
ಭುವನೇಶ್ವರದಲ್ಲಿನ ಜಾರಿ ನಿರ್ದೇಶನಾಲಯದ (ED) ಉಪ ನಿರ್ದೇಶಕ ಚಿಂತನ್ ರಘುವಂಶಿ ಅವರನ್ನು ಈಗ ಕೇಂದ್ರ ತನಿಖಾ ದಳ (CBI) ವಿಚಾರಣೆ ಮಾಡುತ್ತಿದೆ. 50 ಲಕ್ಷ ರೂ. ಲಂಚ ಪ್ರಕರಣದಲ್ಲಿ ಇಡಿ ಉಪನಿರ್ದೇಶಕರ ಬಂಧನವಾಗಿದೆ ಎಂದು ತಿಳಿದುಬಂದಿದೆ. ರಘುವಂಶಿ ಭುವನೇಶ್ವರದ ಗಣಿಕಾರ ರತಿಕಾಂತ್ ರೌತ್ ಅಲಿಯಾಸ್ ಜೂಲು ಅವರ ವಿರುದ್ಧ ಇರುವ ಇಡಿ ಪ್ರಕರಣವನ್ನು ಮುಚ್ಚಿ ಹಾಕಲು ಲಂಚವಾಗಿ 50 ಲಕ್ಷ ರೂ ಪಡೆಯಲು ಬೇಡಿಕೆ ಇಟ್ಟಿದ್ದ ಎಂದು ತಿಳಿದುಬಂದಿದೆ.
ಆದರೆ ರತಿಕಾಂತ್ ರೌತ್ ಈ ವಿಷಯವನ್ನು ಸಿಬಿಐಗೆ ತಿಳಿಸಿದ್ದರಿಂದ, ಸಿಬಿಐ ಅಧಿಕಾರಿಗಳು ಸಹೀದ್ ನಗರದಲ್ಲಿರುವ ರಘುವಂಶಿಯ ಮನೆಗೆ ದಾಳಿ ಮಾಡಿ, ಅವರು ರೌತ್‌ನಿಂದ ರೂ. 20 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಬಂಧಿಸಿದರು. ಬಳಿಕ ಸಿಬಿಐ, 2013ರ ಬ್ಯಾಚ್‌ನ ಭಾರತೀಯ ಕಂದಾಯ ಸೇವೆ (IRS) ಅಧಿಕಾರಿಯಾಗಿರುವ ರಘುವಂಶಿಯನ್ನು ನಾಯಪಳ್ಳಿ ಸಿಬಿಐ ಕಚೇರಿಗೆ ಕರೆದುಕೊಂಡು ಹೋಗಿ ವಿಚಾರಣೆ ಆರಂಭಿಸಿದೆ. ಗಣಿಕಾರನನ್ನೂ ಈ ಪ್ರಕರಣದಲ್ಲಿ ಪ್ರಶ್ನಿಸಲಾಗುತ್ತಿದೆ. ಸಿಬಿಐ ರಘುವಂಶಿ ಕಚೇರಿಯಿಂದ ಲೆಕ್ಕವಿಲ್ಲದ ಹಣವನ್ನು ವಶಪಡಿಸಿಕೊಂಡಿದೆಯಂತೆ.
ಇದೇ ವೇಳೆ, ಜನವರಿ 8ರಂದು ಇಡಿ ಭುವನೇಶ್ವರ ಮತ್ತು ಧೆಂಕನಲ್‌ನಲ್ಲಿ ರತಿಕಾಂತ್ ರೌತ್‌ಗೆ ಸಂಬಂಧಿಸಿದ 14 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿತ್ತು. ಈ ದಾಳಿಗಳು ಅವರ ಕಂಪನಿಯ ಅಕ್ರಮ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ್ದಾಗಿತ್ತು. ಸದ್ಯ ಚಿಂತನ್ ರಘುವಂಶಿ ಸದ್ಯ ಸಿಬಿಐ ಕಸ್ಟಡಿಯಲ್ಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ