ಕೇವಲ ಕಿಡ್ನಿ 25% ಕಾರ್ಯ ನಿರ್ವಹಿಸುತ್ತೆ, ಲಾಲೂ ಆರೋಗ್ಯ ಯಾವಾಗ ಬೇಕಾದ್ರೂ ಕೈಕೊಡಬಹುದು!

By Suvarna NewsFirst Published Dec 13, 2020, 4:55 PM IST
Highlights

ಜೈಲು ಸೇರಿದ ಲಾಲೂ ಯಾದವ್ ಆರೋಗ್ಯ ಯಾವಾಗ ಬೇಕಾದರೂ ಹದಗೆಡಬಹುದು| ಕೇವಲ ಕಿಡ್ನಿ 25% ಕಾರ್ಯ ನಿರ್ವಹಿಸುತ್ತೆ| ಮಾಹಿತಿ ನೀಡಿದ ಅವರ ವೈದ್ಯ
 

ಪಾಟ್ನಾ(ಡಿ.13): ಎರಡು ಹಗರಣಗಳಿಗೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿರುವ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಆರೋಗ್ಯ ಯಾವಾಗ ಬೇಕಾದರೂ ಹದಗೆಡಬಹುದು ಎಂದು ಅವರ ವೈದ್ಯ ಡಾ. ಉಮೇಶ್ ಪ್ರಸಾದ್ ತಿಳಿಸಿದ್ದಾರೆ. ಲಾಲೂ ಪ್ರಸಾದ್‌ ಯಾದವ್‌ರವರ ಕಿಡ್ನಿ ಕೇವಲ ಶೇ. 25ರಷ್ಟು ಕಾರ್ಯ ನಿರ್ವಹಿಸುತ್ತಿದೆ ಎಂದು ಲಾಲೂರವರನ್ನು ದಾಖಲಿಸಲಾಗಿರುವ ಆರ್‌ಇಎಂಎಸ್ ಆಸ್ಪತ್ರೆಗೆ ಡಾ. ಉಮೇಶ್ ಪ್ರಸಾದ್ ಲಿಖಿತ ಮಾಹಿತಿ ನೀಡಿದ್ದಾರೆ.

ತಂದೆಯ ಲಾಲೂ ಯಾದವ್ ರೆಕಾರ್ಡ್ ಮುರಿದ ಮಗ ತೇಜಸ್ವಿ!

ಸುದ್ದಿಸಂಸ್ಥೆ ಎಎನ್‌ಐಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಡಾ. ಉಮೇಶ್ ಯಾದವ್ 'ಲಾಲೂರವರ ಕಿಡ್ನಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬುವುದು ನಿಜ. ಕೇವಲ ಶೇ. 25ರಷ್ಟು ಕಾರ್ಯ ನಿರ್ವಹಿಸುತ್ತದೆ. ಹೀಗಿರುವಾಗ ಅವರ ಆರೋಗ್ಯ ಯಾವಾಗ ಬೇಕಾದರೂ ಹದಗೆಡಬಹುದು. ನಿಖರವಾಗಿ ಯಾವಾಗ ಎಂದು ಹೇಳುವುದು ಅಸಾಧ್ಯ' ಎಂದಿದ್ದಾರೆ.

ಜೈಲು ಶಿಕ್ಷೆ ಮಧ್ಯೆಯೇ ಅಭ್ಯರ್ಥಿಗಳಿಗೆ ಲಾಲು ಸಂದರ್ಶನ!

ಕಳೆದ ಇಪ್ಪತ್ತು ವರ್ಷಗಳಿಂದ ಲಾಳುರವರು ಮಧುಮೇಹ ರೋಗದಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಅವರ ಕಿಡ್ನಿಯೂ ಡ್ಯಾಮೇಜ್ ಆಗುತ್ತಿದೆ. ಹೀಗಾಗಿ ಈ ಸಮಯ ಎಚ್ಚರಿಕೆ ಕರೆಗಂಟೆ ಎನ್ನಬಹುದು. ಹೀಗಾಗಿ ಮೆಡಿಕಲ್ ಎಮರ್ಜೆನ್ಸಿ ಯಾವಾಗ ಬೇಕಾದರೂ ಎದುರಾಗಬಹುದು ಎಂದೂ ಅವರು ತಿಳಿಸಿದ್ದಾರೆ. 

click me!