ಕೇರಳದಿಂದ ಕರ್ನಾಟಕ ಹೈಕೋರ್ಟ್‌ಗೆ ಕಾನೂನು ವ್ಯಾಪ್ತಿ ವರ್ಗಾಯಿಸಲು ಮುಂದಾದ ಲಕ್ಷದ್ವೀಪ!

By Suvarna NewsFirst Published Jun 20, 2021, 7:35 PM IST
Highlights
  • ಲಕ್ಷದ್ವೀಪ ಆಡಳಿತಾಧಿಕಾರಿಯಿಂದ ಮಹತ್ವದ ನಿರ್ಧಾರ
  • ಕೇರಳದಿಂದ ಕರ್ನಾಟಕ ಹೈಕೋರ್ಟ್‌ಗೆ ಕೇಸ್ ವರ್ಗಾಯಿಸಲು ನಿರ್ಧಾರ

ಲಕ್ಷದ್ವೀಪ(ಜೂ.20): ಕಳೆದ ಕೆಲ ದಿನಗಳಿಂದ ಲಕ್ಷದ್ವೀಪದಲ್ಲಿ ಭಾರಿ ಕೋಲಾಹಲವೆ ಎದ್ದಿದೆ. ಕಾಯ್ದೆಗಳ ತಿದ್ದುಪಡಿ, ನಿಯಮದಲ್ಲಿ ಕೆಲ ಬದಲಾವಣೆಗೆ ಆಡಳಿತಾಧಿಕಾರಿ ಪ್ರಪುಲ್ ಪಟೇಲ್ ಖೋಡೆ ಮುಂದಾಗಿದ್ದಾರೆ. ಆದರೆ ಸ್ಥಳೀಯರ ಪ್ರತಿಭಟನೆ, ಕೇರಳ ಸರ್ಕಾರದ ಆಕ್ರೋಶದ ಜೊತೆಗೆ ಕೇರಳ ಹೈಕೋರ್ಟ್‌ನಲ್ಲೂ ಲಕ್ಷದ್ವೀಪ ಆಡಳಿತ ವಿಭಾಕ್ಕೆ ಹಿನ್ನಡೆಯಾಗಿತ್ತು. ಪರಿಣಾಮ ಕೇರಳ ಹೈಕೋರ್ಟ್‌ನಲ್ಲಿನ ದಾವೆಗಳನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸಲು ಮುಂದಾಗಿದೆ.

ಲಕ್ಷದ್ವೀಪ ಜಟಾಪಟಿ: ಬಂಧನ ಭೀತಿಯಿಂದ ಪಾರಾದ ನಟಿ ಆಯಿಷಾ ಸುಲ್ತಾನ್!

ಲಕ್ಷದ್ವೀಪ ಆಡಳಿತಾಧಿಕಾರಿ ತೆಗೆದುಕೊಂಡ ತಿದ್ದುಪಡಿ ಹಾಗೂ ಪ್ರಮುಖ ನಿರ್ಧಾರಗಳ ವಿರುದ್ಧ ಕೇರಳ ಹೈಕೋರ್ಟ್ ನಿಲುುವ ವ್ಯಕ್ತಪಡಿಸಿತ್ತು. ಈ ಬೆಳವಣಿಗೆಗಳ ಬಳಿಕ ಲಕ್ಷದ್ವೀಪ ತನ್ನ ಕಾನೂನು ವ್ಯಾಪ್ತಿಯನ್ನು ಕೇರಳ ಹೈಕೋರ್ಟ್‌ನಿಂದ ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸಲು ಪ್ರಪುಲ್ ಪಟೇಲ್ ಖೋಡೆ ನಿರ್ಧರಿಸಿದ್ದಾರೆ.

2021ರಲ್ಲಿ 11 ರಿಟ್ ಅರ್ಜಿ ಸೇರಿದಂತೆ  23 ಅರ್ಜಿಗಳನ್ನು ಲಕ್ಷದ್ವೀಪ ಸ್ಥಳೀಯ ಆಡಳಿತ, ಪೊಲೀಸ್ ವಿರುದ್ಧ ಕೇರಳ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದೆ. ಸ್ಥಳೀಯ ಆಡಳಿತ ಸಮಸ್ಯೆಗಳನ್ನು ನಿಭಾಯಿಸುವ ಜೊತೆಗೆ ಕಾನೂನು ವ್ಯಾಪ್ತಿಯನ್ನು ವರ್ಗಾಯಿಸುವ ಪ್ರಸ್ತಾಪ ಮಾಡಲಾಗಿದೆ ಎಂದು ಲಕ್ಷದ್ವೀಪ ಆಡಳಿತಾಧಿಕಾರಿ ಹೇಳಿದೆ.

ಹೊಸ ನಿಯಮದ ವಿರುದ್ಧ ಬೀದಿಗಿಳಿದ ಜನ; ಲಕ್ಷದ್ವೀಪದಲ್ಲಿ ನೀರಿನೊಳಗೆ ಪ್ರತಿಭಟನೆ!...

ಹೈಕೋರ್ಟ್‌ನ ಅಧಿಕಾರ ವ್ಯಾಪ್ತಿಯನ್ನು ಕಾನೂನಿನ ಪ್ರಕಾರ ಸಂಸತ್ತಿನ ಕಾಯಿದೆಯ ಮೂಲಕ ಮಾತ್ರ ಬದಲಾಯಿಸಬಹುದು. ಸಂವಿಧಾನದ ಆರ್ಟಿಕಲ್ 241 ರ ಪ್ರಕಾರ  ಸಂಸತ್ತು ಕಾನೂನಿನ ಅನ್ವಯ ಯಾವುದೇ ಪ್ರದೇಶದ ನ್ಯಾಯಾಲಯವನ್ನು ಆಯ್ಕೆ ಮಾಡಿಕೊಳ್ಳಬಹುದು.

click me!