62 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಡೆಸಿ ಗೆದ್ದ 82ರ ವೃದ್ಧ

Published : Dec 15, 2025, 07:58 AM IST
Faridabad land case 1963

ಸಾರಾಂಶ

ಪಂಜಾಬ್‌ನ 80 ವರ್ಷದ ವೃದ್ಧರೊಬ್ಬರು 62 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಭೂ ವ್ಯಾಜ್ಯವನ್ನು ಗೆದ್ದಿದ್ದಾರೆ. 1963ರಲ್ಲಿ ತಮ್ಮ ತಾಯಿ ಖರೀದಿಸಿದ್ದ ಸೈಟುಗಳಿಗೆ ಸಂಬಂಧಿಸಿದ ಈ ಪ್ರಕರಣದಲ್ಲಿ, ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ ವೃದ್ಧರ ಪರ ತೀರ್ಪು ನೀಡಿದೆ.

ಚಂಡೀಗಢ: ಪಂಜಾಬ್‌ನ 80ರ ವೃದ್ಧರೊಬ್ಬರು ಬರೋಬ್ಬರಿ 62 ವರ್ಷಗಳ ಬಳಿಕ ಭೂ ವ್ಯಾಜ್ಯವನ್ನು ನ್ಯಾಯಾಲಯದಲ್ಲಿ ಗೆದ್ದಿದ್ದು, ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ವೃದ್ಧರ ಪರವಾಗಿ ತೀರ್ಪು ಕೊಟ್ಟು ಪ್ರಕರಣಕ್ಕೆ ಇತಿಶ್ರೀ ಹಾಡಿದೆ. ಜೊತೆಗೆ 1963ರಲ್ಲಿದ್ದ ಬೆಲೆಗೇ ಭೂಮಿಯನ್ನು ಕೊಡುವಂತೆ ಎದುರಾಳಿಗೆ ಆದೇಶಿಸಿದೆ.

ಏನಿದು ಪ್ರಕರಣ?

ಸಿ.ಕೆ.ಆನಂದ್‌ ಪ್ರಕರಣದಲ್ಲಿ ಉಳಿದಿರುವ ಅರ್ಜಿದಾರರ ತಾಯಿ ನಂಕಿ ದೇವಿ ಅವರು 1963ರಲ್ಲಿ 14,000 ರು.ಗಳಿಗೆ ಫರೀದಾಬಾದ್‌ನಲ್ಲಿ ಆರ್‌ಸಿ ಸೂದ್‌ ಮತ್ತು ಕಂಪನಿಯ ಎರೋಸ್‌ ಗಾರ್ಡನ್ಸ್‌ ರೆಸಿಡೆನ್ಸಿ ಎಂಬುವರಿಂದ 350 ಮತ್ತು 217 ಚದರಡಿಯ 2 ಸೈಟ್‌ಗಳನ್ನು ಖರೀದಿಸಿದ್ದರು. ಇದರ ಅರ್ಧದಷ್ಟು ಹಣವನ್ನು ಸಹ ಪಾವತಿ ಮಾಡಿದ್ದರು. ಆದರೆ ಇದಾದ ಬಳಿಕ ಪಂಜಾಬ್‌ ಮತ್ತು ಹರ್ಯಾಣ ಸರ್ಕಾರಗಳು ತಂದಿದ್ದ ನಿಯಮಗಳಿಂದ ಅಡೆಚಣೆಯಾಗಿ, ಕಂಪನಿಯು ಸೈಟು ವಿತರಿಸುವಲ್ಲಿ ವಿಳಂಬ ಮಾಡಿ, ಆಡಳಿತಾತ್ಮಕವಾಗಿಯೂ ಅಡೆಚಣೆಯಾಗಿತ್ತು.

ಇದನ್ನೂ ಓದಿ: ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು: ಎರಡೂ ಬಣಗಳಿಂದ ಘೋಷಣೆಗಳ ಸಮರ

1980ರ ದಶಕದಲ್ಲಿ ಈ ಸೈಟುಗಳನ್ನು ಮೂರನೇ ವ್ಯಕ್ತಿಗೆ ಮಾರಾಟವಾಗುವ ಆತಂಕದಿಂದ ಆನಂದ್‌ ಅವರ ತಾಯಿ ಪ್ರಕರಣ ದಾಖಲಿಸಿದ್ದರು. ಸ್ಥಳೀಯ ಕೋರ್ಟು ಅರ್ಜಿದಾರರ ಪರವಾಗಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಕಂಪನಿಯು 2002ರಲ್ಲಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಆದರೆ ಹೈಕೋರ್ಟ್‌, ವೃದ್ಧರ ಪರವಾಗಿ ತೀರ್ಪು ಕೊಟ್ಟು, 1963ರ ಬೆಲೆಗೇ ಭೂಮಿ ಕೊಡುವಂತೆ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್‌ ನಬೀನ್‌ ನೇಮಕ: ರಾಜಕೀಯ ವಲಯದಲ್ಲಿ ಅಚ್ಚರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್‌ ನಬೀನ್‌ ನೇಮಕ: ರಾಜಕೀಯ ವಲಯದಲ್ಲಿ ಅಚ್ಚರಿ
ಆರ್‌ಎಸ್‌ಎಸ್‌ ಸಿದ್ಧಾಂತಗಳು ದೇಶಕ್ಕೆ ಮಾರಕ: ಮಲ್ಲಿಕಾರ್ಜುನ ಖರ್ಗೆ