
ವಿಶ್ವದ ಅತ್ಯಂತ ದೊಡ್ಡ ದೇಶಗಳಲ್ಲಿ ಒಂದೆನಿಸಿರುವ ರಷ್ಯಾವೂ ತೀವ್ರವಾದ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದೆ. ಈ ಕಾರ್ಮಿಕರ ಕೊರತೆ ಈಗ ಭಾರತದ, ಕೆಲಸ ಯಾವುದಾದರೆನು ದುಡಿದು ತಿನ್ನಬೇಕು ಎಂದು ಬಯಸುವ ಯುವಕರಿಗೆ ಭಾಗ್ಯದ ಬಾಗಿಲನ್ನು ತೆರೆದಿದೆ. ಹೌದು ರಷ್ಯಾದಲ್ಲಿ ಬೀದಿಯ ಸ್ವಚ್ಛತೆಗೆ ರಸ್ತೆಯ ನಿರ್ವಹಣೆ ಮಾಡುವ ಅಲ್ಲಿನ ಸಂಸ್ಥೆಯಾದ ಕೊಲೊಮ್ಯಾಜ್ಸ್ಕೊಯ್ ಈಗ ಭಾರತೀಯರನ್ನು ಬೀದಿ ಸ್ವಚ್ಛಗೊಳಿಸುವ ಕೆಲಸಕ್ಕಾಗಿ ತನ್ನ ಕಂಪನಿಗೆ ಸೇರಿಸಿಕೊಂಡಿದ್ದು, ಅವರಿಗೆ ತಿಂಗಳಿಗೆ 1,00,000 ರುಬೆಲ್ ಎಂದರೆ ಅಂದಾಜು 1ಲಕ್ಷ ಭಾರತೀಯ ರೂಪಾಯಿಗಳನ್ನು ವೇತನವಾಗಿ ನೀಡುತ್ತಿದೆ. ಒಟ್ಟು 17 ಭಾರತೀಯ ಉದ್ಯೋಗಿಗಳನ್ನು ರಷ್ಯಾದ ರಸ್ತೆ ನಿರ್ಮಾಣ ಸಂಸ್ಥೆಯಾದ ಕೊಲೊಮ್ಯಾಜ್ಸ್ಕೊಯ್ ಕಳೆದ 4 ತಿಂಗಳ ಹಿಂದೆಯೇ ನೇಮಕ ಮಾಡಿಕೊಂಡಿದೆ. ಹೀಗೆ ಕಸ ಗುಡಿಸುವ ಕೆಲಸ ಮಾಡುವವರಲ್ಲಿ ಓರ್ವ ತಾನು ಸಾಫ್ಟ್‌ವೇರ್ ಡೆವಲಪರ್ ಆಗಿದ್ದೆ ಎಂದು ಹೇಳಿಕೊಂಡಿದ್ದು, ಈತನ ವೀಡಿಯೋ ಈಗ ವೈರಲ್ ಆಗಿದೆ.
ತಾನೋರ್ವ ಸಾಫ್ಟ್‌ವೇರ್ ಇಂಜಿನಿಯರ್ ಎಂದು ಹೇಳಿಕೊಂಡಿರುವ 26 ವರ್ಷದ ಮುಕೇಶ್ ಮಂಡಲ್ ಎಂಬಾತ ರಷ್ಯಾದ ಸುದ್ದಿ ಮಾಧ್ಯಮವಾದ ಫಾಂಟಂಕಾ ಜೊತೆಗೆ ಮಾತನಾಡಿದ್ದು, ತಾನು ಮೈಕ್ರೋಸಾಫ್ಟ್‌ನಂತಹ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದೇನೆ. ನನಗೆ ಎಐ ಟೂಲ್ಸ್‌ಗಳು, ಚಾಟ್‌ಬೊಟ್ಸ್‌ಗಳು, ಜಿಪಿಟಿ ಟೂಲ್‌ಗಳನ್ನು ಬಳಸಿ ಅಭ್ಯಾಸವಿದೆ. ನಾನು ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ.
ಮುಕೇಶ್ ಮಂಡಲ್ ಸೇರಿದಂತೆ ಈತನ ಜೊತೆಗಿರುವ ಭಾರತೀಯ ನೌಕರರು ಈಗ ಕೆಲವು ವಾರಗಳಿಂದ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನ ಬೀದಿಯನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಈ ಕೆಲಸಗಾರರಿಗೆ ರಸ್ತೆ ನಿರ್ವಹಣ ಸಂಸ್ಥೆಯಾದ ಕೊಲೊಮ್ಯಾಜ್ಸ್ಕೊಯ್ ಆಹಾರದಿಂದ ಹಿಡಿದು ವಸತಿಯವರೆಗೆ ಎಲ್ಲಾ ವ್ಯವಸ್ಥೆ ಮಾಡಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೊಮಿಯಾಜ್ಸ್ಕೊಯ್ ಜೆಎಸ್‌ಸಿಯ ಸಮಗ್ರ ಶುಚಿಗೊಳಿಸುವ ವಿಭಾಗದ ಕಾರ್ಯಕಾರಿ ಮುಖ್ಯಸ್ಥೆ ಮಾರಿಯಾ ತ್ಯಾಬಿನಾ ಮಾತನಾಡಿದ್ದು, ಅವರು ಬೀದಿಗಳನ್ನು ಸ್ವಚ್ಛಗೊಳಿಸುವ ಕಾರ್ಮಿಕರು, ನಾವು ಅವರನ್ನು ಭೇಟಿ ಮಾಡಿ ಎಲ್ಲಾ ದಾಖಲೆಗಳನ್ನು ನಿರ್ವಹಿಸುತ್ತೇವೆ. ನಾವು ಅವರಿಗೆ ವಸತಿ ಒದಗಿಸುತ್ತೇವೆ, ರಕ್ಷಣಾತ್ಮಕ ಬಟ್ಟೆಗಳನ್ನು ಒದಗಿಸುತ್ತೇವೆ, ನಾವು ಎಲ್ಲವನ್ನೂ ನಿರ್ವಹಿಸುತ್ತೇವೆ. ನಾವು ವಸತಿ ನಿಲಯದಿಂದ ಅವರ ಕೆಲಸದ ಸ್ಥಳಕ್ಕೆ ಊಟ ಮತ್ತು ಸಾರಿಗೆಯನ್ನು ಒದಗಿಸುತ್ತೇವೆ ಎಂದು ಹೇಳಿದ್ದಾರೆ.
ವಲಸೆ ಕಾರ್ಮಿಕರಲ್ಲಿ 19 ರಿಂದ 43 ವರ್ಷ ವಯಸ್ಸಿನವರೆಗಿನವರು ಇದ್ದು, ಅವರಲ್ಲಿ ಕೆಲವರು ಭಾರತದಲ್ಲಿ ರೈತರಾಗಿದ್ದವರಾಗಿದ್ದರೆ ಇನ್ನೂ ಕೆಲವರು ತಮ್ಮದೇ ಆದ ವ್ಯವಹಾರಗಳನ್ನು ನಡೆಸುತ್ತಿದ್ದವರು, ವಿವಾಹ ಆಯೋಜಕರು, ಚಾಲಕರು, ವಾಸ್ತುಶಿಲ್ಪಿಗಳು ಆಗಿದ್ದಾರೆ. ಆದರೆ ಒಬ್ಬ ವ್ಯಕ್ತಿ ಮಾತ್ರ ಭಾರತದಲ್ಲಿ ತಾನು ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಸದ್ಯ ಕೊಲೆ ಮಾಡಿಲ್ಲ..! ಓಡಿಹೋದ ಮಗಳ ಪ್ರತಿಕೃತಿಯ ಶವಯಾತ್ರೆ ಮಾಡಿ ಅಂತ್ಯಸಂಸ್ಕಾರ ಮಾಡಿದ ಕುಟುಂಬ
ತಾನು ಸಾಫ್ಟ್‌ವೇರ್ ಇಂಜಿನಿಯರ್ ಎಂದು ಹೇಳಿಕೊಂಡಿರುವ ಮುಕೇಶ್ ಮಂಡಲ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದು, ನನ್ನ ಯೋಜನೆ ವರ್ಷಗಳ ಕಾಳ ರಷ್ಯಾದಲ್ಲಿ ನೆಲೆಸುವುದು. ಸ್ವಲ್ಪ ಹಣ ಮಾಡಿಕೊಂಡು ನನ್ನ ದೇಶಕ್ಕೆ ಮರಳುವುದು. ನಾನು ಕೇವಲ ನನ್ನ ಕೆಲಸ ಮಾಡುತ್ತಿದ್ದೇನೆ. ಇದು ನಿಮ್ಮ ದೇಶ, ನೀವು ಏನು ಮಾಡುತ್ತೀರಿ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಹಾಗೂ ನಾನು ಏನು ಮಾಡುತ್ತಿದ್ದೇನೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಬೀದಿ ಗುಡಿಸುವ ಕೆಲಸಗಾರರಾಗಿ ಏಕೆ ಕೆಲಸ ಮಾಡುತ್ತಿದ್ದೀರಿ ಎಂದು ಕೇಳಿದಾಗ ಪ್ರತಿಕ್ರಿಯಿಸಿದ ಮುಕೇಶ್, ನಾನೊಬ್ಬ ಭಾರತೀಯ, ಭಾರತೀಯರಿಗೆ ಕೆಲಸ ಯಾವುದು ಎಂಬುದು ದೊಡ್ಡ ವಿಚಾರವಲ್ಲ, ಕೆಲಸವೇ ದೇವರು. ನೀವು ಎಲ್ಲಿ ಬೇಕಾದರು ಕೆಲಸ ಮಾಡಬಹುದು. ಟಾಯ್ಲೆಟ್, ಬೀದಿಗಳಲ್ಲಿ ಹೀಗೆ ಎಲ್ಲಿ ಬೇಕಾದರು ಕೆಲಸ ಮಾಡಬಹುದು. ಇದು ನನ್ನ ಕೆಲಸ ಹಾಗೂ ನನ್ನ ಕರ್ತವ್ಯ ಹಾಗೂ ಜವಾಬ್ದಾರಿ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಮಾಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ತಪ್ಪಾಗಿ ಹೊಟೇಲ್ ಕೋಣೆಯ ಬಾಗಿಲು ಬಡಿದವಳ ಹರಿದು ಮುಕ್ಕಿದ ಕಾಮುಕರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ