ದೆಹಲಿ ವಿಧಾನಸಭೆ ಚುನಾವಣೆಗೆ ಡೇಟ್ ಫಿಕ್ಸ್: ಒಂದೇ ಹಂತದಲ್ಲಿ ಎಲೆಕ್ಷನ್

By Suvarna News  |  First Published Jan 6, 2020, 6:28 PM IST

70 ಕ್ಷೇತ್ರಗಳ ದೆಹಲಿ ವಿಧಾನಸಭೆ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣೆ ಆಯೋಗದ ಮುಖ್ಯ ಆಯುಕ್ತ ಘೋಷಣೆ ಮಾಡಿದ್ದಾರೆ. ಹಾಗಾದ್ರೆ ನಾಪಪತ್ರ ಸಲ್ಲಿಕೆ ಯಾವಾಗಿನಿಂದ..? ಚುನಾವಣೆ ಯಾವಾಗ..? ಮತ ಎಣಿಕೆ ಎಂದು..? ಎಲ್ಲಾ ಮಾಹಿತಿ ಈ ಕೆಳಗಿನಂತಿದೆ.


ನನದೆಹಲಿ, [ಜ.06]: ರಾಜಧಾನಿ ದೆಹಲಿಯಲ್ಲಿ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, 70 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಕೇಂದ್ರ  ಚುನಾವಣಾ  ಆಯೋಗದ ಆಯುಕ್ತ ಸುನೀಲ್ ಅರೋರ ಅವರು ಇಂದು [ಸೋಮವಾರ] ಸುದ್ದಿಗೋಷ್ಠಿ ನಡೆಸಿ ದೆಹಲಿ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದರು.

Latest Videos

undefined

ಕಾಂಗ್ರೆಸ್‌ಗೆ ಮರಳಿದ ಅನರ್ಹಗೊಂಡ MLA 

ದೆಹಲಿಯಲ್ಲಿ ಒಟ್ಟು 1,46,92,136 ಮತದಾರರಿದ್ದಾರೆ. 13,750 ಮತಗಟ್ಟೆಗಳಲ್ಲಿ ಮತದಾನವಾಗಲಿದೆ. ಮಾಧ್ಯಮ ಮೇಲ್ವಿಚಾರಣೆ ವಿಭಾಗವನ್ನು ತೆರೆಯಲಾಗುವುದು. ದೆಹಲಿ ಚುನಾವಣಾ ಪ್ರಕ್ರಿಯೆಗೆ ಒಟ್ಟು 90 ಸಾವಿರ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.

Delhi assembly elections to be held on 8 February; counting of votes on 11th February pic.twitter.com/ApYhjMjgMv

— ANI (@ANI)

ಚುನಾವಣೆಯ ವೇಳಾಪಟ್ಟಿ ಅಂತಿಮಗೊಳಿಸುವ ಮುನ್ನ ಮೂವರು ಕಾರ್ಯದರ್ಶಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಚುನಾವಣೆ ಹೈಲೆಟ್ಸ್
* ಒಂದೇ ಹಂತದಲ್ಲಿ ದೆಹಲಿ ಚುನಾವಣೆ
* ಜ.14ರಂದು ಚುನಾವಣೆಗೆ ಅಧಿಸೂಚನೆ 
* 21ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನ
* ಜನವರಿ 24ರಂದು ನಾಮಪತ್ರ ವಾಪಸ್
* ಫೆ.8ರಂದು ದೆಹಲಿ ವಿಧಾನಸಭಾ ಚುನಾವಣೆ
* ಫೆ.11ರಂದು ವಿಧಾನಸಭಾ ಚುನಾವಣಾ ಫಲಿತಾಂಶ
* ಫೆ.22- ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ

ಈಗಿನ ದೆಹಲಿ ವಿಧಾನಸಭೆಯ ಕಾಲಾವಧಿ ಫೆಬ್ರವರಿ 22ಕ್ಕೆ ಮುಕ್ತಾಯಗೊಳ್ಳಕಿದ್ದು, 70 ಸದಸ್ಯ ಬಲದ ವಿಧಾನಸಭೆಗೆ 2015ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್‌ ಆದ್ಮಿ ಪಕ್ಷ (ಎಎಪಿ) 67 ಸ್ಥಾನಗಳನ್ನು ಗೆದ್ದಿತ್ತು. 

click me!