ಗಡಿಯಲ್ಲಿ ಗುಂಡಿನ ಚಕಮಕಿ ನಡುವೆ ಕಾಮಗಾರಿ ಆರಂಭ; 1600 ಕಾರ್ಮಿಕರು ಲಡಾಕ್‌ಗೆ!

Suvarna News   | Asianet News
Published : Jun 16, 2020, 02:46 PM IST
ಗಡಿಯಲ್ಲಿ ಗುಂಡಿನ ಚಕಮಕಿ ನಡುವೆ ಕಾಮಗಾರಿ ಆರಂಭ; 1600 ಕಾರ್ಮಿಕರು ಲಡಾಕ್‌ಗೆ!

ಸಾರಾಂಶ

ರಸ್ತೆ ಕಾಮಗಾರಿಯಿಂದ ಆರಂಭಗೊಂಡ ಭಾರತ ಚೀನಾ ಗಡಿ ಬಿಕ್ಕಟ್ಟು ಇದೀಗ ಗುಂಡಿನ ಚಕಮಕಿ ಹಂತ ತಲುಪಿದೆ.  ಚೀನಾ ಸೇನೆ ದಾಳಿಯಲ್ಲಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇದರ ನಡುವೆ  ರಸ್ತೆ ಕಾಮಗಾರಿ ಪುನರ್ ಆರಂಭಿಸಲು ಕೇಂದ್ರ ಗ್ರೀನ್ ಸಿಗ್ನಲ್ ನೀಡಿದ್ದು, ಜಾರ್ಖಂಡ್‌ನಿಂದ 1600 ಕಾರ್ಮಿಕರು ಲಡಾಖ್‌ನತ್ತ ಪ್ರಯಾಣ ಬೆಳೆಸಿದ್ದಾರೆ.

ಜಾರ್ಖಂಡ್(ಜೂ.16): ಭಾರತ ಹಾಗೂ ಚೀನಾ ಗಡಿ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ. ಚೀನಾ ಸೇನೆ ಗುಂಡಿನ ದಾಳಿ ನಡೆಸಿದ್ದು, ಸೇನಾ ಭಾರತೀಯ ಕಮಾಂಡರ್ ಸೇರಿದಂತೆ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಇಂದು(ಜೂ.16)ರಂದು ನಡೆದ ಬೆಳವಣಿಗೆ ಲಡಾಕ್ ಗಡಿಯಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣ ಮಾಡಿದೆ.  ಇದರ ನಡುವೆ ರಸ್ತೆ ಕಾಮಗಾರಿ ಪುನರ್ ಆರಂಭಿಸಲು ಕೇಂದ್ರ ಸರ್ಕಾರ, ಜಾರ್ಖಂಡ್‌ನಿಂದ 1600 ಕಾರ್ಮಿಕರನ್ನು ಲಡಾಖ್‌ಗೆ ಕರೆಯಿಸಿಕೊಂಡಿದೆ.

ದುರ್ಬಲ ಎಂದು ಭಾವಿಸಿ ಭಾರತವನ್ನು ಕೆಣಕಬೇಡಿ: ನೆರೆ ರಾಷ್ಟ್ರಗಳಿಗೆ ಸಿಂಗ್‌ ಎಚ್ಚರಿಕೆ.

ಬಾರ್ಡರ್ ರೋಡ್ ಆರ್ಗನೈಸೇಶನ್(BRO) ಜೊತೆ ಒಪ್ಪಂದ ಮಾಡಿಕೊಂಡಿರುವ ಜಾರ್ಖಂಡ್ ರಾಜ್ಯ, ಕಾರ್ಮಿಕರ ಸುರಕ್ಷತೆಗೂ ಅದ್ಯತೆ ನೀಡಿದೆ. 1600 ಕಾರ್ಮಿಕರನ್ನು ಹೊತ್ತ ರೈಲಿಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೋನ್ ಹಸಿರು ನಿಶಾನೆ ತೋರಿಸಿ ಬೀಳ್ಕೋಟ್ಟಿದ್ದರು. ಸೋಮವಾರ(ಜೂ.15) ಜಮ್ಮು ಮತ್ತು ಕಾಶ್ಮೀರಕ್ಕೆ ತಲುಪಿದ್ದ ಕಾರ್ಮಿಕರು. ಅಲ್ಲಿಂದ ಲಡಾಖ್‌ಗೆ ಪ್ರಯಾಣ ಬೆಳೆಸಿದ್ದಾರೆ.

ಭಾರತ ಗಡಿಯಲ್ಲಿ ಚೀನಾ ಸೇನೆ; ನರಿ ಬುದ್ದಿ ತೋರಿಸಿತಾ ಕುತಂತ್ರಿ ಚೀನಾ?

ಲಡಾಕ್‌ ತಲುಪುತ್ತಿದ್ದಂತೆ ಗಡಿಯಲ್ಲಿ ಗುಂಡಿನ ಶಬ್ಧಗಳು ಮೊಳಗಿದೆ. ಚೀನಾ ಸೇನೆ ಉದ್ಧಟತನಕ್ಕೆ ಭಾರತ ಕೂಡ ತಿರುಗೇಟು ನೀಡಿದೆ. ಇದೀಗ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿದೆ. BRO ಈಗಾಗಲೇ ಜಾರ್ಖಂಡ್ ಜೊತೆ ಒಟ್ಟು 11,815 ಕಾರ್ಮಿಕರ ಒಪ್ಪಂದ ಮಾಡಿಕೊಂಡಿದೆ. ಆಪರೇಶನ್ ವಿಜಯಕ್ ಹಾಗೂ ಹಿಮಾಂಕ್ ಪ್ರಾಜೆಕ್ಟ್ ಸಲುವಾಗಿ ಒಟ್ಟು 11,815 ಕಾರ್ಮಿಕರ ಒಪ್ಪಂದ ಮಾಡಿಕೊಂಡಿದೆ.

ಮೊದಲ ಹಂತದಲ್ಲಿ ಚೀನಾ ಗಡಿ ಭಾಗ ಹಂಚಿಕೊಂಡಿರುವ ಲಡಾಖ್ ವಲಯದಲ್ಲಿ ರಸ್ತೆ ಕಾಮಗಾರಿ ಪುನರ್ ಆರಂಭಿಸಲು BRO ಮುಂದಾಗಿತ್ತು. ಹಲವು ಸುತ್ತಿನ ಮಾತುಕತೆಗಳ ಮೂಲಕ ಸಮಸ್ಯೆ ಹಗೆಹರಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು ಇಷ್ಟೇ ಅಲ್ಲ BRO ಕಾಮಗಾರಿ ಆರಂಭಿಸಲು ಅಸ್ತು ಎಂದಿತ್ತು. ಆದರೆ ಕಾರ್ಮಿಕರು ಲಡಾಖ್ ತಲುಪುತ್ತಿದ್ದಂತೆ ಗುಂಡಿನ ಚಕಮಕಿ ನಡೆದಿರುವುದು ಮತ್ತಷ್ಟುು ಆತಂಕ ಸೃಷ್ಟಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ನಾವು ದೇಶಕ್ಕಾಗಿ, ನೀವು ಚುನಾವಣೆಗಾಗಿ: ಬಿಜೆಪಿ. ಮೋದಿ ವಿರುದ್ದ ಪ್ರಿಯಾಂಕಾ ಗಾಂಧಿ ವಾಗ್ದಾಳಿ
18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು