ವಾದ್ರಾ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ : 38 ಕೋಟಿ ಮೌಲ್ಯದ ಆಸ್ತಿ ಜಪ್ತಿ

Kannadaprabha News   | Kannada Prabha
Published : Jul 18, 2025, 05:00 AM IST
Businessman Robert Vadra at ED office (Photo/ANI)

ಸಾರಾಂಶ

ಹರ್ಯಾಣದ ಶಿಖೋಪುರದಲ್ಲಿ 2008ರಲ್ಲಿ ನಡೆಸದಲಾದ ಭೂಖರೀದಿ ಅವ್ಯವಹಾರ ಸಂಬಂಧ, ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್‌ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ ಆರೋಪಪಟ್ಟಿ ದಾಖಲಿಸಿದೆ

ನವದೆಹಲಿ: ಹರ್ಯಾಣದ ಶಿಖೋಪುರದಲ್ಲಿ 2008ರಲ್ಲಿ ನಡೆಸದಲಾದ ಭೂಖರೀದಿ ಅವ್ಯವಹಾರ ಸಂಬಂಧ, ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್‌ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ ಆರೋಪಪಟ್ಟಿ ದಾಖಲಿಸಿದೆ. ಜೊತೆಗೆ ವಾದ್ರಾಗೆ ಸೇರಿದ 38 ಕೋಟಿ ರು. ಮೌಲ್ಯದ ಆಸ್ತಿ ಜಪ್ತಿ ಮಾಡಿದೆ. ಕ್ರಿಮಿನಲ್‌ ಪ್ರಕರಣವೊಂದರಲ್ಲಿ ವಾದ್ರಾ ವಿರುದ್ಧ ಆರೋಪಪಟ್ಟಿ ಸಲ್ಲಿಕೆ ಇದೇ ಮೊದಲು

 ಏನಿದು ಪ್ರಕರಣ? : 2008ರಲ್ಲಿ ವಾದ್ರಾ ನಿರ್ದೇಶಕರಾಗಿದ್ದ ಸ್ಕೈಲೈನ್‌ ಕಂಪನಿ, ಹರ್ಯಾಣದ ಗುರುಗ್ರಾಮ ಬಳಿಕ ಮನೇಸರ್‌- ಶಿಖೋಪುರ್‌ ಪ್ರದೆಶದಲ್ಲಿ 3.5 ಎಕರೆ ಜಾಗವನ್ನು 7.5 ಕೋಟಿ ರು.ಗೆ ಖರೀದಿಸಿತ್ತು. ಆಗ ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತವಿತ್ತು. 2012ರಲ್ಲಿ ಇದೇ ಜಾಗವನ್ನು ವಾದ್ರಾ, ಡಿಎಲ್‌ಎಫ್‌ ಸಂಸ್ಥೆಗೆ ಭರ್ಜರಿ 58 ಕೋಟಿ ರು.ಗೆ ಮಾರಾಟ ಮಾಡಿದ್ದರು. ಇದು ಡಿಎಲ್‌ಎಫ್‌ಗೆ ಕಾಂಗ್ರೆಸ್‌ ಸರ್ಕಾರ ನೆರವು ನೀಡಿದ್ದಕ್ಕೆ ಅದು ಲಂಚದ ರೂಪದಲ್ಲಿ ಹೆಚ್ಚಿನ ಹಣ ನೀಡಿ ವಾದ್ರಾರಿಂದ ಭೂಮಿ ಖರೀದಿಸಿದೆ ಎಂದು ವಿಪಕ್ಷ ಬಿಜೆಪಿ ಆರೋಪಿಸಿತ್ತು.

2012ರಲ್ಲಿ ಹಿರಿಯ ಐಎಎಸ್‌ ಅಧಿಕಾರಿ ಅಶೋಕ್‌ ಖೇಮ್ಕಾ, ಜಮೀನು ಖರೀದಿ ವ್ಯವಹಾರು ರಾಜ್ಯದ ಭೂ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಖರೀದಿ ರದ್ದುಪಡಿಸಿದ್ದರು. ಈ ವಿವಾದಗಳ ನಡುವೆಯೇ ಭೂ ವ್ಯವಹಾರದಲ್ಲಿ ಅಕ್ರಮ ನಡೆದಿದೆ ಎಂದು 2018ರಲ್ಲಿ ಹರ್ಯಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆಧರಿಸಿದ್ದರು. ಬಳಿಕ ಇದರ ಆಧಾರದಲ್ಲಿ ಇ.ಡಿ ಪ್ರತ್ಯೇಕ ಕೇಸು ದಾಖಲಿಸಿ ತನಿಖೆ ನಡೆಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ