ರಾಹುಲ್ ಟ್ವೀಟ್‌ ಮಾಡಿದ್ದು ತಪ್ಪಾ? ಟ್ರೋಲ್ ಮಾಡಿ ಮೂರ್ಖರಾದ ನೆಟ್ಟಿಗರು!

Published : Jun 20, 2021, 05:55 PM ISTUpdated : Jun 20, 2021, 05:57 PM IST
ರಾಹುಲ್ ಟ್ವೀಟ್‌ ಮಾಡಿದ್ದು ತಪ್ಪಾ? ಟ್ರೋಲ್ ಮಾಡಿ ಮೂರ್ಖರಾದ ನೆಟ್ಟಿಗರು!

ಸಾರಾಂಶ

* ಮಿಲ್ಖಾ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿ ರಾಹುಲ್ ಗಾಂಧಿ ಟ್ವೀಟ್ * ಟ್ವೀಟ್ ಅರ್ಥೈಸಿಕೊಳ್ಳದೆ ಟ್ರೋಲ್ ಮಾಡಿದವರು ಈಗ ಪೆಚ್ಚು * ಟ್ರೋಲಿಗರಿಗೆ ಎಲ್‌ಕೆಜಿ ಸೇರ್ಕೊಳ್ಳಿ ಎಂದ ಅಭಿಮಾನಿಗಳು

ನವದೆಹಲಿ(ಜೂ.,20): ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅನೇಕ ಬಾರಿ ತಮ್ಮ ಟ್ವೀಟ್ ಹಾಗೂ ಹೇಳಿಕೆಗಳಿಂದ ಟ್ರೋಲಿಗರಿಗೆ ಆಹಾರವಾಗುತ್ತಾರೆ. ಅನೇಕ ಬಾರಿ ಅವರು ನೀಡಿರುವ ಸಾರ್ವಜನಿಕ ಹೇಳಿಕೆಗಳಲ್ಲಿ ಎಡವಟ್ಟಾಗಿ ಟ್ರೋಲ್ ಆಗಿದ್ದು ಇದೆ. ಅಲ್ಲದೇ ಟ್ವೀಟ್‌ನಲ್ಲೂ ಟಾನೇಕ ಬಾರಿ ತಪ್ಪುಗಳಾಗಿ, ಟ್ರೋಲ್ ಆಗಿ ಬಳಿಕ ಡಿಲೀಟ್‌ ಮಾಡಿದ್ದೂ ಇದೆ. ಆದರೆ ಈ ಬಾರಿ ಅವರು ಯಾವುದೇ  ತಪ್ಪು ಮಾಡದೇ ಟ್ರೋಲ್ ಆಗಿದ್ದಾರೆ. ಇನ್ನು ಅವರು ತಪ್ಪಾಗಿ ಟ್ವೀಟ್ ಮಾಡಿದ್ದಾರೆಂದು ಕಾಲೆಳೆದವರು, ಅಂತಿನವಾಗಿ ತಾವೇ ತಪ್ಪರ್ಥೈಸಿಕೊಂಡಿದ್ದೇವೆ ಎಂದು ತಿಳಿದು ಬೇಸ್ತು ಬಿದ್ದಿದ್ದಾರೆ.

ಹೌದು ದಿಗ್ಗಜ ಅಥ್ಲೀಟ್‌ ಮಿಲ್ಖಾ ಸಿಂಗ್ ಶುಕ್ರವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಫ್ಲೈಯಿಂಗ್ ಸಿಖ್ ನಿಧನಕ್ಕೆ ಪಿಎಂ ಮೋದಿ ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದರು. ಅತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡಾ ಟ್ವೀಟ್ ಮಾಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದರು. ಆದರೆ ಅವರ ಮಾಡಿದ ಈ ಟ್ವೀಟ್ ಜನರು ಸಂಪೂರ್ಣವಾಗಿ ಓದಿಲ್ಲವೋ ಅಥವಾ ಅರ್ಥ ಮಾಡಿಕೊಂಡಿದ್ದಾರೋ ತಿಳಿಯದು. ಏಕಾಏಕಿ ಅನೇಕ ಮಂದಿ ರಾಹುಲ್ ಮಾಡಿದ ಟ್ವೀಟ್‌ನಲ್ಲಿ ವ್ಯಾಕರಣ ತಪ್ಪಿದೆ ಎಂದು ಟ್ರೋಲ್ ಮಾಡಲಾರಂಭಿಸಿದ್ದಾರೆ. 

ಒಬ್ಬರಾದ ಬಳಿಕ ಮತ್ತೊಬ್ಬರಂತೆ ರಾಹುಲ್ ಗಾಂಧಿ ಮಾಡಿದ ಟ್ವೀಟ್‌ನಲ್ಲಿ 'India remembers him #FlyingSikh'(ಭಾರತ ಆತನನ್ನು  #FlyingSikh ಎಂದು ನೆನಪಿಸಿಕೊಳ್ಳುತ್ತದೆ) ಎಂದಾಗಬೇಕಿತ್ತು. ಆದರೆ ಅವರು 'India remembers her #FlyingSikh(ಭಾರತ ಆಕೆಯನ್ನು #FlyingSikh ಎಂದು ನೆನಪಿಸಿಕೊಳ್ಳುತ್ತದೆ) ಎಂದು ಹೇಳಿದ್ದಾರೆ. ರಾಹುಲ್‌ಗೆ ಸ್ರ್ತೀಲಿಂಗ ಹಾಗೂ ಪುಲ್ಲಿಂಗದ ವ್ಯತ್ಯಾಸ ಗೊತ್ತಿಲ್ಲ ಎಂದು ಅಪಹಾಸ್ಯ ಮಾಡಿದ್ದಾರೆ.

ಇನ್ನು ಕೆಲವರು ರಾಹುಲ್ ಗಾಂಧಿಗೆ ಶಶಿ ತರೂರ್ ಇಂಗ್ಲೀಷ್ ಹೇಳಿ ಕೊಟ್ಟಿರಬೇಕು. ಇಲ್ಲದಿದ್ದರೆ ಮಿಲ್ಖಾ ಸಿಂಗ್‌ರನ್ನು ಮಹಿಳೆ ಎಂದು ಸಂಬೋಧಿಸುತ್ತಿರಲಿಲ್ಲ ಎಂದಿದ್ದಾರೆ.

ಇನ್ನು ಕೆಲವರು ಕೆಲವೊಮ್ಮೆಯಾದರೂ ಸರಿಯಾಗಿ ಮಾತನಾಡಿ ಎಂದಿದ್ದರೆ, ಇನ್ನು ಕೆಲವರು ರಾಹುಲ್ ಗಾಂಧಿ ಮುಲ್ಖಾ ಸಿಂಗ್‌ರವರ ಲಿಂಗವನ್ನೇ ಬದಲಾಯಿಸಿಬಿಟ್ಟಿದ್ದಾರೆ ಎಂದಿದ್ದಾರೆ. ಇಷ್ಟೇ ಅಲ್ಲದೇ ನಾನಾ ಬಗೆಯಲ್ಲಿ ಈ ಟ್ವೀಟ್‌ನ್ನು ಟ್ರೋಲ್‌ ಮಾಡಿದ್ದಾರೆ.

ಆದರೆ ಈ ಟ್ರೋಲ್‌ ಮಧ್ಯೆ ರಾಹುಲ್ ಗಾಂಧಿಯ ಈ ಟ್ವೀಟ್‌ನ್ನು ಅರ್ಥ ಮಾಡಿಕೊಂಡವರು ಟ್ರೋಲ್‌ ಮಾಡಿದವರ ಮೂರ್ಖತನಕ್ಕೆ ನಕ್ಕಿದ್ದಾರೆ. ಅಲ್ಲದೇ ಈ ಟ್ವೀಟ್‌ ಅರ್ಥ ಮಾಡಿಕೊಳ್ಳದವರು LKGಗೆ ದಾಖಲಾತಿ ಪಡೆದುಕೊಳ್ಳಿ ಎಂದು ಸಲಹೆ ಕೊಟ್ಟಿದ್ದಾರೆ.

ರಾಹುಲ್ ಗಾಂಧಿ ಮಾಡಿದ ಟ್ವೀಟ್‌ ತಪ್ಪಲ್ಲ ಸರಿ ಎಂದಿರುವವರು ಹೇಗೆ ಎಂಬುವುದನ್ನೂ ತಿಳಿಸಿದ್ದು, ಈ ಟ್ವೀಟ್‌ನಲ್ಲಿ ರಾಹುಲ್ ಗಾಂಧಿ ಮಿಲ್ಖಾ ಸಿಂಗ್‌ರವರನ್ನು ಸಂಬೋಧಿಸಿ ಅವಳು ಎಂದಿದ್ದಲ್ಲ. ಭಾರತವನ್ನು ಎಲ್ಲರೂ ತಾಯಿ ಎಂದು ಕರೆಯುತ್ತಾರೆ. ಹೀಗಾಗಿ ಇಲ್ಲಿ ರಾಹುಲ್ ಗಾಂಧಿ 'ಅವಳು (“Her” is used for India) ಎಂದಿದ್ದಾರೆ. ಒಟ್ಟಾರೆಯಾಗಿ ಭಾರತ ತನ್ನ #FlyingSikh ನ್ನು ನೆನಪಿಸಿಕೊಳ್ಳುತ್ತಾಳೆ. ಎಂದು ಅವರು ಬರೆದಿದ್ದಾರೆ ಎಂದಿದ್ದಾರೆ. 

ಏನೇ ಇರಲಿ ಸದ್ಯ ರಾಹುಲ್ ಗಾಂಧಿ ತಪ್ಪು ಟ್ವೀಟ್‌ ಮಾಡಿದ್ದಾರೆಂದು ಏಕಾಏಕಿ ಟ್ರೋಲ್ ಮಾಡಿದವರು ಪೆಚ್ಚಾಗಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ
ಮೋದಿ-ಪುಟಿನ್ ಆರ್ಮರ್ಡ್ ಬದಲು ಸಾಮಾನ್ಯ ಟೊಯೋಟಾ ಫಾರ್ಚೂನ್ ಕಾರಿನಲ್ಲಿ ಪ್ರಯಾಣಿಸಿದ್ದೇಕೆ?