ದೇಶದ 820 ಸ್ಮಾರಕಗಳು ಜನರ ವೀಕ್ಷಣೆಗೆ ಮುಕ್ತ-ಮುಕ್ತ!

By Kannadaprabha NewsFirst Published Jun 8, 2020, 11:21 AM IST
Highlights

 ದೇಶದ 820 ಸ್ಮಾರಕಗಳು ಜನರ ವೀಕ್ಷಣೆಗೆ ಮುಕ್ತ-ಮುಕ್ತ!| ಒಟ್ಟು 3691 ಐತಿಹಾಸಿಕ ಸ್ಮಾರಕಗಳು| ಕೇಂದ್ರ ಗೃಹ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತದೆ

ನವದೆಹಲಿ(ಜೂ.08): ಭಾರತೀಯ ಪುರಾತತ್ವ ಇಲಾಖೆ(ಎಎಸ್‌ಐ)ಯ ವ್ಯಾಪ್ತಿಯಲ್ಲಿರುವ 3000ಕ್ಕೂ ಹೆಚ್ಚು ಐತಿಹಾಸಿಕ ಸ್ಮಾರಕಗಳ ಪೈಕಿ 820 ಸ್ಮಾರಕ (ಧಾರ್ಮಿಕ ಕ್ಷೇತ್ರ)ಗಳು ಸೋಮವಾರದಿಂದಲೇ ಜನ ಸಾಮಾನ್ಯರ ವೀಕ್ಷಣೆಗೆ ಮುಕ್ತವಾಗಲಿವೆ.

ಶೇ.98ರಷ್ಜು ವಹಿವಾಟು ಶುರು: ಎಚ್ಚರ...ಕೊರೋನಾ ಇನ್ನೂ ಇದೆ, ಮೈ ಮರೆಯಬೇಡಿ!

ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಾಂಸ್ಕೃತಿಕ ಸಚಿವ ಪ್ರಹ್ಲಾದ್‌ ಪಟೇಲ್‌ ಅವರು, ದೇಶಾದ್ಯಂತ ಒಟ್ಟು 3691 ಐತಿಹಾಸಿಕ ಸ್ಮಾರಕಗಳು ಎಎಸ್‌ಐ ವ್ಯಾಪ್ತಿಯಲ್ಲಿವೆ. ಅವುಗಳ ಪೈಕಿ ಧಾರ್ಮಿಕ ಕ್ಷೇತ್ರಗಳು ಎಂದು ಖ್ಯಾತಿ ಪಡೆದ ಕುತುಬ್‌ ಮಿನಾರ್‌, ನೀಲಾ ಮಸೀದಿ, ಲಾಲ್‌ ಗುಂಬಾಡ್‌ ಸೇರಿ ಇನ್ನಿತರ ಸ್ಮಾರಕಗಳಿಗೆ ಭಕ್ತರ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಕೇಂದ್ರ ಗೃಹ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತದೆ ಎಂದಿದ್ದಾರೆ.

ಕೊರೋನಾ ಲಾಕ್‌ಡೌನ್‌ನಿಂದ ಈ ಎಲ್ಲ ಸ್ಮಾರಕಗಳು ಮಾ.17ರಿಂದಲೂ ಸಾರ್ವಜನಿಕರ ಪ್ರವೇಶಕ್ಕೆ ನಿಷಿದ್ಧವಾಗಿವೆ.

click me!