'ಗೋಡ್ಸೆ..ಸಾವರ್ಕರ್ DNA ಇದ್ದವರು ದೇಶವಿರೋಧಿಗಳ ಬಗ್ಗೆ ಮಾತಾಡ್ತಾರೆ'

By Suvarna News  |  First Published Dec 13, 2020, 4:09 PM IST

ರೈತರ ಪ್ರತಿಭಟನೆಗೆ ರಾಜಕೀಯ ರೂಪ/  ಪ್ರತಿಭಟನಾಕಾರರು ದೇಶದ್ರೋಹಿಗಳು ಎಂಬ ಆರೋಪ/ ಸಮಾಜವಾದಿ ಪಾರ್ಟಿಯಿಂದ ಠಕ್ಕರ್/ ಗೋಡ್ಸೆ..ಸಾವರ್ಕರ್ ಡಿಎಲನ್‌ಎ ಯಾರ ಬಳಿ ಇದೆ ಎನ್ನುವುದು ಗೊತ್ತಿದೆ


ನವದೆಹಲಿ(ಡಿ. 13)   ಕೃಷಿ ಕಾಯಿದೆ ವಿರೋಧಿಸಿ ಆರಂಭಗೊಂಡ ರೈತರ ಪ್ರತಿಭಟನೆ ರಾಜಕಾರಣದ  ರೂಪ ಪಡೆದುಕೊಂಡು ದಿನಗಳೆ ಕಳೆದಿವೆ. ಇದೀಗ ಅಖಾಡಕ್ಕೆ ಸಮಾಜವಾದಿ ಪಾರ್ಟಿಯೂ ಧುಮುಕಿದೆ.

ರೈತರ ಪ್ರತಿಭಟನೆಯಲ್ಲಿ  ಭಾಗವಹಿಸಿರುವವರಲ್ಲಿ ನಕ್ಸಲರು ಮತ್ತು ದೇಶದ್ರೋಹಿಗಳನ್ನು ಕಾಣುತ್ತಿದ್ದೇವೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ ದೇಶ ಕಾಯುತ್ಥೇವೆ ಎಂದು ಬಡಬಡಿಸಿಕೊಳ್ಳುತ್ತ ಸಾವರ್ಕರ್ ಮತ್ತು ಗೋಡ್ಸೆ ಡಿಎನ್‌ಎ ಇರುವವರು  ಇಂಥ ಮಾತು ಆಡುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ವಕ್ತಾರ ಸುನೀಲ್ ಸಿಂಗ್ ಸಜ್ಜನ್ ಹೇಳಿದ್ದಾರೆ.

Tap to resize

Latest Videos

ಕರ್ನಾಟಕದ ಸಾರಿಗೆ ನೌಕರರ ಪ್ರತಿಭಟನೆ ಎಲ್ಲಿಗೆ ಬಂತು? 

ಜಿಲ್ಲಾ ಕೇಂದ್ರಗಳಳ್ಲಿ ರೈತರ ಜತೆ ಸೇರಿ ಪ್ರತಿಭಟನೆ ಮಾಡಲು ಸಮಾಜವಾದಿ ಪಕ್ಷದ ಅಧ್ಯಕ್ಷ ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಕಾರ್ಯಕರ್ತರಿಗೆ ತಿಳಿಸಿದ್ದಾರೆ.

ನಮ್ಮ ಪಕ್ಷ ಆಯಾ ಜಿಲ್ಲಾ ಕೇಂದ್ರದಲ್ಲಿ ರೈತರಿಗೆ ಬೆಂಬಲವಾಗಿ ನಿಂತು ಶಾಂತಿಯುತ ಪ್ರತಿಭಟನೆ ಮಾಡಲಿದೆ. ಕೇಂದ್ರ ಸರ್ಕಾರ  ರೈತ ವಿರೋಧಿ ನೀತಿ ಕೈಬಿಡಬೇಕು ಎಂದು ಸಮಾಜವಾದಿ ಪಕ್ಷ ಒತ್ತಾಯ ಮಾಡಿದೆ.  ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರ ನಡುವೆ ಮಾತುಕತೆ ನಡೆಯುತ್ತಿದ್ದು ಯಾವುದು ಫಲ ಕೊಟ್ಟಿಲ್ಲ.

click me!