
ಲಖೀಂಪುರ(ಅ.05): ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯನ್ನು(Priyanka gandhi) ಯುಪಿಯಲ್ಲಿ ಅಧಿಕೃತವಾಗಿ ಬಂಧಿಸಲಾಗಿದೆ. ಶಾಂತಿ ಕದಡಿದ ಆರೋಪದಡಿ ಪ್ರಿಯಾಂಕಾ ವಿರುದ್ಧ ಎಫ್ಐಆರ್(FIR) ದಾಖಲಾಗಿದೆ. ಸೋಮವಾರದಿಂದ ಅವರು ಪೊಲೀಸರ ವಶದಲ್ಲಿದ್ದರು ಎಂಬುವುದು ಉಲ್ಲೇಖನೀಯ. ಪ್ರಿಯಾಂಕಾ ಗಾಂಧಿ ಲಖೀಂಪುರ ಹಿಂಸಾಚಾರಕ್ಕೊಳಗಾದ(Lakhimpur Kheri Violence) ರೈತರನ್ನು ಬೇಟಿಯಾಗಲು ಯತ್ನಿಸಿದ್ದರು. ಆದರೆ ಈ ನಡುವೆ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಇದಾದ ಬಳಿಕ ಆಕ್ರೋಶಗೊಂಡಿದ್ದ ಕಾಂಗ್ರೆಸಿಗರು ಆಂದೋಲನ ಆರಂಭಿಸಿದ್ದರು. ಆದರೀಗ 30 ಗಂಟೆಗಳ ಕಸ್ಟಡಿ ಬಳಿಕ ಅವರನ್ನು ಬಂಧಿಸಲಾಗಿದೆ.
"
ಪ್ರಿಯಾಂಕಾ ಸೇರಿ 11 ಕಾಂಗ್ರೆಸಿಗರ ವಿರುದ್ಧ ಎಫ್‌ಐಆರ್
ಪ್ರಿಯಾಂಕಾ ಗಾಂಧಿ, ರಾಜ್ಯಸಭಾ ಸಂಸದ ದೀಪೇಂದರ್ ಸಿಂಗ್ ಹೂಡಾ, ರಾಜ್ಯಾಧ್ಯಕ್ಷ ಅಜಯ್ ಕುಮಾರ್ ಲಲ್ಲು ಸೇರಿದಂತೆ 11 ಜನರ ಕಾಂಗ್ರೆಸಿಗರ ವಿರುದ್ಧ ಯುಪಿ ಸರ್ಕಾರ ಕ್ರಮ ಕೈಗೊಂಡಿದೆ. ಇವರೆಲ್ಲರ ವಿರುದ್ಧ ಸೀತಾಪುರದ ಹರಗಾಂವ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸೋಮವಾರದಿಂದ ಸೀತಾಪುರ ಅತಿಥಿ ಗೃಹದಲ್ಲಿ ಬಂಧನ
ಪ್ರಿಯಾಂಕಾ ಗಾಂಧಿಯನ್ನು ಸೋಮವಾರ ಲಖೀಂಪುರ ಖೇರಿಗೆ ಹೋಗುತ್ತಿದ್ದಾಗ ಪೊಲೀಸರು ವಶಕ್ಕೆ ತೆಗೆದುಕೊಂಡಿfದರು. ಅಲ್ಲಿಂದ ಅವರನ್ನು ಸೀತಾಪುರ ಜಿಲ್ಲೆಯ ಪಿಎಸಿ ಅತಿಥಿ ಗೃಹದಲ್ಲಿ ಇರಿಸಲಾಗಿತ್ತು. ಪೊಲೀಸರು ಅವರನ್ನು ಸುಮಾರು 30 ಗಂಟೆಗಳಿಗೂ ಹೆಚ್ಚು ಕಾಲ ಕಸ್ಟಡಿಯಲ್ಲಿ ಇರಿಸಿದ್ದರು. ಮಂಗಳವಾರ ಅವರ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸಲಾಗಿದೆ.
ಮೋದಿಯನ್ನು ಪ್ರಶ್ನಿಸಿದ್ದ ಪ್ರಿಯಾಂಕಾ
ಲಖಿಂಪುರ್ ಖೇರಿಯಲ್ಲಿ ರೈತರನ್ನು ತುಳಿದ ಪ್ರಕರಣದಲ್ಲಿ ಪ್ರಿಯಾಂಕಾ ಗಾಂಧಿ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದರು. ಅವರು ಮಂಗಳವಾರ ವೀಡಿಯೊವನ್ನು ಬಿಡುಗಡೆ ಮಾಡಿದ್ದರು ಮತ್ತು ಲಖೀಂಪುರ ಖೇರಿಯಲ್ಲಿ ಆರೋಪಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರ ಮಗ ಆಶಿಶ್ ಮಿಶ್ರಾ ಅವರನ್ನು ಇನ್ನೂ ಏಕೆ ಬಂಧಿಸಿಲ್ಲ ಎಂದು ಕೇಳಿದ್ದರು. ಗೃಹ ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ಏಕೆ ವಜಾ ಮಾಡಲಿಲ್ಲ? ಲಖೀಂಪುತರ ಖೇರಿಯಲ್ಲಿರುವ ಸಂತ್ರಸ್ತರ ಕುಟುಂಬಕ್ಕೆ ಪಿಎಂ ಮೋದಿ ಏಕೆ ಇನ್ನೂ ಭೇಟಿ ನೀಡಿಲ್ಲ ಎಂದು ಅವರು ಕೇಳಿದ್ದರು.
`
ಸತ್ಯಾಗ್ರಹ ನಿಲ್ಲುವುದಿಲ್ಲ, ಪ್ರಿಯಾಂಕ ನಿಜವಾದ ಕಾಂಗ್ರೆಸ್ಸಿಗಳು
ಪ್ರಿಯಾಂಕಾ ಗಾಂಧಿಯನ್ನು ಮೊದಲು ಯುಪಿಯಲ್ಲಿ ವಶಕ್ಕೆ ಪಡೆದು ಬಳಿಕ ಬಂಧಿಸಲಾಗಿದೆ ಹೀಗಿರುವಾಗ ಟ್ವೀಟ್ ಮಾಡಿದ, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸತ್ಯಾಗ್ರಹ ನಿಲ್ಲುವುದಿಲ್ಲ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ