ಪಾಕ್‌ನಿಂದ ತಂದಿದ್ದ 175 ಕೋಟಿಯ ಡ್ರಗ್ಸ್‌ ವಶ, ಐವರ ಬಂಧನ!

Published : Jan 07, 2020, 09:22 AM IST
ಪಾಕ್‌ನಿಂದ ತಂದಿದ್ದ 175 ಕೋಟಿಯ ಡ್ರಗ್ಸ್‌ ವಶ, ಐವರ ಬಂಧನ!

ಸಾರಾಂಶ

ಪಾಕ್‌ನಿಂದ ತಂದಿದ್ದ 175 ಕೋಟಿಯ ಡ್ರಗ್ಸ್‌ ವಶ, ಐವರ ಬಂಧನ|  ಕಛ್‌ ಜಿಲ್ಲೆಯ ಜಕಾವು ಕರಾವಳಿಯಲ್ಲಿ ಗುಜರಾತ್‌ ಉಗ್ರ ನಿಗ್ರಹ ದಳ ಹಾಗೂ ಭಾರತೀಯ ಕೋಸ್ಟ್‌ ಗಾರ್ಡ್‌ ಅಧಿಕಾರಿಗಳಿಂದ ಬಂಧನ

ಅಹ್ಮದಾಬಾದ್‌[ಜ.07]: ಪಾಕಿಸ್ತಾನದಿಂದ ಗುಜರಾತ್‌ಗೆ 175 ಕೋಟಿ ಮೌಲ್ಯದ ಡ್ರಗ್ಸ್‌ ಕಳ್ಳ ಸಾಗಣಿಕೆ ಮಾಡುತ್ತಿದ್ದ ಐವರು ಪಾಕಿಸ್ತಾನಿ ನಾಗರಿಕರನ್ನು ಕಛ್‌ ಜಿಲ್ಲೆಯ ಜಕಾವು ಕರಾವಳಿಯಲ್ಲಿ ಗುಜರಾತ್‌ ಉಗ್ರ ನಿಗ್ರಹ ದಳ ಹಾಗೂ ಭಾರತೀಯ ಕೋಸ್ಟ್‌ ಗಾರ್ಡ್‌ ಅಧಿಕಾರಿಗಳು ಸಮುದ್ರದಲ್ಲಿ ಬಂಧಿಸಿದ್ದಾರೆ.

ಬಂಧಿತರಿಂದ ತಲಾ ಒಂದು ಕೆಜಿ ತೂಕದ 35 ಹೆರಾಯಿನ್‌ ಪೊಟ್ಟಣ ವಶ ಪಡಿಸಿಕೊಳ್ಳಲಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ 175 ಕೋಟಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಮುಂಜಾನೆ ಅರಬಿ ಸಮುದ್ರದಲ್ಲಿ ಉಗ್ರ ನಿಗ್ರಹ ದಳ ಹಾಗೂ ಕೋಸ್ಟ್‌ ಗಾರ್ಡ್‌ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇವರನ್ನ ಸೆರೆ ಹಿಡಿಯಲಾಗಿದ್ದು, ಪಾಕಿಸ್ತಾನದಿಂದ ಮೀನುಗಾರಿಕಾ ಬೋಟ್‌ನಲ್ಲಿ ಡ್ರಗ್ಸ್‌ ಸಾಗಿಸಲಾಗುತ್ತಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Bengaluru devotee donation to Tirupati: ತಿರುಪತಿಗೆ ಬೆಂಗಳೂರು ಭಕ್ತೆಯಿಂದ ₹95 ಲಕ್ಷದ 7 ಚಿನ್ನದ ಪದಕ ದಾನ!
Monsoon 2026: ಈ ವರ್ಷ ಮೇ 25ಕ್ಕೇ ಕೇರಳಕ್ಕೆ ಮುಂಗಾರು ಆಗಮನ ಸಾಧ್ಯತೆ