
ಮುಂಬೈ (ಸೆ.27): 27 ವರ್ಷದ ಯುವತಿಯೊಬ್ಬಳು ತನ್ನ ಮನೆ ಮಾಲೀಕ ತನ್ನ ಮೇಲೆ ದೌರ್ಜನ್ಯ ನಡೆಸುತ್ತಿರುವುದಾಗಿ ಆರೋಪಿಸಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 26 ವರ್ಷದ ಯುವತಿ, ರೆಡ್ಡಿಟ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಮನೆ ಮಾಲೀಕ, ರಿಪೇರಿ ಎನ್ನುವ ನೆಪದಲ್ಲಿ ತಮ್ಮ ಮನೆಗೆ ಬಂದಿದ್ದ ಎಂದು ಮಹಿಳೆ ಆರೋಪಿಸಿದ್ದಲ್ಲದೆ, ನಂತರ, ಈ ಮಾಲೀಕರು ಅಶ್ಲೀಲ ಡಿವಿಡಿಗಳ ಸಂಗ್ರಹವನ್ನು ನನಗೆ ತೋರಿಸಿದ್ದ ಎಂದಿದ್ದಾರೆ. ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿದೆ. ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತು ಹೆಚ್ಚು ಜಾಗರೂಕರಾಗಿರುವಂತೆ ಅನೇಕರು ಸಲಹೆ ನೀಡಿದ್ದಾರೆ.
ಆ ಮಹಿಳೆ ತನ್ನ ರೆಡ್ಡಿಟ್ ಖಾತೆಯಲ್ಲಿ ಪೋಸ್ಟ್ ಮಾಡಿ ಘಟನೆಯನ್ನು ವಿವರಿಸಿದ್ದಾರೆ. ಆ ಪೋಸ್ಟ್‌ನಲ್ಲಿ 40 ವರ್ಷ ವಯಸ್ಸಿನ ತನ್ನ ಮನೆ ಮಾಲೀಕ ಭಾನುವಾರ ರಿಪೇರಿ ನೆಪದಲ್ಲಿ ತಮ್ಮ ಮನೆಗೆ ಬಂದಿದ್ದ ಎಂದು ಬರೆದಿದ್ದಾರೆ. ಅವರು ತಮ್ಮ ಟ್ಯಾಬ್ಲೆಟ್‌ಗೆ ಕೆಲವು ಹಳೆಯ ಹಾರ್ಡ್ ಡ್ರೈವ್‌ಗಳನ್ನು ಸಂಪರ್ಕಿಸಲು ಬಯಸಿದ್ದರು ಎಂದು ಹೇಳಿದ್ದರು. ಯುವತಿ ಬಹುಶಃ ಇದು ಚಲನಚಿತ್ರ ಅಥವಾ ಡೇಟಾ ಸಂಬಂಧಿತ ಕೆಲಸ ಎಂದು ಭಾವಿಸಿದ್ದರು. ಹಾಗಾಗಿಯೇ ಮನೆ ಮಾಲೀಕನಿಗೆ ಸಹಾಯ ಮಾಡಲು ಮುಂದೆ ಬಂದಿದ್ದರು. ಆದರೆ, ನಂತರ ಆತ ಪ್ಲಾಸ್ಟಿಕ್ ಚೀಲದಿಂದ ಹಲವಾರಿ ಡಿವಿಡಿ ತೋರಿಸಲು ಆರಂಭಿಸಿದ್ದರಿಂದ ಆಕೆ ಭಯಭೀತಳಾಗಿದ್ದಾಳೆ.
ಮಹಿಳೆಯ ಪ್ರಕಾರ, ಮನೆ ಮಾಲೀಕ ಆರಂಭದಲ್ಲಿ, "ಕ್ಷಮಿಸಿ, ನಾನು ನಿಮಗೆ ಇದನ್ನೆಲ್ಲಾ ತೋರಿಸಲು ಬಯಸಲಿಲ್ಲ, ನನಗೆ ಈಗ ವಯಸ್ಸಾಗಿಲ್ಲ" ಎಂದು ಹೇಳಿದ್ದರು. ಆರಂಭದಲ್ಲಿ ಯುವತಿ ಆ ಡಿವಿಡಿಯಲ್ಲಿ ಸಾಮಾನ್ಯ ಸಿನಿಮಾಗಳು ಇರಬಹುದು ಎಂದು ಭಾವಿಸಿದ್ದಳು. ಆದರೆ, ಟ್ಯಾಬ್ಲೆಟ್‌ಗೆ ಕನೆಕ್ಟ್ ಮಾಡಿದ ಬಳಿಕ ಇವು ಅಶ್ಲೀಲ ಸಿನಿಮಾಗಳ ವಿಡಿಯೋಗಳು ಎನ್ನುವುದು ಗೊತ್ತಾಗಿದೆ. ಮನೆ ಮಾಲೀಕ ಒಂದೊಂಡೆ ಡಿವಿಡಿಗಳನ್ನು ತೋರಿಸಲು ಆರಂಭಿಸಿದ್ದ ಎಂದಿದ್ದಾಳೆ. ಕೊನೆಗೆ ಒಂದು ಡಿವಿಡಿಯ ಮುಖಪುಟ ಒಂದರಲ್ಲೇ ಅಶ್ಲೀಲ ಪೋಸ್ಟರ್‌ಗಳನ್ನು ಕಂಡಾಗ ಆತನ ಉದ್ದೇಶ ಅರ್ಥವಾಗಿತ್ತು ಎಂದಿದ್ದಾರೆ. ಆ ಸಮಯದಲ್ಲಿ ನನಗೆ ಆಘಾತವಾಗಿದ್ದರಿಂದ ಮಖವನ್ನು ಬೇರೆಡೆಗೆ ತಿರುಗಿಸಿಕೊಂಡೆ ಎಂದು ಬರೆದಿದ್ದಾಳೆ.
ಈಗ ನಾನು ಮುಂದೇನು ಮಾಡಬೇಕು ಎಂದು ರೆಡ್ಡಿಟ್‌ನಲ್ಲಿ ಆಕೆ ಪ್ರಶ್ನೆ ಮಾಡಿದ್ದಾಳೆ. ಪೊಲೀಸ್ ದೂರು ದಾಖಲಿಸುತ್ತಾಳೆಯೇ ಅಥವಾ ಇಲ್ಲವೇ ಅನ್ನೋದನ್ನು ಸ್ಪಷ್ಟಪಡಿಸಿಲ್ಲ. ಇದಕ್ಕೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಯೂಸರ್ 'ಅವನನ್ನು ಎಂದಿಗೂ ಒಬ್ಬಂಟಿಯಾಗಿ ಮನೆಗೆ ಬರಲು ಬಿಡಬೇಡಿ, ಅವನು ಬರುವಾಗ ಅವನೊಂದಿಗೆ ಯಾರಾದರೂ ಇರುವಂತೆ ನೋಡಿಕೊಳ್ಳಿ' ಎಂದಿದ್ದಾರೆ. ಇದಕ್ಕೆ ಆಕೆ, ಮನೆ ಮಾಲೀಕರು ಆಗ್ಗಾಗೆ ಹೇಳದೇ ಕೇಳದೆ ಮನೆಗೆ ಬರುತ್ತಾರೆ ಎಂದು ಹೇಳಿದ್ದಲ್ಲದೆ, ಮನೇ ಮಾಲೀಕ ಮನೆಯಲ್ಲಿ ಒಬ್ಬನೇ ಇರುವುದು ಎಂದು ಉತ್ತರಿಸಿದ್ದಾಳೆ. ನಾನೂ ಕೂಡ ಒಬ್ಬಾಕೆಯೇ ಇರುವುದು. ಇದರಿಂದಾಗಿ ಯಾರಿಗಾದರೂ ಸಮಯಕ್ಕೆ ಸರಿಯಾಗಿ ಕರೆ ಮಾಡುವುದು ಕಷ್ಟವಾಗುತ್ತದೆ ಎಂದಿದ್ದಾರೆ. ಈ ನಡುವೆ, ಅನೇಕ ಬಳಕೆದಾರರು ಕಾನೂನು ಸಲಹೆ ಪಡೆಯಲು ಮತ್ತು ಅಧಿಕಾರಿಗಳನ್ನು ತಕ್ಷಣ ಸಂಪರ್ಕಿಸಲು ಸಲಹೆ ನೀಡಿದರು.
ಈ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮನೆ ಮಾಲೀಕರ ಕೃತ್ಯದ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಮಹಿಳೆಯ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಘಟನೆಗಳನ್ನು ನಿರ್ಲಕ್ಷಿಸುವುದು ಅಪಾಯಕಾರಿ ಎಂದು ಕೆಲವರು ಹೇಳುತ್ತಿದ್ದಾರೆ ಮತ್ತು ಮಹಿಳೆ ತಕ್ಷಣ ಪೊಲೀಸರಿಗೆ ದೂರು ನೀಡಬೇಕು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ