ಜ್ವರ, ಗಂಟಲು ನೋವು: ಸಿಎಂ ಕೇಜ್ರೀವಾಲ್‌ಗೆ ಕೊರೋನಾ ಟೆಸ್ಟ್!

By Suvarna News  |  First Published Jun 8, 2020, 1:07 PM IST

ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್‌ಗೆ ಅನಾರೋಗ್ಯ| ಜ್ವರ, ಗಂಟಲು ನೋವು ಸಮಸ್ಯೆ, ಕೊರೋನಾ ಟೆಸ್ಟ್‌ಗೆ ಮುಂದಾದ ಸಿಎಂ| ಸಭೆ, ಭೇಟಿ ಎಲ್ಲವೂ ರದ್ದು| 


ನವದೆಹಲಿ(ಜೂ.08): ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್‌ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೇಜ್ರೀವಾಲ್‌ಗೆ ಭಾನುವಾರದಿಂದ ಜ್ವರ ಹಾಗೂ ಗಂಟಲು ನೋವು ಕಾಣಿಸಿಕೊಂಡಿದ್ದು, ಕೊರೋನಾ ಟೆಸ್ಟ್ ನಡೆಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ಭಾನುವಾರ ಮಧ್ಯಾಹ್ನದಿಂದ ನಡೆಯಲಿದ್ದ ಎಲ್ಲಾ ಮೀಟಿಂಗ್‌ಗಳನ್ನು ರದ್ದುಗೊಳಿಸಲಾಗಿದ್ದು, ಯಾರಿಗೂ ಭೇಟಿಯಾಗಲು ಅವಕಾಶ ನೀಡಲಾಗುತ್ತಿಲ್ಲ. ಅವರು ಸದ್ಯ ಐಸೋಲೇಷನ್‌ಗೊಳಪಟ್ಟಿದ್ದಾರೆ.

ಇನ್ನು ಭಾನುವಾರವಷ್ಟೇ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದ ಕೇಜ್ರೀವಾಲ್, ದೆಹಲಿಯ ಸರ್ಕಾರಿ ಹಾಗೂ ಖಾಸಗಿ ಯಾವುದೇ ಆಸ್ಪತ್ರೆಯಾದರೂ ಅಲ್ಲಿ ದೆಹಲಿಗರಿಗಷ್ಟೇ ಚಿಕಿತ್ಸೆ ಸಿಗಲಿದೆ. ಇಲ್ಲಿನ ಕೇಂದ್ರ ಸರ್ಕಾರದಡಿ ಕಾರ್ಯ ನಿರ್ವಹಿಸುವ ಆಸ್ಪತ್ರೆಗಳಲ್ಲಷ್ಟೇ ಹೊರ ರಾಜ್ಯದ ಜನರಿಗೆ ಚಿಕಿತ್ಸೆ ಸಿಗಲಿದೆ ಎಂದಿದ್ದರು. 

Tap to resize

Latest Videos

undefined

ಯಮಪುರಿಯಾದ ದೆಹಲಿ, ಬೆಂಗಳೂರಿನ ಡಿಜೆ ಹಳ್ಳಿಗೇನು ಸಂಬಂಧ?

ಕೇಜ್ರೀವಾಲ್ ಖುದ್ದು ಈ ಘೋಷಣೆ ಮಾಡಿದ್ದರು. ದೆಹಲಿ ಸರ್ಕಾರಕ್ಕೆ ಡಾಕ್ಟರ್ ಮಹೇಶ್ ವರ್ಮಾ ಸಮಿತಿ ಈ ಸಲಹೆ ನೀಡಿದ್ದರು. ಅಲ್ಲದೇ ದೆಹಲಿ ಸರ್ಕಾರ ತನ್ನ ರಾಜ್ಯದ ಜನತೆಯ ಅಭಿಪ್ರಾಯವನ್ನೂ ಸಂಗ್ರಹಿಸಿತ್ತು. 

ದೆಹಲಿಯಲ್ಲಿ ಕೊರೋನಾ ಅಂಕಿ ಅಂಶ

ಇನ್ನು ದೆಹಲಿಯಲ್ಲಿ ಒಟ್ಟು 27,654 ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ 1320 ಹೊಸ ಪ್ರಕರಣಗಳು ದಾಖಲಾಗಿವೆ. ಈವರೆಗೂ ಒಟ್ಟು 761 ಮಂದಿ ಗುಣಮುಖರಾಗಿದ್ದಾರೆ. ಇನ್ನು ದೆಹಲಿಯಲ್ಲಿ  ಸದ್ಯ 219 ಕಂಟೈನ್‌ಮೆಂಟ್ ಝೋನ್‌ಗಳಿದ್ದು, ಅಂಕಿ ಅಂಶಗಳು ಜನರನ್ನು ಆತಂಕ್ಕಕೀಡು ಮಾಡಿವೆ. 

click me!