
ರೋಗಿಗಳಿಗೆ ಗುಣಮಾಡಲು ಹಲವಾರು ರೀತಿಯ ಮಾರ್ಗಗಳು ಇರುವುದು ನಿಜವೇ. ಇಂತಿಂಥ ರೋಗಕ್ಕೆ ಇಂತಿಂಥ ಔಷಧ, ಮಾತ್ರೆ ಎಂದು ಅಲೋಪಥಿಯಲ್ಲಿ ಇದೆಯಾದರೂ, ರೋಗಿಗಳಿಗೆ ಆ ಸಮಸ್ಯೆ ಎದುರಾಗಲು ಕಾರಣ ಏನು ಎನ್ನುವುದನ್ನು ಪತ್ತೆ ಹಚ್ಚಿ ಆ ನಿಟ್ಟಿನಲ್ಲಿ ಔಷಧ ನೀಡುವ ಪದ್ಧತಿ ಹೋಮಿಯೋಪಥಿ ಮತ್ತು ಆಯುರ್ವೇದಗಳಲ್ಲಿ ಕಾಣಬಹುದು. ರೋಗಕ್ಕಿಂತಲೂ ಮುಖ್ಯವಾಗಿ ರೋಗಿಗೆ ಚಿಕಿತ್ಸೆ ಬೇಕು ಎನ್ನುವುದು ಇವರ ವಾದ. ಇದಕ್ಕೆ ಕಾರಣ, ಇದಾಗಲೇ ಸಾಬೀತು ಆಗಿರುವಂತೆ ಬಹುತೇಕ ಆರೋಗ್ಯ ಸಮಸ್ಯೆಗೆ ಮುಖ್ಯ ಕಾರಣ ಮನಸ್ಸೇ. ಮನಸ್ಸು ಸರಿಯಿಲ್ಲದಿದ್ದರೆ, ಸದಾ ಚಿಂತೆಯಲ್ಲಿಯೇ ಮುಳುಗಿರುತ್ತಿದ್ದರೆ, ಟೆನ್ಷನ್ಪೀಡಿತ ಲೈಫ್ ಆಗಿದ್ದರೆ ಅಂಥವರಿಗೆ ಅರಿವಿಲ್ಲದೇ ಹಲವು ರೋಗಗಳು ಅಂಟಿಕೊಂಡು ಬಿಡುತ್ತವೆ. ಅದಕ್ಕೇ ಗಾದೆ ಇರುವುದು ಅಲ್ಲವೇ, ಚಿತೆ ಮತ್ತು ಚಿಂತೆಗೆ ಇರುವುದು ಒಂದೇ ಶೂನ್ಯದ ವ್ಯತ್ಯಾಸ ಎಂದು! ಇಂಥ ಸಂದರ್ಭದಲ್ಲಿ ಒಂದಿಷ್ಟು ಮಾತ್ರೆ ತಿಂದು ಆ ಸಂದರ್ಭದಲ್ಲಿ ಗುಣವಾಗುವುದು ನಿಜವಾದರೂ, ಆ ಸಮಸ್ಯೆಗೆ ಇರುವ ಮೂಲ ಕಾರಣವನ್ನು ಹುಡುಕಿ ಅದನ್ನು ಬುಡಸಹಿತ ಕಿತ್ತುಹಾಕುವ ತಾಕತ್ತು ನಮ್ಮ ಭಾರತದ ಆಯುರ್ವೇದದಲ್ಲಿಯೂ ಇದೆ. ಹೋಮಿಯೋಪಥಿ ಔಷಧದ ಉದ್ದೇಶವೂ ಇದೇ ಆಗಿದೆ.
ಸಂಜತ್ ದತ್ ಅಭಿನಯದ ಮುನ್ನಾಭಾಯಿ ಎಂಬಿಬಿಎಸ್ ಚಿತ್ರದಲ್ಲಿಯೂ ಈ ಬಗ್ಗೆ ಅತ್ಯಂತ ಸುಂದರವಾಗಿ ಚಿತ್ರಿಸಲಾಗಿದೆ. ಮನದಾಳದ ನೋವಿಗೆ ಚಿಕಿತ್ಸೆ ನೀಡಿದರೆ ಸಾಯುವ ರೋಗಿಯೂ ಒಂದಷ್ಟು ದಿನ ಹೆಚ್ಚಿಗೆ ಬದುಕಬಲ್ಲ, ಮಾತ್ರೆಗಳಿಂದ ಆಗದ ಪರಿಹಾರ ಇದೇ ಪ್ರೀತಿ-ವಿಶ್ವಾಸದಿಂದಲೇ ಆಗುತ್ತದೆ ಎನ್ನುವುದನ್ನೂ ಇದರಲ್ಲಿ ತೋರಿಸಲಾಗಿದೆ. ಇವೆಲ್ಲಾ ಸರಿ. ಆದರೆ ಇಲ್ಲೊಬ್ಬಳು ನರ್ಸ್ ಮಾತ್ರ ಒಂದು ಹಂತ ಮುಂದಕ್ಕೆ ಹೋಗಿದ್ದು, ಇದು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಹಲ್ಚಲ್ ಸೃಷ್ಟಿಸಿದೆ. ನರ್ಸ್ ಒಬ್ಬಳು ರೋಗಿಯ ಕಾಲು ಮುಟ್ಟಿ ಅತ್ತಿತ್ತ ಯಾರಾದರೂ ಇಲ್ಲ ಎನ್ನುವುದನ್ನು ಕನ್ಫರ್ಮ್ ಮಾಡಿಕೊಂಡು ರೋಗಿಯ ಎದುರು ತನ್ನ ಷರ್ಟ್ ಓಪನ್ ಮಾಡಿ ತೋರಿಸಿರುವುದನ್ನು ಸಿಸಿವಿಟಿಯಲ್ಲಿ ನೋಡಬಹುದಾಗಿದೆ.
ಇದರ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ. ವಿಡಿಯೋ ವೈರಲ್ ಆಗುತ್ತಲೇ ಇದಕ್ಕೆ ಸಮಜಾಯಿಷಿಯನ್ನೂ ಕೊಟ್ಟಿರುವ ಈ ಲೇಡಿ ನರ್ಸ್, ತಾನು ರೋಗಿಯ ಚಿಕಿತ್ಸೆಯ ಭಾಗವಾಗಿ ಹೀಗೆ ಮಾಡಿದ್ದೇನೆ. ಆತನನ್ನು ಶೀಘ್ರದಲ್ಲಿ ಗುಣಪಡಿಸಲು ಈ ರೀತಿ ಮಾಡಿರುವುದಾಗಿ ಹೇಳಿದ್ದಾಳೆ. ಆದರೆ ಇದು ಭಾರಿ ಟೀಕೆಗೆ ಗುರಿಯಾಗುತ್ತಿದೆ. ನೆಟ್ಟಿಗರು ಕೇಳಬೇಕೆ? ಹಲವು ವಿಧದ ತಮಾಷೆಗಳ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇದ್ಯಾವ ಆಸ್ಪತ್ರೆ ಅಲ್ಲಿ ನಾವೂ ಹೋಗಿ ಅಡ್ಮಿಟ್ ಆಗುತ್ತೇವೆ ಎಂದು ಕೆಲವರು ಕೇಳುತ್ತಿದ್ದರೆ, ಪಾಪ ನರ್ಸ್ ಮಾಡಿದ್ದರಲ್ಲಿ ನಮಗೇನೂ ತಪ್ಪು ಎನ್ನಿಸ್ತಿಲ್ಲ ಎಂದು ಮತ್ತೆ ಕೆಲವರು ಆಕೆಯ ಪರವಾಗಿ ಬರೆದಿದ್ದಾರೆ.
ಇನ್ನು ಕೆಲವರು, ಈ ಘಟನೆ ಬಳಿಕ ರೋಗಿ ಬದುಕಿದ್ನಾ ಅಥ್ವಾ ಅಲ್ಲಿಯೇ ಎಚ್ಚರ ತಪ್ಪಿ ಹೋದ್ನಾ ಎಂದು ದಯವಿಟ್ಟು ತಿಳಿಸಿಸ, ಮುಂದಿನ ವಿಡಿಯೋ ಹಾಕಿ ಎಂದು ಗೋಗರೆಯುತ್ತಿದ್ದಾರೆ. ಒಟ್ಟಿನಲ್ಲಿ ನರ್ಸ್ನ ಈ ವಿಚಿತ್ರ ವರ್ತನೆ ಇದೀಗ ಜೋಕ್ ರೂಪದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸಿಸಿಟಿವಿಯಲ್ಲಿ ದಾಖಲಾಗಿರುವ ಈ ವಿಡಿಯೋ ವೈರಲ್ ಆಗಿದ್ದು ಹೇಗೆ? ಇದು ಎಲ್ಲಿಯ ಆಸ್ಪತ್ರೆ? ಯಾವ ದೇಶದ್ದು ಎಂಬಿತ್ಯಾದಿ ಮಾಹಿತಿ ಮಾತ್ರ ಎಲ್ಲಿಯೂ ಇಲ್ಲ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ