ಅತ್ತಿಗೆ ಕನಸಿನಲ್ಲಿ ಬಂದಳು ಎಂದು ಸಮಾಧಿ ತೋಡಿದ ಮೈದುನ : ಆಮೇಲಾಗಿದ್ದೇನು ನೋಡಿ

By Anusha Kb  |  First Published Dec 25, 2024, 5:26 PM IST

ಮಧ್ಯಪ್ರದೇಶದಲ್ಲಿ ಒಬ್ಬ ವ್ಯಕ್ತಿ ತನ್ನ ಮೃತ ಅತ್ತಿಗೆ ಕನಸಿನಲ್ಲಿ ಬಂದಳೆಂದು ಆಕೆಯ ಗೋರಿಯನ್ನು ತೋಡಿದ್ದಾನೆ. ಈ ಘಟನೆ ಮಧ್ಯಪ್ರದೇಶದ ಸಿಧಿಯಲ್ಲಿ ನಡೆದಿದೆ.


ನಿದ್ದೆ ಮಾಡಿದ ಮೇಲೆ ಕನಸು ಬೀಳುವುದು ಸಾಮಾನ್ಯ ಸತ್ತವರು ಕನಸಿನಲ್ಲಿ ಬರುವುದೂ ಕೂಡ ಸಾಮಾನ್ಯ.  ಹಾಗಂತ ಸತ್ತವರ ಗೋರಿ ತೋಡಲು ಹೋದರೆ ಹೇಗೆ ಇಲ್ಲೊಬ್ಬ ವ್ಯಕ್ತಿ ರಾತ್ರಿ ಕನಸಿನಲ್ಲಿ ಮೃತಪಟ್ಟಿದ್ದ ಅತ್ತಿಗೆ ಬಂದಳು ಎಂದು ಆಕೆಯ ಗೋರಿಯನ್ನು ತೋಡಲು ಹೋಗಿದ್ದು, ಆತನನ್ನು ಈಗ ಪೊಲೀಸರು ಬಂದಿಸಿದ್ದಾರೆ. ಮಧ್ಯಪ್ರದೇಶದ ಸಿಧಿ ಎಂಬಲ್ಲಿ ಈ ಘಟನೆ ನಡೆದಿದೆ. 

ಒಂದು ತಿಂಗಳ ಹಿಂದೆ ಮೃತಪಟ್ಟ ಅತ್ತಿಗೆ ಕನಸಿನಲ್ಲಿ ಬಂದಳೆಂದು ಆತನ ಮೈದುನ 30 ವರ್ಷದ ಅರ್ಮನ್ ಖಾನ್ ಎಂಬಾತ  ತನ್ನ ಅತ್ತಿಗೆಯನ್ನು ಸಮಾಧಿ ಮಾಡಿದ್ದ ಸ್ಥಳದಲ್ಲಿ ಗೋರಿಯನ್ನು ತೋಡಿದ್ದಾನೆ. ಸಿಧಿಯ ಥನ್ವಾ ತೊಲಾ (Thanahwa Tola) ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸೋದರ ಅರ್ಮನ್ ಖಾನ್ ಕೃತ್ಯವನ್ನು ನೋಡಿದ ಈತನ ಅಣ್ಣ ಅಂದರೆ ಅತ್ತಿಗೆ ಗಂಡ ಅಮಾನತ್‌ ಖಾನ್ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

Tap to resize

Latest Videos

undefined

ಅಮಾನತ್ ಖಾನ್ ಪತ್ನಿ ಶರಿಫುನ್ನಿಶಾ ಒಂದು ತಿಂಗಳ ಹಿಂದೆ ತೀರಿಕೊಂಡಿದ್ದು, ಈಕೆಯ ಗೋರಿಯನ್ನು ಮೈದುನ ಅರ್ಮನ್ ಖಾನ್ ತೋಡಲು ಶುರು ಮಾಡಿದ್ದ.  ಶರಿಫುನ್ನಿಶಾ ನವಂಬರ್ 15 ರಂದು ಅನಾರೋಗ್ಯದಿಂದ ಸಾವನ್ನಪ್ಪಿದ್ದಳು. ಆಕೆಯನ್ನು  ಮನೆ ಸಮೀಪದ ಸ್ಮಶಾನದಲ್ಲಿ ಸಮಾಧಿ ಮಾಡಲಾಗಿತ್ತು. ಡಿಸೆಂಬರ್ 23 ರಂದು ಸ್ಥಳೀಯರು ಯಾರು ಅಮಾನತ್ ಖಾನ್‌ಗೆ ಕರೆ ಮಾಡಿ ನಿಮ್ಮ ಪತ್ನಿಯ ಸಮಾಧಿಯನ್ನು ಯಾರೋ ತೋಡಿದ್ದು, ಮೇಲಿನ ಸಿಮೆಂಟ್ ಸ್ಲಾಬ್‌ನ್ನು ತೆಗೆದು ಹಾಕಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಈ ಮಧ್ಯೆ  ಸೋದರ ಅರ್ಮಾನ್‌ ರಾತ್ರಿಯೆಲ್ಲಾ ಅನುಮಾನಾಸ್ಪದವಾಗಿ ಓಡಾಡಲು ಶುರು ಮಾಡಿದ್ದು, ಹೀಗಾಗಿ ಅನುಮಾನದ ಹಿನ್ನೆಲೆಯಲ್ಲಿ ಆತನಲ್ಲಿ ಪ್ರಶ್ನೆ ಮಾಡಿದ್ದಾಗ ಆತ ಅತ್ತಿಗೆ ಸಮಾಧಿಯನ್ನು ತೋಡಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾನೆ.

ದೂರಿನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಸಮಾಧಿಯ ಒಂದು ಸ್ಲ್ಯಾಬ್ ಅನ್ನು ತೆಗೆದುಹಾಕಲಾಗಿದೆ ಎಂದು ಮಾಹಿತಿ ಸಿಕ್ಕಾಗ, ಇದು ಯಾವುದೋ ಮಾಟಮಂತ್ರಕ್ಕೆ ಸಂಬಂಧಿಸಿದ ಪ್ರಕರಣ ಎಂದು ಅನುಮಾನ ಕಾಡಿತ್ತು. ಹಾಗೂ ಅವರ ಮನೆಯಲ್ಲಿದ್ದ ಗುದ್ದಲಿಯನ್ನು ಕೂಡ ಈ ವೇಳೆ ಪರಿಶೀಲಿಸಿದಾಗ ಅದು ಕಾಣೆಯಾಗಿತ್ತು. ಹೀಗಾಗಿ ಕಿರಿಯ ಸೋದರ ಅರ್ಮನ್‌ ಖಾನ್‌ನನ್ನು ವಿಚಾರಿಸಿದಾಗ ಆತ ತಾನು ಸಮಾಧಿಯನ್ನು ಅಗೆದಿರುವುದನ್ನು ಒಪ್ಪಿಕೊಂಡಿದ್ದ, ಯಾಕೆ ಹೀಗೆ ಮಾಡಿದೆ ಎಂದು ಕೇಳಿದರೆ ಆತ ಆಕೆ ನನ್ನ ಕನಸಿನಲ್ಲಿ ಬರುತ್ತಿದ್ದಾಳೆ ಎಂದು ಹೇಳಿದ್ದಾನೆ. ಈ ಬಗ್ಗೆ ಮತ್ತೆ ಕೇಳಿದಾಗ ಆತ ಅದೇ ಉತ್ತರ ನೀಡಿದ್ದಾನೆ. ಹೀಗಾಗಿ ತಮ್ಮ ನಂಬಿಕೆಗಳಿಗೆ ನೋವುಂಟು ಮಾಡಿದ್ದಕ್ಕೆ ಹಾಗೂ ಮಾಡಬಾರದ ಕೆಲಸ ಮಾಡಿದ್ದಕ್ಕೆ ಆತ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಪ್ರಭಾರಿ ಅಭಿಷೇಕ್ ಉಪಾಧ್ಯಾಯ ಮಾಹಿತಿ ನೀಡಿದ್ದಾರೆ. 

click me!