ಚಲಿಸುವ ಲಾರಿಯಲ್ಲಿ ಅವಿತಿದ್ದ 35ರ ರಷ್ಯಾ ಬಾಲೆ 24ರ ಭಾರತದ ಹುಡುಗ ಅರೆಸ್ಟ್

Published : Jun 08, 2020, 03:33 PM ISTUpdated : Jun 08, 2020, 03:52 PM IST
ಚಲಿಸುವ ಲಾರಿಯಲ್ಲಿ ಅವಿತಿದ್ದ 35ರ ರಷ್ಯಾ ಬಾಲೆ 24ರ ಭಾರತದ ಹುಡುಗ ಅರೆಸ್ಟ್

ಸಾರಾಂಶ

ರಷ್ಯಾದ ಚೆಲುವೆ-ಹಿಮಾಚಲದ ಹುಡುಗ/ ಪೊಲೀಸರ ವಶವಾದ ಪ್ರೇಮಿಗಳು/  ಕ್ವಾರಂಟೈನ್ ನಿಂದ  ಎಸ್ಕೇಪ್ ಆಗಿದ್ದ ಜೋಡಿ/ ಮದುವೆಯಾಗಲು ಟ್ರಕ್ ನಲ್ಲಿ ತೆರಳುತ್ತಿದ್ದರು

ಶಿಮ್ಲಾ(ಜೂ. 08) ಪ್ರಿಯತಮೆಯೊಂದಿಗೆ ಆತನನಿಗೆ ಮದುವೆಯಾಗಬೇಕಿತ್ತು. ಅವಳು ರಷ್ಯಾದ ಚೆಲುವೆ, ಈತ ಹಿಮಾಚಲದ ಹುಡುಗ.

ಹಿಮಾಚಲ ಪ್ರದೇಶದ ಹುಡುಗ ಮತ್ತು ಆಕೆಯ ಪ್ರಿಯತಮೆ ರಷ್ಯಾದ ಹುಡುಗಿಯನ್ನು ಪೊಲೀಸರು ಕಳೆದ ತಿಂಗಳು ಬಂಧಿಸಿದ್ದ ಸುದ್ದಿ ವರದಿಯಾಗಿದೆ. ಶಿಮ್ಲಾದ ದುರ್ಗಾ ವಿಲೇಜ್ ಗೆ ಮದುವೆಯಾಗಲು ಲಾರಿಯೊಂದರಲ್ಲಿ ಸಾಗುತ್ತಿದ್ದ ಜೋಡಿಯನ್ನು ಬಂಧಿಸಲಾಗಿದೆ.

ಕೊರೋನಾ ವೈರಸ್ ಲಾಕ್ ಡೌನ್ ನಿಯಮ ಮುರಿದಿದ್ದೆ ಇವರ ಬಂಧನಕ್ಕೆ ಕಾರಣ. ನೋಯ್ಡಾದಿಂದ ಕುಲುಗೆ ಬಂದ ಜೋಡಿಯನ್ನು ಇಸ್ಟಿಟ್ಯೂಶನಲ್ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಹದಿನಾಲ್ಕು ದಿನಗಳ ಕ್ವಾರಂಟೈನ್ ಮುಗಿದ ಬಳಿಕ ಅವರು ಮದುವೆಯಾಗುವ ಆಲೋಚನೆಯಲ್ಲಿ ಇದ್ದರು.

ಕೊರೋನಾ ತಡೆಗೆ ಕರ್ನಾಟಕ ಸರ್ಕಾರದ ಹೊಸ ಹೆಜ್ಜೆ, ಬಹಳ ಪ್ರಮುಖ

ಮೇ 29 ರಂದೇ ತಮ್ಮ ಮದುವೆ ನೋಂದಣಿ ಮಾಡಿಸಿದ್ದರು. ಸಂಪ್ರದಾಯದಂತೆ ಹುಡುಗನ ತವರಿನಲ್ಲಿ ಮದುವೆಯಾಗ ಬಯಸಿದ್ದರು. ಕೆಫೆಯೊಂದನ್ನು ನಡೆಸಿಕೊಂಡಿರುವ 24 ವರ್ಷದ ಜೀತೇಂದ್ರ ಮತ್ತು 35ರ ರಷ್ಯಾದ ಲಿಡಾ ವೂಲ್ಫ್ ನಡುವೆ ಪ್ರೇಮಾಂಕುರವಾಗಿದೆ. ಲೀಡಾ ಒಬ್ಬರು ಪೇಂಟರ್. ಚಂಡೀಘಡ ಶಿಮ್ಲಾ ಹೆದ್ದಾರಿಯಲ್ಲಿ ಇವರ ಬಂಧನವಾಗಿದೆ. ನೋಯ್ಡಾದಿಂದ ಬರುತ್ತಿದ್ದ ಇವರ ಬಳಿ ಯಾವುದೇ ಪಾಸ್ ಇರಲಿಲ್ಲ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್