
ಕೋಲ್ಕತಾ(ಜೂ.13): ಕೊರೋನಾ ಕಾರಣ ಹಲವು ಕುಟುಂಬಗಳು ಕಂಗಲಾಗಿದೆ. ಸಂಗಾತಿಗಳನ್ನು ಕಳೆದುಕೊಂಡು ಹಲವು ಜೀವಗಳು ನೊಂದಿಗೆ. ಹಲವು ಮಕ್ಕಳು ಅನಾಥರಾಗಿದ್ದಾರೆ. ಹೀಗೆ ಕೊರೋನಾ ಸಮಯದಲ್ಲಿ ಪತಿಯ ಅಗಲಿಕೆ ಕೋಲ್ಕತಾದ ಪಾಪರಿ ಚೌಧರಿಯನ್ನು ಮತ್ತಷ್ಟು ನೋವಿನ ಕೂಪಕ್ಕೆ ತಳ್ಳಿದೆ. ಇದೀಗ ಪತ್ನಿ ಪತಿಯ ನೆನಪುಗಳನ್ನು ಭದ್ರವಾಗಿಸಿಕೊಳ್ಳಲು ತನ್ನ ಸರದ ಪೆಂಡೆಂಟ್‌ನಲ್ಲಿ ಪತಿಯ ಚಿತಾಭಸ್ಮವನ್ನು ಭದ್ರವಾಗಿಟ್ಟುಕೊಂಡಿದ್ದಾರೆ.
ಕೊರೋನಾ 2ನೇ ಅಲೆಯಲ್ಲಿ ಅರೂಪ್ ಪ್ರಕಾಶ್ ಚೌಧರಿ ಸೋಂಕು ಕಾಣಿಸಿಕೊಂಡು ಆಸ್ಪತ್ರೆ ದಾಖಲಾಗಿದ್ದರು. ಇತ್ತ ಪತ್ನಿ ಕೂಡ ಕೊರೋನಾ ಕಾರಣ ಕೋಲ್ಕತಾದ ಖಾಸಗಿ ಆಸ್ಪತ್ರೆ ದಾಖಲಾಗಿದ್ದರು. ಇಬ್ಬರು ಬೇರೆ ಬೇರೆ ಕೋಣೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಒಂದು ವಾರದಲ್ಲಿ ಪತ್ನಿ ಪಾಪರಿ ಚೌಧರಿ ಚೇತರಿಸಿಕೊಂಡರೆ, ಪತಿಯ ಆರೋಗ್ಯ ಕ್ಷೀಣಿಸಿತ್ತು.
ದೇಶದಲ್ಲಿ ಮತ್ತೆ ಕೋವಿಡ್ ಸ್ಫೋಟ, ಒಂದೇ ದಿನ ಕೇಸ್ 40% ಏರಿಕೆ!
ಕೊರೋನಾದಿಂದ ಚೇತರಿಸಿಕೊಂಡು ಅದೇ ಆಸ್ಪತ್ರೆಯಲ್ಲಿ ದಾಖಲಾದ ಪತಿ ನೋಡಿಕೊಳ್ಳಲು, ಆರೈಕ ಮಾಡಲು ಸಾಧ್ಯವಾಗಿರಲಿಲ್ಲ. ಕೊರೋನಾ ಕಾರಣ ಯಾರನ್ನೂ ಆಸ್ಪತ್ರೆ ಒಳಗೆ ಬಿಡುತ್ತಿರಲಿಲ್ಲ. ಹೀಗಾಗಿ ಪತಿಯ ಕೊನೆಯ ಸಂಕಷ್ಟದ ದಿನದಲ್ಲಿ ಜೊತೆಗಿರಲು ಸಾಧ್ಯವಾಗಲಿಲ್ಲ ಅನ್ನೋ ಕೊರಗು ಪಾಪರಿ ಚೌಧರಿಗೆ ಈಗಲೂ ಕಾಡುತ್ತಿದೆ. ಇದರ ಜೊತೆ 28 ವರ್ಷಗಳ ಸುಮಧುರ ನೆನಪುಗಳನ್ನು ಭದ್ರವಾಗಿಸಿಕೊಳ್ಳಲು ಪಾಪದಿ ಚೌಧರಿ ಪತಿಯ ಚಿತಾಭಸ್ಮವನ್ನು ಮಾಂಗಲ್ಯ ಸರದ ಪೆಂಡೆಂಟ್‌ನಲ್ಲಿ ಹಾಕಿಸಿಕೊಂಡಿದ್ದಾರೆ.
58 ವರ್ಷದ ಅರೂಪ್ ಪ್ರಕಾಶ್ ಚೌಧರಿ ಅಗಲಿಕೆ ಪಾಪರಿ ಚೌಧರಿಗೆ ತೀವ್ರ ಆಘಾತ ನೀಡಿತ್ತು. ಕಳೆದ ಒಂದು ವರ್ಷದಲ್ಲಿ ನಗುವುದನ್ನೇ ಮರೆತಿದ್ದರು. ಹಣವಿದ್ದರೂ ಪತಿಯನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಕೊರೋನಾ ಕಾರಣ ಆಸ್ಪತ್ರೆಯಲ್ಲಿ ಅವರನ್ನು ಹೇಗೆ ಆರೈಕೆ ಮಾಡಿದ್ದಾರೆ ಅನ್ನೋದು ತಿಳಿದಿಲ್ಲ. ಕೊನೆಯ ಕಾಲದಲ್ಲಿ ನಮಗ್ಯಾಕೆ ಈ ಕಷ್ಟ ಅನ್ನೋ ಕೊರಗಿನಲ್ಲೇ ಪತ್ನಿ ದಿನ ದೂಡಿದ್ದರು.
ಪತಿಯ ಜೊತೆಗಿನ 28 ವರ್ಷಗಳ ದಾಂಪತ್ಯ ಜೀವನದ ನೆನಪುಗಳು ಹಚ್ಚಹಸುರಾಗಿರಲು ಪತಿ ಚಿತಾಭಸ್ಮವನ್ನು ಪೆಂಡೆಂಟ್‌ನಲ್ಲಿ ಇಟ್ಟುಕೊಂಡಿದ್ದಾರೆ. ಪತಿ ನನ್ನೊಂದಿಗೆ ಇದ್ದಾರೆ ಅನ್ನೋ ನಂಬಿಕೆ. ಪ್ರತಿ ದಿನ ಎದ್ದಾಗಲು ಜೀವನವನ್ನೇ ಕಳೆದುಕೊಂಡು ಅನುಭವವಾಗುತ್ತಿತ್ತು. ಪತಿಯ ಚಿತಾಭಸ್ಮದ ಪೆಂಡೆಂಟ್ ಕಾರಣ ಇದೀಗ ಪತಿ ನನ್ನೊಂದಿಗಿದ್ದಾರೆ ಅನ್ನೋ ಭಾವನೆ. ಅದೇ ನಂಬಿಕೆಯೊಂದಿಗೆ ಜೀವನ ಮುನ್ನಡೆಸುತ್ತಿದ್ದೇನೆ ಎಂದು ಪಾಪರಿ ಚೌಧರಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಕೊರೋನಾ ಹೆಚ್ಚಳ, ಇಂದಿನಿಂದ ಮಾಸ್ಕ್ ಕಡ್ಡಾಯ ಮಾಡಿದ ಸರ್ಕಾರ
2020ರಲ್ಲಿ 82 ಲಕ್ಷ ಸಾವು: 1.48 ಲಕ್ಷ ಕೋವಿಡ್‌ಗೆ ಬಲಿ
ದೇಶದಲ್ಲಿ 2020ನೇ ಸಾಲಿನಲ್ಲಿ ಒಟ್ಟು 81.2 ಲಕ್ಷ ಜನರು ಸಾವನ್ನಪ್ಪಿದ್ದು, ಅದರಲ್ಲಿ 1.48 ಲಕ್ಷ ಜನರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಭಾರತದ ರೆಜಿಸ್ಟ್ರಾರ್ ಜನರಲ್ ನೀಡಿದ ಮಾಹಿತಿಯಂತೆ, ‘2019ಕ್ಕೆ ಹೋಲಿಸಿದರೆ 2020ರಲ್ಲಿ ಶೇ 6.2ರಷ್ಟುಸಾವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. 2017ರಲ್ಲಿ 76.4 ಲಕ್ಷ ಸಾವುಗಳು ವರದಿಯಾಗಿದ್ದವು. 2020ರಲ್ಲಿ ದೇಶದಲ್ಲಿ ಕಂಡುಬಂದ ಮೊದಲ ಕೋವಿಡ್ ಅಲೆಯಲ್ಲಿ 1.48 ಲಕ್ಷ ಜನರು ಬಲಿಯಾಗಿದ್ದಾರೆ. ಅದೇ 2021ರಲ್ಲಿ 3.32 ಲಕ್ಷ ಸೋಂಕಿತರು ಮೃತಪಟ್ಟಿದ್ದಾರೆ. ಈವರೆಗೆ ದೇಶದಲ್ಲಿ 5.23 ಲಕ್ಷ ಜನರು ಕೋವಿಡ್‌ಗೆ ಬಲಿಯಾಗಿದ್ದಾರೆ’ ಎಂದು ಅಂಕಿಅಂಶಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ