ ಸಮೀಕ್ಷೆ: ಕೈ, ಕಮಲಕ್ಕೆ ನಿರಾಸೆ, ಮತ್ತೆ ಆಪ್ ಕಮಾಲ್!

By Suvarna News  |  First Published Jan 7, 2020, 9:57 AM IST

ದೆಹಲಿಯಲ್ಲಿ ಮತ್ತೆ ಕೇಜ್ರಿವಾಲ್‌ ಕಮಾಲ್‌| ಎಬಿಪಿ- ಸಿವೋಟರ್‌ ಸಮೀಕ್ಷೆ


ನವದೆಹಲಿ[ಜ.07]: ಫೆ.8ರಂದು ದೆಹಲಿ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಆಮ್‌ಆದ್ಮಿ ಪಕ್ಷ ಮತ್ತೊಮ್ಮೆ ಭರ್ಜರಿ ಪ್ರದರ್ಶನ ಮೂಲಕ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣಾಪೂರ್ವ ಸಮೀಕ್ಷೆಯೊಂದು ಹೇಳಿದೆ. ಸೋಮವಾರ ಚುನಾವಣೆಗೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ಎಬಿಪಿ- ಸಿ ವೋಟರ್‌ ನಡೆಸಿದ ಸಮೀಕ್ಷೆ ಅನ್ವಯ ಆಮ್‌ಆದ್ಮಿ ಪಕ್ಷಕ್ಕೆ 59, ಕಾಂಗ್ರೆಸ್‌ಗೆ 8 ಮತ್ತು ಕಾಂಗ್ರೆಸ್‌ಗೆ 3 ಸ್ಥಾನ ಲಭ್ಯವಾಗಲಿದೆ.

ದೆಹಲಿ ವಿಧಾನಸಭೆ ಚುನಾವಣೆಗೆ ಡೇಟ್ ಫಿಕ್ಸ್: ಒಂದೇ ಹಂತದಲ್ಲಿ ಎಲೆಕ್ಷನ್

Tap to resize

Latest Videos

ಕಳೆದ ಬಾರಿಗಿಂತ ಆಮ್‌ಆದ್ಮಿ ಸ್ಥಾನ ಬಲ 8 ಕಡಿಮೆ ಆದರೂ, ಅದು ಸುಲಭವಾಗಿ ಅಧಿಕಾರಕ್ಕೆ ಬರಲಿದೆ. ಕಳೆದ ಬಾರಿ 3 ಸ್ಥಾನಗಳಿಸಿದ್ದ ಬಿಜೆಪಿ ತನ್ನ ಬಲವನ್ನು 8ಕ್ಕೆ ಏರಿಸಿಕೊಳ್ಳಲಿದೆ. ಇನ್ನು ಕಳೆದ ಬಾರಿ ಶೂನ್ಯ ಸಾಧನೆ ಮಾಡಿದ್ದ ಕಾಂಗ್ರೆಸ್‌ ಈ ಬಾರಿ 3 ಸ್ಥಾನ ಗೆಲ್ಲಲಿದೆ. ಆಪ್‌ ಶೇ.53ರಷ್ಟು, ಬಿಜೆಪಿ ಶೇ.26ರಷ್ಟುಮತ್ತು ಕಾಂಗ್ರೆಸ್‌ ಶೇ.5ರಷ್ಟುಮತ ಪಡೆದುಕೊಳ್ಳಲಿವೆ ಎಂದು ಸಮೀಕ್ಷೆ ಹೇಳಿದೆ.

ಮುಖ್ಯಮಂತ್ರಿ ರೇಸ್‌ನಲ್ಲಿ ಈಗಲೂ ಕೇಜ್ರಿವಾಲ್‌ ಮುಂಚೂಣಿಯಲ್ಲಿದ್ದಾರೆ.

ಒಟ್ಟು ಸ್ಥಾನ ಬಲ70
ಬಹುಮತಕ್ಕೆ36
ಆಪ್‌ 59
ಬಿಜೆಪಿ 8
ಕಾಂಗ್ರೆಸ್‌ 3

ಹೀಗಿದೆ ದೆಹಲಿ ಚುನಾವಣಾ ಅಖಾಡ:

"

 

click me!