
ನವದೆಹಲಿ(ಫೆ.02): ಒಂದೆಡೆ ಕಮಾಂಡರ್ ಸುತ್ತಿನ ಮಾತುಕತೆಯಲ್ಲಿ ಶಾಂತಿ ಸ್ಥಾಪಿಸುವ ಮತಾನಾಡುವ ಚೀನಾ, ಮತ್ತೊಂದೆಡೆ ಭಾರತದ ಬೆನ್ನಿಗ ಚೂರಿ ಇರಿಯುವ ಪ್ರಯತ್ನ ಮಾಡುತ್ತಿದೆ. ಕಳೆದ ವರ್ಷದಿಂದ ಆರಂಭಗೊಂಡಿರುವ ಲಡಾಖ್ ಸಂರ್ಘಷಕ್ಕೆ ಇದೀಗ ಚೀನಾ ತುಪ್ಪ ಸುರಿದಿದೆ. LAC ಬಳಿ ಯುದ್ದ ಟ್ಯಾಂಕರ್ ಪ್ರದರ್ಶನ ಮಾಡೋ ಮೂಲಕ ಮತ್ತೊಂದು ಸಂರ್ಘಷಕ್ಕೆ ಮುನ್ನುಡಿ ಬರೆದಿದೆ.
ನಾಕುಲಾ ಗಡಿಯಲ್ಲಿ ತಂಟೆ ತೆಗೆದ ಚೀನಾದ ಸೊಂಟ ಮುರಿದ ಭಾರತ.!
ಪೂರ್ವ ಲಡಾಖ್ LAC ಬಳಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಯುದ್ಧ ಟ್ಯಾಂಕರ್ ಪ್ದದರ್ಶನ ಮಾಡಿದೆ. ಗಡಿಯ ಎರಡೂ ಬದಿಯಲ್ಲಿ ಸ್ಟೇಟಸ್ ಕೂ ಕಾಪಾಡಿಕೊಳ್ಳುವುದು ಉಭಯ ದೇಶಗಳ ಕರ್ತವ್ಯವಾಗಿದೆ. ಆದರೆ ಈ ಅಂತಾರಾಷ್ಟ್ರೀಯ ಗಡಿ ನಿಮಯ ಉಲ್ಲಂಘಿಸಿರುವ ಚೀನಾ, ಯುದ್ಧ ಟ್ಯಾಂಕರ್ ಇಳಿಸಿ ವಿಡಿಯೋ ಚಿತ್ರೀಕರಣ ಮಾಡಿದೆ. ಈ ವಿಡಿಯೋ ಹರಿಬಿಟ್ಟು ಇದೀಗ ಭಾರತವನ್ನು ಬೆದರಿಸುವ ತಂತ್ರಕ್ಕೆ ಮುಂದಾಗಿದೆ
LAC ದಾಟಲು ಯತ್ನಿಸಿದ ಡ್ರ್ಯಾಗನ್: ಗಡಿಯಲ್ಲಿ ಭಾರತ- ಚೀನಾ ಸೈನಿಕರ ಘರ್ಷಣೆ!.
ಈ ವಿಡಿಯೋದಲ್ಲಿ ಚೀನಾ ಸೇನೆ, ಯುದ್ಧ ಟ್ಯಾಂಕರ್, ಸೇನಾ ಟ್ರಕ್ ಹಾಗೂ ಯೋಧರನ್ನು ಗಡಿ ಸನಿಹದಲ್ಲಿ ನಿಯೋಜಿಸುತ್ತಿರುವ ದೃಶ್ಯವಿದೆ. ಬರೋಬ್ಬರಿ 350ಕ್ಕೂ ಹೆಚ್ಚು ಯುದ್ಧ ಟ್ಯಾಂಕರ್ LACಯಲ್ಲಿ ಚೀನಾ ನಿಯೋಜಿಸಿದೆ. ಈ ಮೂಲಕ ಯುದ್ಧಕ್ಕೆ ಸನ್ನದ್ದವಾಗುತ್ತಿದೆ. ಇತ್ತೀಚೆಗಷ್ಟೇ ಲಡಾಖ್ ಗಡಿಯಲ್ಲಿ ಚೀನಾ ಸೇನೆ ಮತ್ತೆ ಕಿರಿಕ್ ಮಾಡಿತ್ತು.
ಕಳೆದ ವರ್ಷ ಆರಂಭಿಸಿದ ಗಡಿ ತಕರಾರು ಗಲ್ವಾನ್ ಕಣಿವೆ ಘರ್ಷಣೆ ಬಳಿಕ ಹೆಚ್ಚಾಯಿತು. ಗಲ್ವಾಣ್ ಕಣಿವೆ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಅತ್ತ ಚೀನಾ ಕೂಡ ಗಂಭೀರ ಪರಿಣಾಮ ಎದಿರಿಸಿತ್ತು. ಆದರೆ ನಷ್ಟದ ಕುರಿತು ಚೀನಾ ಎಲ್ಲೂ ಬಹಿರಂಗ ಪಡಿಸದೆ ತಮೇಗೇನು ಆಗಿಲ್ಲ ಎಂದು ಜಗತ್ತಿಗೆ ತೋರಿಸುವ ಪ್ರಯತ್ನ ಮಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ