
ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಅಚ್ಚರಿ ಮೂಡಿಸುವ ಮತ್ತು ಜನರನ್ನು ಭಯಭೀತಗೊಳಿಸುವ ವೀಡಿಯೊಗಳು ಇರುತ್ತವೆ. ಅಂತಹ ಒಂದು ವೀಡಿಯೊ ಪ್ರಸ್ತುತ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ವಿಷಕಾರಿ, ಅಪಾಯಕಾರಿ ನಾಗರಹಾವು ಹಣ ಮತ್ತು ಚಿನ್ನದ ಆಭರಣಗಳಿಂದ ತುಂಬಿದ ತಿಜೋರಿಯ ಒಳಗೆ ಇರೋದನ್ನು ಕಾಣಬಹುದಾಗಿದೆ. ಈ ದೃಶ್ಯವು ತುಂಬಾ ಭಯಾನಕವಾಗಿದ್ದು ವಿಡಿಯೋ ನೋಡಿದವರೆ ವೀಕ್ಷಕರು ಆಘಾತಗೊಂಡಿದ್ದಾರೆ. ಸಾಮಾನ್ಯವಾಗಿ ತಿಜೋರಿ ಅನ್ನೋದು ಮುಚ್ಚಿಯೇ ಇರುತ್ತದೆ. ಹಾಗಿದ್ದರೂ, ಹಾವು ತಿಜೋರಿಯ ಒಳಗೆ ಹೋಗಿದ್ದೇಗೆ ಎಂದೇ ಜನರು ಆಶ್ಚರ್ಯಪಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಕಬ್ಬಿಣದ ತಿಜೋರಿಯಲ್ಲಿ ಹಾವೊಂದು ಹೆಡೆಯೆತ್ತಿ ಕುಳಿತಿರುವುದನ್ನು ನೀವು ನೋಡಬಹುದು. ಹಣ ಮತ್ತು ಚಿನ್ನದ ಆಭರಣಗಳ ಕಟ್ಟುಗಳನ್ನು ತಿಜೋರಿಯಲ್ಲಿ ಇಡಲಾಗಿದೆ. ಹಾವು ಅದರ ಮೇಲೆ ಹೆಡೆಯೆತ್ತಿ ನಿಂತಿರುವುದನ್ನು ಕಾಣಬಹುದು. ಒಬ್ಬ ವ್ಯಕ್ತಿಯು ತಿಜೋರಿಯಲ್ಲಿ ಕೈ ಹಾಕಲು ಪ್ರಯತ್ನಿಸಿದಾಗ, ಕೋಪಗೊಂಡ ಹಾವು ಕಚ್ಚಲು ಮುಂದಾಗುತ್ತದೆ. ವೀಡಿಯೊದಲ್ಲಿ ಹಾವಿನ ಬುಸ್‌ಗುಡುವ ಶಬ್ದ ಕೂಡ ಕೇಳಿಸುತ್ತದೆ. ಈ ವಿಡಿಯೋ ನೋಡಿ ಜನರು ಹೌಹಾರಿದ್ದು, ಇಂಥ ವಿಷಕಾರಿ ಹಾವು ತಿಜೋರಿಯೊಳಗೆ ಪ್ರವೇಶಿಸುವುದು ದುಃಸ್ವಪ್ನಕ್ಕಿಂತ ಕಡಿಮೆಯಿಲ್ಲ ಎಂದಿದ್ದಾರೆ. ಸಾಮಾನ್ಯವಾಗಿ, ಹಾವು ಸ್ನಾನಗೃಹ ಅಥವಾ ಮಲಗುವ ಕೋಣೆಗೆ ಪ್ರವೇಶಿಸುವುದು ಸಾಮಾನ್ಯ, ಆದರೆ ತಿಜೋರಿಯೊಳಗೆ ಪ್ರವೇಶಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಈ ಆಘಾತಕಾರಿ ವೀಡಿಯೊವನ್ನು ಸೋಶಿಯಲ್ ಮೀಡಿಯಾ ವೇದಿಕೆ X (ಟ್ವಿಟರ್) ನಲ್ಲಿ @abhishek902444 ಐಡಿ ಮೂಲಕ ಹಂಚಿಕೊಳ್ಳಲಾಗಿದೆ. ಈ ವೀಡಿಯೊವನ್ನು ಹಂಚಿಕೊಂಡಿರುವ ವ್ಯಕ್ತಿ, 'ನಾನು ಯಾವಾಗಲೂ ಅದರ ಬಗ್ಗೆ ಕೇಳಿದ್ದೆ, ಆದರೆ ಈಗ ನಾನು ಅದನ್ನು ನೋಡಿದ್ದೇನೆ. ನಾನು ವೃದ್ಧರಿಂದ, ನನ್ನ ಅಜ್ಜಿಯರಿಂದ ಕೇಳಿದ್ದೆ, ಮೊದಲು, ಹಣವನ್ನು ನೆಲದಲ್ಲಿ ಹೂತುಹಾಕಿದ್ದಲ್ಲಿ, ಹಾವುಗಳು ಅದನ್ನು ರಕ್ಷಿಸುತ್ತಿದ್ದವು. ಆದರೆ ಈ ಹಾವು ಕಬ್ಬಿಣದ ಬೀರು, ತಿಜೋರಿಗೆ ತಲುಪಿದ್ದು ಹೇಗೆ? ಈ ಹಾವಿಗೆ ಇಲ್ಲಿ ವಿಳಾಸವನ್ನು ನೀಡಿದವರು ಯಾರು? ಎಂದು ಪೋಸ್ಟ್ ಮಾಡಿದ್ದಾರೆ.
ಕೇವಲ 10 ಸೆಕೆಂಡುಗಳ ಈ ವೀಡಿಯೊವನ್ನು ಇಲ್ಲಿಯವರೆಗೆ 3 ಲಕ್ಷ 76 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ನೂರಾರು ಜನರು ವೀಡಿಯೊವನ್ನು ಇಷ್ಟಪಟ್ಟಿದ್ದಾರೆ ಮತ್ತು ವಿವಿಧ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಈ ವೀಡಿಯೊವನ್ನು ನೋಡಿದ ನಂತರ ಹೆಚ್ಚಿನ ಯೂಸರ್‌ಗಳು ಆಶ್ಚರ್ಯಚಕಿತರಾಗಿದ್ದಾರೆ. ಹಾವು ಸೇಫ್ ಲಾಕರ್‌ಗೆ ಪ್ರವೇಶಿಸಿದ್ದುಹೇಗೆ ? ಅನೇಕರು ಈ ಬಗ್ಗೆ ಆಶ್ಚರ್ಯಪಟ್ಟಿದ್ದಾರೆ. ಒಬ್ಬ ಯೂಸರ್ 'ಜಲ್ವಾ ಆಹ್ ಭಾಯ್ ನಾಗರಾಜ. ಇದು ತುಂಬಾ ಅಪಾಯಕಾರಿ ವೀಡಿಯೊ. ಹಾವು ಸೇಫ್ ಲಾಕರ್‌ಗೆ ಹೇಗೆ ಪ್ರವೇಶಿಸಬಹುದು?' ಎಂದು ಬರೆದಿದ್ದರೆ, ಮತ್ತೊಬ್ಬ ಯೂಸರ್ 'ಈ ಕಥೆ ನಿಜ, ನಮ್ಮ ಮನೆಯಲ್ಲೂ ನನ್ನ ಅಜ್ಜಿ ಮತ್ತು ಅಜ್ಜ ಹಾವುಗಳು ಸಂಪತ್ತನ್ನು ರಕ್ಷಿಸುತ್ತವೆ ಎಂದು ಹೇಳುತ್ತಿದ್ದರು. ಇದು ಹೆಚ್ಚಿನ ಮಟ್ಟಿಗೆ ನಿಜವೆಂದು ಸಾಬೀತಾಗಿದೆ' ಎಂದು ಬರೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ