
ನವದೆಹಲಿ (ಮೇ.8): ರಾಜಸ್ಥಾನದಲ್ಲಿ ಲಿಥಿಯಂನ ಬೃಹತ್ ನಿಕ್ಷೇಪ ಪತ್ತೆಯಾಗಿದೆ. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಅಂದರೆ ಜಿಎಸ್‌ಐ ಪ್ರಕಾರ, ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಪತ್ತೆಯಾಗಿರುವ ಲೀಥಿಯಂ ನಿಕ್ಷೇಪದ ಮೀಸಲಿಗಿಂತ ಬೃಹತ್ ಪ್ರಮಾಣದಲ್ಲಿದೆ. ಇಲ್ಲಿನ ನಾಗೌರ್ ಪ್ರದೇಶದಲ್ಲಿ ಕಂಡುಬಂದಿರುವ ನಿಕ್ಷೇಪ, ದೇಶದ ಲಿಥಿಯಂ ಬೇಡಿಕೆಯ 80 ಪ್ರತಿಶತವನ್ನು ಪೂರೈಸಬಹುದು ಎಂದು ಅಂದಾಜು ಮಾಡಲಾಗಿದೆ. ದೇಶದ ಅತಿದೊಡ್ಡ ಲಿಥಿಯಂ ನಿಕ್ಷೇಪಗಳು ಪತ್ತೆಯಾದ ನಂತರ ಇವಿ ಉದ್ಯಮದಲ್ಲಿ ಮತ್ತೊಮ್ಮೆ ಸಂತೋಷದ ಅಲೆ ಎದ್ದಿದೆ. ದೇಶದಲ್ಲಿ ಲಿಥಿಯಂ ನಿಕ್ಷೇಪಗಳು ಮತ್ತು ಉತ್ಪಾದನೆಯು ಎಲೆಕ್ಟ್ರಿಕ್ ವಾಹನಗಳ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ. ಇದು ಮುಂದಿನ ದಿನಗಳಲ್ಲಿ ಇವಿ ವಾಹನ ಮಾರುಕಟ್ಟೆಗೆ ಮತ್ತು ಅದರ ಗ್ರಾಹಕರಿಗೆ ನೇರವಾಗಿ ಪ್ರಯೋಜನವನ್ನು ನೀಡಲಿದೆ. ರಾಜಸ್ಥಾನದ ಜೊತೆಗೆ ಜಮ್ಮು-ಕಾಶ್ಮೀರ, ಮೇಘಾಲಯ, ಆಂಧ್ರಪ್ರದೇಶ ಮತ್ತು ಛತ್ತೀಸ್‌ಗಢದಲ್ಲೂ ಲಿಥಿಯಂ ಹುಡುಕಾಟವನ್ನು ಜಿಎಸ್‌ಐ ಮಾಡುತ್ತಿದೆ.
ಜಿಎಸ್‌ಐನಿಂದ ಹುಡುಕಾಟ: ಹಸಿರು ಆರ್ಥಿಕತೆಯ ಒತ್ತಡದ ಮಧ್ಯೆ, ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (GSI) ಲಿಥಿಯಂ, ನಿಕಲ್, ಕೋಬಾಲ್ಟ್ ಮತ್ತು ಇತರ ಅಪರೂಪದ ಮತ್ತು ಪ್ರಮುಖ ಖನಿಜಗಳ ಅನ್ವೇಷಣೆ ಮಾಡಲು ಆರಂಭಿಸಿದೆ. ಜಿಎಸ್‌ಐನ ವಾರ್ಷಿಕ ಯೋಜನೆಗಳ ಮೂರನೇ ಒಂದು ಭಾಗವು ಈ ಅಂಶಗಳನ್ನು ಹುಡುಕುವುದಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಭಾನುವಾರ ಹೇಳಿದ್ದಾರೆ. ಶುದ್ಧ ಶಕ್ತಿ ತಂತ್ರಜ್ಞಾನಗಳಿಗೆ ಈ ಖನಿಜಗಳು ಮುಖ್ಯವಾಗಿವೆ. ಜಿಎಸ್‌ಐ ಡೆಪ್ಯುಟಿ ಡೈರೆಕ್ಟರ್ ಜನರಲ್ (ನೀತಿ ಬೆಂಬಲ ವ್ಯವಸ್ಥೆಗಳು - ಯೋಜನೆ ಮತ್ತು ಮಾನಿಟರಿಂಗ್) ಅಸಿತ್ ಸಹಾ ಅವರು ಖನಿಜ ಪರಿಶೋಧನೆಗಾಗಿ ಜಿಯೋಸೈನ್ಸ್ ಆಸ್ಟ್ರೇಲಿಯಾದೊಂದಿಗೆ ರಾಷ್ಟ್ರೀಯ ಸರ್ವೇಕ್ಷಣಾ ಸಂಸ್ಥೆ ಈಗ ಕೆಲಸ ಮಾಡುತ್ತಿದೆ. ಇದಲ್ಲದೆ, ಅವರು ರಷ್ಯಾ ಮತ್ತು ಬ್ರೆಜಿಲ್ ಜೊತೆಗೂ ಈ ವಿಚಾರದಲ್ಲಿ ಕೆಲಸ ಮಾಡಲು ಉತ್ಸುಕರಾಗಿದ್ದಾರೆ.
ಜಮ್ಮುಕಾಶ್ಮೀರ: ದೇಶದಲ್ಲಿ ಇದೇ ಮೊದಲ ಬಾರಿಗೆ ಭಾರಿ ಮೌಲ್ಯದ ಲಿಥಿಯಂ ನಿಕ್ಷೇಪ ಪತ್ತೆ
100ಕ್ಕೂ ಹೆಚ್ಚಿನ ಯೋಜನೆಗಳು ಚಾಲ್ತಿಯಲ್ಲಿ: ನಾವು ಪ್ರಮುಖ ಖನಿಜಗಳಿಗಾಗಿ 2020-21 ರಿಂದ ಪ್ರತಿ ವರ್ಷ 100 ಕ್ಕೂ ಹೆಚ್ಚು ಪರಿಶೋಧನಾ ಯೋಜನೆಗಳನ್ನು ನಡೆಸುತ್ತಿದ್ದೇವೆ. ಇದು 2023-24ರಲ್ಲಿಯೂ ಮುಂದುವರಿಯುತ್ತದೆ. ಇದು ನಮ್ಮ ಪ್ರಬಲ ಪ್ರದೇಶವಾಗಿದೆ. ಮೊದಲು ಇಂತಹ ಯೋಜನೆಗಳ ಸಂಖ್ಯೆ 60-70 ಇತ್ತು ಆದರೆ ಈಗ ನಾವು ಅದನ್ನು ಗಣನೀಯವಾಗಿ ಹೆಚ್ಚಿಸಿದ್ದೇವೆ. "ಒಂದು ವರ್ಷದಲ್ಲಿ ಸುಮಾರು 350 ಖನಿಜ ಪರಿಶೋಧನೆ ಯೋಜನೆಗಳು ಇವೆ, ನಿರ್ಣಾಯಕ ಖನಿಜಗಳ ಕನಿಷ್ಠ ಮೂರನೇ ಒಂದು ಭಾಗದಷ್ಟು ಇವೆ. ಉಳಿದವು ಮೂಲ ಲೋಹ, ಚಿನ್ನ, ವಜ್ರ, ಸುಣ್ಣದ ಕಲ್ಲು ಮತ್ತು ಬೃಹತ್ ಖನಿಜಗಳು ಇತ್ಯಾದಿಗಳಾಗಿವೆ. ಜಿಎಸ್‌ಐ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್-ಹೈಮ್ನಾ ಪ್ರದೇಶದಲ್ಲಿ ಲಿಥಿಯಂ ಅನ್ನು ಕಂಡುಹಿಡಿದಿದೆ, ಇದು ಅಂದಾಜು 5.9 ಮಿಲಿಯನ್ ಟನ್‌ಗಳ ಮೀಸಲು ಸಾಮರ್ಥ್ಯ ಹೊಂದಿರುವ ನಿಕ್ಷೇಪವಾಗಿದೆ.
ಶ್ರೀರಂಗಪಟ್ಟಣದಲ್ಲಿ 1600 ಟನ್ ಲಿಥಿಯಂ ನಿಕ್ಷೇಪ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ